breaking news

Coastal Bulletin

ಹತ್ತು ಸಾವಿರ ಕೋಟಿ ಹವಾಲಾ ವಹಿವಾಟುಗಳು ನಡೆದಿದೆ ಎಂಬ ಸಂಶಯದ ಮೇರೆಗೆ ಕೊಚ್ಚಿ ಸೇರಿದ0ತೆ ಕೇರಳದ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಇಡಿ ತಪಾಸಣೆಯನ್ನು ನಡೆಸಿದೆ. ಕೊಚ್ಚಿಯ ವ್ಯಾಪಾರ ಸಂಸ್ಥೆಗಳ ನೆಪದಲ್ಲಿ ಪ್ರತಿದಿನ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಹವಾಲಾ ವಹಿವಾಟು ನಡೆಯುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದೆ.

ಕೊಚ್ಚಿಯ ಪ್ರಮುಖ ಶಾಪಿಂಗ್ ಕೇಂದ್ರವಾದ ಪೆನ್ಸಾ ಮೇನಕಾ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ  ಮೊಬೈಲ್ ಆಕ್ಸೆಸರೀಸ್ ಹೋಲ್‌ಸೇಲ್ ಔಟ್‌ಲೆಟ್‌ಗಳು, ಬ್ರಾಡ್‌ವೇನಲ್ಲಿರುವ ಬ್ಯೂಟಿ ಶಾಪ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಸಗಟು ಮಾರಾಟ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಕೇರಳದಲ್ಲಿ ವಿವಿಧ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಹವಾಲ ಆಪರೇಟರ್‌ಗಳ ಮೂಲಕ 10000ಕೋಟಿ ಹೆಚ್ಚು ಹವಾಲ ವಹಿವಾಟು ನಡೆಸಲಾಗಿದೆ ಎಂದು ಇಡಿ ಆರೋಪಿಸಿದೆ. ತಿಂಗಳುಗಟ್ಟಲೆ ರಹಸ್ಯ ತನಿಖೆ ನಡೆಸಿದಬಳಿಕ

ವ್ಯಾಪಾರ ಸಂಸ್ಥೆಗಳ ನೆಪದಲ್ಲಿ ವ್ಯಾಪಕ ಹವಾಲ ವಹಿವಾಟಿ ನಡೆಸುತ್ತಿರುವುದು ಪತ್ತೆಯಾಗಿದೆ. 

ಕಪ್ಪು ಹಣ ಪತ್ತೆಗಾಗಿ ಕೇರಳದಲ್ಲಿ ಇಡಿ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ಇಡಿ ಪ್ರಕಾರ, ಕೊಚ್ಚಿ ರಾಜ್ಯದ ಹವಾಲ ವಹಿವಾಟಿನ ಪ್ರಮುಖ ಕೇಂದ್ರವಾಗಿದೆ. ಕೊಚ್ಚಿಯಲ್ಲಿ ನಡೆಸಿದ ತಪಾಸಣೆ ವೇಳೆ ಕಪ್ಪುಹಣ ವಶಪಡಿಸಿಕೊಳ್ಳಲಾಗಿದೆ ಎಂಬ ಸುಳಿವನ್ನು ಇಡಿ ಅಧಿಕಾರಿಗಳು ನೀಡುತ್ತಿದ್ದಾರೆ. ತಪಾಸಣೆ ಪೂರ್ಣಗೊಂಡ ನಂತರವೇ ಇಡಿಯಿಂದ ಈ ಬಗ್ಗೆ ದೃಢೀಕರಣವನ್ನು ಪಡೆಯಲಾಗುತ್ತದೆ. 


Leave a Comment