Coastal Bulletin

ಕೆಟಿಎಂ ಕಂಪೆನಿಯು ಇದೇ ಮೊದಲ ಬಾರಿಗೆ ಭಾರತದಲ್ಲಿ ಕೆಟಿಎಂ 200 ಡ್ಯೂಕ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚರಿಸಿದೆ. ಇದರ ಎಕ್ಸ್ ಶೋರೋಂ ಬೆಲೆ 1.96 ಲಕ್ಷ ರೂ ಇದೆ. ಈ ಡ್ಯೂಕ್ ಬೈಕ್ 200 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 6 ಸ್ವೀಡ್ ಗರ‍್ಬಾಕ್ಸ್, 25 ಪಿಎಸ್ ಪವರ್, ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಈ ಬೈಕ್ ಗಮನಿಸನಹುದಾದ ಒಂದೇ ಒಂದು ಬದಲಾವಣೆ ಎಂದರೆ ಇದಕ್ಕೆ 390 ಡ್ಯೂಕ್‌ನಲ್ಲಿದ್ದ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ. ಇದರಲ್ಲಿ ಹೊಸ ಎಲ್‌ಇಡಿ ಡೇಡೈಮ್ ರನ್ನಿಂಗ್ ಲ್ಯಾಂಪ್ ಕೂಡ ಇದೆ. ಡ್ಯೂಕ್ 390 ಬೈಕ್‌ನಲ್ಲಿ ಯಾವ ಹೆಡ್‌ಲ್ಯಾಂಪ್ ಇದೆಯೋ ಅದೆ ಹೆಡ್‌ಲ್ಯಾಂಪ್ ಇದೆ. ಹೆಡ್‌ಲ್ಯಾಂಪ್‌ಗೆ 32 ಎಲ್‌ಇಡಿ ಅರೇ ಮತ್ತು 6 ರಿಫ್ಲೆಕ್ಟರ್ ಬೀಮ್ ಇದೆ. 

ಕೆಟಿಎಂ 200

ಡ್ಯೂಕ್ ತನ್ನ ವಿನೂತನ ವಿನ್ಯಾಸ, ಅನನ್ಯ ಫೀಚರ್ ಮತ್ತು ರೆಡಿ ಟು ರೇಸ್ ಪರ್ಫಾಮೆನ್ಸ್ ಜತೆಗೆ ಸಂಭ್ರಮಿಸುತ್ತಿದೆ. ಇದೇ ಕಾರಣಕ್ಕೆ ಯುವ ಕೆಟಿಎಂ ಆಸಕ್ತರಿಗೆ ಇದು ಅಚ್ಚುಮೆಚ್ಚಿನ ಬೈಕ್. ಇದೀಗ ಎಲ್‌ಇಡಿ ಹೆಡ್‌ಲ್ಯಾಂಪ್ ಅಪ್‌ಗ್ರೇಸ್ ಮಾಡಿರುವುದರಿಂ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಬೈಕಾಗಿ ಗೋಚರಿಸುತ್ತದೆ ಎಂದು ಬಜಾಜ್ ಅಟೋ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷರಾದ ಸುಮೀತ್ ನಾರಗ್ ಹೇಳಿದರು. 


Leave a Comment