ಬಂಟ್ವಾಳ :ಏಪ್ರಿಲ್ 2026 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತುಂಬೆ ವಿದ್ಯಾ ಸಂಸ್ಥೆಯಿಂದ 102 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 102 ಮಂದಿ ಉತ್ತೀರ್ಣರಾಗಿ 100% ಫಲಿತಾಂಶ ಸಾಧಿಸಲಾಗಿದೆ. 29 ಮಂದಿ ಡಿಸ್ಟಿಂಕ್ಷನ್, 59 ಮಂದಿ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆಯಲ್ಲಿ 13 ಮಂದಿ ಉತ್ತೀರ್ಣರಾಗಿದ್ದಾರೆ.
ಆಂಗ್ಲ ಮಾಧ್ಯಮ ವಿಭಾಗದಲ್ಲಿ 610 ಅಂಕ ಗಳಿಸಿದ ದರ್ಶಿತ್ ಕೆ ಕುಲಾಲ್ ಶಾಲೆಗೆ ಪ್ರಥಮ ಸ್ಥಾನ
ಪಡೆದಿದ್ದು, ಕನ್ನಡ ಮಾಧ್ಯಮ ವಿಭಾಗದಲ್ಲಿ 559 ಅಂಕ ಗಳಿಸಿದ ಸುಜನ್ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.














