ಮೇಘಶ್ರೀ ಸುರೇಶ್, ಮೈಸೂರು

ನಿಜವಾಗಲೂ ಬಹಳ ಬೇಸರವಾಗುತ್ತಿದೆ, ಇಂದಿನ ನಮ್ಮ ಕರುನಾಡ ಮಕ್ಕಳಲ್ಲಿ, ಯುವಕರಲ್ಲಿ ,ಹಾಗೂ ಬಹು ಸಂಖ್ಯಾ ಕನ್ನಡ ಜನರಿಗೆ ಕನ್ನಡ ಮಾಸಗಳ ಅರಿವು ಇಲ್ಲದಿರುವುದು. ಇದಕ್ಕೆ ಕಾರಣವೇನೆಂದು ಯೋಚಿಸಿದಾಗ ಒಂದು ಮುಖ್ಯ ಅಂಶ ಗಮನಕ್ಕೆ ಬಂದಿತು, ಏನೆಂದರೆ ಒಂದು ಭಾಷೆ ಜೀವಂತವಾಗಿರಬೇಕು, ಎಂದರೆ ಅದು ದಿನನಿತ್ಯ ಬಳಕೆಯಾಗಬೇಕು, ಆದರೆ ನಾವು ಮಾಡುತ್ತಿರುವುದು ಏನು? ಎಲ್ಲಾ ಆಂಗ್ಲಮಯವಾಗಿದೆ ಅಂದರೆ ಮಾಸಗಳು ಮತ್ತು/ ತಿಂಗಳು ಎಂದರೆ ನಾವೆಲ್ಲರೂ ತಕ್ಷಣ ನೋಡುವುದು ಕ್ಯಾಲೆಂಡರ್ ಗಳನ್ನು ಅಂದರೆ /ದಿನಾಂಕ ದಾಖಲಿಸುವ ಪ್ರತಿ ಎಂದರ್ಥ ಆದರೆ ಅಲ್ಲಿ ಬರಿ ಜನವರಿ, ಫೆಬ್ರವರಿ ,ಮಾರ್ಚ್... ಎಂದು ದಾಖಲಾಗಿದೆಯೇ ವಿನಹ ಅಲ್ಲಿ ಕನ್ನಡ ಮಾಸಗಳ ಹೆಸರಿಲ್ಲ ಅಂದರೆ ಚೈತ್ರ ,ವೈಶಾಖ, ಜೇಷ್ಠ... ಎಂದು ,ಒಂದು ಸಂತಸದ ವಿಚಾರ ಏನೆಂದರೆ ಸದ್ಯ ವಾರಗಳ ಹೆಸರನ್ನ ಆದರೂ ಕನ್ನಡದಲ್ಲಿ ಬಳಸುತ್ತಾ ಕ್ಯಾಲೆಂಡರ್ ನಲ್ಲಿ ಜಾಗ ಕೊಟ್ಟಿರುವುದು, ಏನಾದರೂ ಶಾಸ್ತ್ರ ಸಂಪ್ರದಾಯಗಳು ಇಲ್ಲ ವಾಗಿದ್ದರೆ ಸಂಪೂರ್ಣವಾಗಿ ಎಲ್ಲಾ ಇಂಗ್ಲೀಷ್ ಮಯವಾಗುತ್ತಿತ್ತು, ಏಕೆಂದರೆ ಆನೆಪದಲಾದರೂ ವಾರ, ತಿಥಿ, ನಕ್ಷತ್ರ, ಗಳಿಗೆ ನೋಡುತ್ತೇವೆ ಕೆಲವೊಂದು ಊಟ ಆಹಾರ ಕ್ರಮಗಳಲ್ಲಿ ಅಂದ್ರೆ ಉದಾಹರಣೆಗೆ ಶ್ರಾವಣ ಮಾಸದಂದು ಮಾಂಸಹಾರ ತಿನ್ನಬಾರದು, ಹೀಗೆ ಕೆಲವೊಂದು ತಿಂಗಳುಗಳನ್ನ ನೆನಪಿಸಿಕೊಳ್ಳುತ್ತೇವೆ ಈ ರೀತಿಯಾದಂತಹ ವಿಷಯ ವಿಚಾರಗಳನ್ನು ನೋಡಿದರೆ ಎಲ್ಲೋ ಅಲ್ಲಿ ಇಲ್ಲಿ ಒಂದೆರಡು ಮಾಸಗಳ ಹೆಸರು ಸದ್ಯ ಜನರ ಬಾಯಿಯಲ್ಲಿ ಇದೆಯಲ್ಲ ಎಂದು.

ಹೀಗೆಯೇ ಮಾಸಗಳ ಬಳಕೆಯು ಕಡಿಮೆಯಾದರೆ ಪೂರ್ವ ಅಚ್ಚ ಕನ್ನಡ ಮಾಸಗಳು ಹೇಗೆ ಮರೆಯಾದವೋ (ನಾಲ್ಚಳಿ,ಅಯ್ಚಳಿ,ಮೊಬ್ಬೇಸಿಗೆ....)  ಎಂದು ಸದ್ಯ ಚಂದ್ರಮಾನ ಮಾಸಗಳು ಬಳಕೆಯಲ್ಲಿದ್ದು ಮಿತ್ರಾಣ ಸ್ಥಿತಿಯಲ್ಲಿದೆ, ಚೈತ್ರ, ವೈಶಾಖ ,ಜೇಷ್ಠ ...ಈಗಲೂ ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಎಲ್ಲ ಮಾಸಗಳು ಕಣ್ಮರೆಯಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಮುಖ್ಯವಾಗಿ ಜನರಿಗೆ ವೇಗವಾಗಿ ತಲುಪುವ ಮುಖ್ಯ ವಾಹಿನಿ ಎಂದರೆ ಜನರೆಲ್ಲರೂ ದಿನನಿತ್ಯ ಬಳಸುವ ಕ್ಯಾಲೆಂಡರ್ ಗಳಲ್ಲಿ ಜನವರಿ, ಫೆಬ್ರವರಿಯ ಜೊತೆಯಲ್ಲಿ ಕನ್ನಡದ ಮಾಸಗಳ ಹೆಸರನ್ನು ದಾಖಲಿಸಿದರೆ ಅಳಿಸಿ ಹೋಗುತ್ತಿರುವ ಕನ್ನಡ ಮಾಸಗಳ ಹೆಸರು ಉಳಿಯುತ್ತದೆ .ಹಾಗೆಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕಡ್ಡಾಯಗೊಳಿಸಬೇಕು. ಸರ್ವರಿಗೂ ತಲುಪುವಂತೆ ಕ್ಯಾಲೆಂಡರ್ಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ನಮ್ಮ ಗಮನಕ್ಕೆ ಬರುವ

ಎಲ್ಲಾ ಕಡೆಗಳಲ್ಲೂ ಬಳಸುವ ಬರೆಯುವ ಪ್ರಯತ್ನ ಮಾಡಬೇಕು.

ಈಗ ಹೊಸ ವರ್ಷದ ಸಂಭ್ರಮದ ಆನಂದದಲ್ಲಿದ್ದೀವಿ ನಾವೆಲ್ಲ ಇನ್ನಾದರೂ ಹೊಸ ವರ್ಷದ ಕ್ಯಾಲೆಂಡರ್ಗಳಲ್ಲಿ ದಿನಾಂಕ ವಾರಗಳ ಹೆಸರುಗಳ ಜೊತೆಗೆ ಮಾಸಗಳ ಹೆಸರು ಹೊರಬರಬೇಕಾಗಿದೆ ಈಗಲಾದರೂ ಎಲ್ಲರೂ ಎಚ್ಚೆತ್ತು ಕನ್ನಡಾಂಬೆಯ ಸೇವೆ ಮಾಡಬೇಕು. ಹೋರಾಟವೆಂದರೆ ಬರಿ ಘೋಷಣೆಗಳಲ್ಲ ನಮ್ಮೆಲ್ಲರ ಬದಲಾವಣೆಗೆ ಮುಖ್ಯ ಹೋರಾಟ ಹಾಗಾಗಿ ಇದರಲ್ಲಿ ಪ್ರತಿಯೊಬ್ಬ ಕನ್ನಡಿಗರು ಕೈಜೋಡಿಸಿ ಹಾಗೆಯೇ ನಮ್ಮ ಘನವೆತ್ತ ಕರ್ನಾಟಕ ಸರ್ಕಾರವು ಇದರ ಬಗ್ಗೆ ಕಾಳಜಿ ವಹಿಸಿದರೆ ಇನ್ನು ಮುಂದೆಯಾದರೂ ಕನ್ನಡ ಮಾಸಗಳು ಜೀವ ಪಡೆಯಲು  ಸಾಧ್ಯವಾಗುತ್ತದೆ ಕನ್ನಡ ಭಾಷೆ ಯನ್ನು ನಿಜ ಅರ್ಥದಲ್ಲಿ ರಕ್ಷಣೆ ಮಾಡಿದಂತೆ ಆಗುತ್ತದೆ ಏನಿನ್ನುತ್ತೀರಿ. 

ಜೈ ಭುವನೇಶ್ವರಿ ಜೈ ಕನ್ನಡ ಮಾತೆ

Leave a Comment