ಆದಿಪುರುಷ್ ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಚಿತ್ರದಲ್ಲಿ ಬಳಕೆ ಆದ ಸಂಭಾಷಣೆ, ಪಾತ್ರ ಹಾಗೂ ಕಥೆಯನ್ನು ತಿರುಚಿದ್ದು ವಿವಾದ ಏಳಲು ಪ್ರಮುಖ ಕಾರಣವಾಗಿದೆ. ಹೀಗಿರುವಾಗಲೇ ಸಿನಿಮಾಗೆ ಬ್ಯಾನ್ ಬಿಸಿ ತಟ್ಟುವ ಸೂಚೆ ಎದುರಾಗಿದೆ. ಆದುದರಿಂದ ಈ ಚಿತ್ರವನ್ನು ಥಿಯೇಟರ್ ಹಾಗೂ ಒಟಿಟಿಯಲ್ಲಿ ಬ್ಯಾನ್ ಮಾಡುವಂತೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ನಿರ್ದೇಶಕ ಓಂ ರಾವತ್, ಚಿತ್ರಕಥೆ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಶುಕ್ಲಾ ಹಾಗೂ ಚಿತ್ರದ ನಿರ್ಮಾಪಕ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಈ ರೀತಿಯ ಸಿನಿಮಾಗಳಲ್ಲಿ ಪ್ರಭಾಸ್, ಕೃತಿ ಸನೋನ್ ಹಾಗೂ ಸೈಫ್ ಅಲಿ ಖಾನ್ ನಟಿಸಬಾರದಿತ್ತು. ರಾಮಾಯಣ ಹಾಗೂ ಶ್ರೀರಾಮನ ಬಗ್ಗೆ ಇರುವ ನಂಬಿಕೆಯನ್ನು ನಾಶ ಮಾಡುವ ಸಿನಿಮಾ ಇದು ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಚಿತ್ರ ಥಿಯೇಟರ್ ಹಾಗೂ ಮುಂಬರುವ ದಿನಗಳಲ್ಲಿ
ಒಟಿಟಿಯಲ್ಲಿ ಪ್ರದರ್ಶನ ಕಾಣಬಾರದು ಎಂದು ಕೋರಲಾಗಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಪತ್ರ ಬರೆದಿದೆ. ಆದಿಪುರುಷ್ ಚಿತ್ರದ ಕಥೆ ಹಾಗೂ ಸಂಭಾಷಣೆ ರಾಮ ಹಾಗೂ ಹನುಮಂತನ ವರ್ಚಸ್ಸಿಗೆ ದಕ್ಕೆ ತರುವಂತಿದೆ. ಮಾತ್ರವಲ್ಲ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಸಿನಿಮಾ ಇದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವುಂಟು ಮಾಡುವವ ರೀತಿಯಲ್ಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
















