ಬ್ರಹ್ಮರಕೊಟ್ಲು: ಎ.25ರಂದು ಬಿಲ್ಲವ ಬ್ರಿಗೇಡ್ ಅಶ್ರಯದಲ್ಲಿ ಸೇವಾ ಸಂಭ್ರಮ ಕಾರ್ಯಕ್ರಮ. ಮನೆ ಹಸ್ತಾಂತರ ಹಾಗೂ ಸಾಧಕರಿಗೆ ಸನ್ಮಾನ, ಮ್ಯೂಸಿಕಲ್ ಸ್ಟಾರ್ ನೈಟ್

Coastal Bulletin
ಬ್ರಹ್ಮರಕೊಟ್ಲು: ಎ.25ರಂದು ಬಿಲ್ಲವ ಬ್ರಿಗೇಡ್ ಅಶ್ರಯದಲ್ಲಿ ಸೇವಾ ಸಂಭ್ರಮ ಕಾರ್ಯಕ್ರಮ. ಮನೆ ಹಸ್ತಾಂತರ ಹಾಗೂ ಸಾಧಕರಿಗೆ ಸನ್ಮಾನ, ಮ್ಯೂಸಿಕಲ್ ಸ್ಟಾರ್ ನೈಟ್

ಬಂಟ್ವಾಳ :ಬಿಲ್ಲವ ಬ್ರಿಗೇಡ್ (ರಿ.) ಮತ್ತು ನಂದಾದೀಪ ಫೌಂಡೇಶನ್ ಮಂಗಳೂರು, ಇದರ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡಕುಟುಂಬಕ್ಕೆ ಸೂರನ್ನು ಕಲ್ಪಿಸುವ ಬಿಲ್ಲವ ಬ್ರಿಗೇಡ್ (ರಿ.) ಕೇಂದ್ರೀಯ ಮಂಡಳಿ ಇದರ ನಂದಾದೀಪ ವಸತಿ ಯೋಜನೆಯ ಅಡಿಯಲ್ಲಿ 14 ಮತ್ತು 15ನೇ ಮನೆ ಹಸ್ತಾಂತರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ "ಸೇವಾ ಸಂಭ್ರಮ" ಎ.25ರಂದು ಸಂಜೆ 6ರಿಂದ  ಬ್ರಹ್ಮರಕೂಟ್ಟು ಟೋಲ್ ಗೇಟ್ ಬಳಿ ಪಂಬದ ಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದ್ದು ಧಾರ್ಮಿಕ, ಸಾಂಸ್ಕೃತಿಕ, ಸಿನಿಮಾ ಕ್ಷೇತ್ರದ ದಿಗ್ಗಜರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಸದಾನಂದ ಪೂಜಾರಿ ತಿಳಿಸಿದರು.

ಅವರು ಬಿ ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಎ. 23ರಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಮಾಜಮುಖಿ ಕಾರ್ಯಕ್ಕೆ 'ನಂದಾದೀಪ' ಎನ್ನುವ ಟ್ರಸ್ಟನ್ನು ಆರಂಭಿಸಿ ಈ ಮೂಲಕ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.ಬಿಲ್ಲವ ಬ್ರಿಗೇಡ್ ಆರಂಭವಾದ ಬಳಿಕ ಕಡು ಬಡವರಿಗೆ, ಆಸರೆ ಇಲ್ಲದವರಿಗೆ ಈಗಾಗಲೇ 13 ಮನೆಗಳನ್ನು ಕಟ್ಟಿ ಹಸ್ತಾಂತರಿಸಲಾಗಿದ್ದು, 14 ಮತ್ತು 15ನೇ ಮನೆ ಸಿದ್ಧಗೊಂಡಿ-ದೆ. ಅದೆಷ್ಟೋ ಕುಟುಂಬದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಅರ್ಧಕ್ಕೆ ನಿಂತಿದ್ದ ಮನೆಗಳನ್ನು ಪೂರ್ಣಗೊಳಿಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಬಿಲ್ಲವ ಬ್ರಿಗೇಡ್‌ನ ಮೌನ

ಸಾಮಾಜಿಕ ಕ್ರಾಂತಿಯಲ್ಲಿ ಆರ್ಥಿಕವಾಗಿ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಸಹಕಾರವನ್ನು ನೀಡಲಾಗುತ್ತಿದೆ. ಹಾಗೆಯೇ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೇರಿಕಾ, ಲಂಡನ್, ಆಸ್ಟ್ರೇಲಿಯಾದಂತಹ ದೇಶಗಳಿಗೂ ಕಳುಹಿಸಿಕೊಡುವಲ್ಲಿ ಶ್ರಮಿಸುತ್ತಾ ಬಂದಿದೆ. ಕೋವಿಡ್ ಸಮಯದಲ್ಲಿ 4500ಕ್ಕೂ ಅಧಿಕ ಕಿಟ್ ವಿತರಿಸಲಾಗಿದೆ. 700-800 ಯೂನಿಟ್ ರಕ್ತದಾನ ಮಾಡಲಾಗಿದೆ ಎಂದರು. ಮ್ಯೂಸಿಕಲ್ ಸ್ಟಾರ್ ನೈಟ್ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಹೆಸರಾಂತ ಕನ್ನಡ ಹಾಗೂ ತುಳು ಸಿನಿಮಾ ನಟರು ಬಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬುಡಾ ಅಧ್ಯಕ್ಷ ಬೇಬಿ ಕುಂದರ್,ಯಶವಂತ ದೇರಾಜೆ, ಗಣೇಶ ಸುವರ್ಣ ತುಂಬೆ, ಶಿವಪ್ರಸಾದ್ ಕನಪಾಡಿ ಉಪಸ್ಥಿತರಿದ್ದರು.


Leave a Comment