ಬಂಟ್ವಾಳ: ತಾಲೂಕಿನ ಪುದು ಗ್ರಾಮದ ವೈದ್ಯನಾಥ ಕ್ರಿಕೆಟರ್ಸ್ ದೇವರಪಾಲು ಸುಜೀರು ಇದರ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮ ಮೇ. 3 ರಂದು ಸುಜೀರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಸುಜೀರು ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಜತ ಸಂಭ್ರಮದ ಅಂಗವಾಗಿ ಮೇ. 3 ರಂದು ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6 ಗಂಟೆಗೆ ನೃತ್ಯ ಕಾರ್ಯಕ್ರಮ ರಾತ್ರಿ 7 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾಜಕೀಯ, ಸಾಮಾಜಿಕ,ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.ಸಭಾ ವೇದಿಕೆಯಲ್ಲಿ ಹಿರಿಯ ಆಟಗಾರರಿಗೆ, ಹಾಗೂ ಊರಿನ ಹಿರಿಯ ಸಾಧಕರಿಗೆ ಗೌರವ ಅಭಿನಂದನೆ ಸಲ್ಲಿಸಲಾಗುತ್ತದೆ. ರಾತ್ರಿ 8 ಗಂಟೆಗೆ ಸಂಗೀತ
ಲಹರಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.ಬಳಿಕ ಜೋಡು ಜೀಟಿಗೆ ಜಾನಪದ ನಾಟಕ ನಡೆಯಲಿದೆ.
ರಜತ ಸಂಭ್ರಮದ ಪ್ರಯುಕ್ತ ಎ. 26 ರಂದು ಆಹ್ವಾನಿತ 16 ತಂಡಗಳ ಕ್ರಿಕೆಟ್ ಪಂದ್ಯಾಟ ವೈದ್ಯನಾಥ ಟ್ರೋಫಿ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತಂಡದ ಅಧ್ಯಕ್ಷ ಸತೀಶ್ ಮಜಪೆ ಅಧ್ಯಕ್ಷ ರವೀಂದ್ರ ಸುಜೀರು ಕಲ್ಲಾಜೆ , ಪ್ರಧಾನ ಕಾರ್ಯದರ್ಶಿ ರಾಜೇಶ್ ಮೆಜಪೆ, ಕೋಶಾಧಿಕಾರಿ ಸುಶಾಂತ್ ಸಜೀರು ಉಪಸ್ಥಿತರಿದ್ದರು.














