Coastal Bulletin

ಎಸ್‌ಎಸ್‌ಎಲ್‌ಸಿ , ಪಿಯುಸಿ ಹಾಗೂ ಐಟಿಐ ಪಾಸಾದವರಿಗೆ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 3591 ಟ್ರೇಡ್ ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಫಿಟ್ಟರ್ , ಟರ್ನರ್ , ಎಲೆಕ್ನಿಷಿಯನ್ , ಮೆಕಾನಿಸ್ಟ್ , ಪ್ಲಂಬರ್ , ಪೇಂಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಎಸ್‌ಎಸ್‌ಎಲ್‌ಸಿ , ಪಿಯುಸಿ ಹಾಗೂ ಐಟಿಐ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು .ಜೂನ್ 2021 ಕ್ಕೆ ಅನ್ವಯವಾಗುವಂತೆ ಕನಿಷ್ಠ 15 , ಗರಿಷ್ಠ 24 ವರ್ಷದರಾಗಿರಬೇಕು . ಎಸ್‌ಸಿ , ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ , ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ , ಅಂಗವಿಕಲರಿಗೆ 10 ವರ್ಷಗಳ

ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು.

ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು . ಅರ್ಜಿ ಸಲ್ಲಿಸಲು ಕೊನೆಯ ದಿನ : 24 ಜೂನ್ , 2021.

ವೆಬ್‌ಸೈಟ್‌ 

https://www.rrc-wr.com/


Leave a Comment