Coastal Bulletin

ಯುಗಾದಿ ಬಂದಿದೆ ಯುಗಾದಿ ಬಂದಿದೆ ಬಂದಿದೆ ಯುಗಾದಿ ತಿರುಗಿ!! ಶಿಶಿರನು ಸುಟ್ಟಿಹ ಮರಗಿಡ ತುದಿಯಲಿ ಹೊನ್ನಿನ ಚಿಗುರದು ಮಿನುಗಿ!

ಹೂಗಳ ಅರಳಿಸಿ ಫಲಗಳ ತೂಗಿಸಿ

ಪ್ರಕೃತಿಯು ಬರೆದಿದೆ ಕವಿತೆ!

ಹೊಸ ಹೊಸ ಕನಸಿಗೆ ರೆಕ್ಕೆಯ ತೊಡಿಸುತ

ತೊಡೆದಿದೆ ನೋವಿನ ಚರಿತೆ!!


ಬಗೆ ಬಗೆ ಬಣ್ಣದಿ ಕಳೆಯನು ತಂದಿಹ

ವಸಂತ ವೈಭವ ಇಳೆಗೆ!

ಎಲ್ಲವ ಸವಿದಿಹ ಸಂತಸ ಸಡಗರ 

ಜನಮನ‌ ಮನೆಗಳ ಒಳಗೆ!!


ನಾಳೆಯ ಮರವದು ಬೀಜದಲಡಗಿದೆ

ಭರವಸೆ ಅದು ನಮ್ಮೊಳಗೆ!

ಬೇವಿನ ಜೊತೆಗೆಯೆ ಬೆಲ್ಲದ ಸವಿಯಿದೆ

ಸಮರಸ ಎಲ್ಲರ ಜೊತೆಗೆ!


ಲೇಖನ  -ವಿಶ್ವನಾಥ ಕುಲಾಲ್ ಮಿತ್ತೂರು



Leave a Comment