Coastal Bulletin

ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ಉತ್ತರ ಅಟ್ಲಾಂಟಿಕ್‌ನಲ್ಲಿ ಭಾನುವಾರ ನಾಪತ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಐದು ಜನರಿದ್ದ ಸಬ್‌ಮರೈನ್ ಪ್ರವಾಸಿ ನೌಕೆಯನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಜಲಾಂತರ್ಗಾಮಿ ನಾಪತ್ತೆಯಾದ ಸಮಯದಲ್ಲಿ ಅದರಲ್ಲಿ ಯಾವುದೇ ಜನರು ಇದ್ದರೇ ಎಂಬುದು ಪ್ರಸ್ತುತ ತಿಳಿದಿಲ್ಲ ಅಂದರೆ ನಾಪತ್ತೆಯಾದವರ ನಿಖರ ಸಂಖ್ಯೆಯನ್ನೂ ದೃಢಿಕರೀಸಿಲ್ಲ ಎಂದು ಮೂಲಗಳು ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಸಿ, ಸಮುದ್ರದಲ್ಲಿ ಜಲಾಂತರ್ಗಾಮಿ ಎಲ್ಲಿ ನಾಪತ್ತೆಯಾಗಿರಬಹುದು ಎಂಬುದು ಸೃಷ್ಟವಾಗಿಲ್ಲ ಎಂದು ವರದಿ ಮಾಡಿದೆ. ಟೈಟಾನಿಕ್ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ. ಸಬ್‌ಮರ್ಸಿಬಲ್ ಅನ್ನು ಪತ್ತೆಹಚ್ಚಲು

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿಲಾಗಿದೆ.

ಅಮೆರಿಕ ಮತ್ತು ಕೆನಡಾದ ಕೋಸ್ಟ್ಗಾರ್ಡ್ಗಳೊಂದಿಗಿನ ಸಿಬ್ಬಂದಿಗಳು ಕೇಪ್‌ಕಾಡ್‌ನಿಂದ ಪೂರ್ವಕ್ಕೆ 900 ಮೈಲುಗಳಷ್ಟು ಸಮುದ್ರ ಮೇಲ್ಮೈಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನೀರಿನ ಕೆಳಗೆ 13000 ಅಡಿಗಳಷ್ಟು ಅಳದಲ್ಲಿ ಶಬ್ದಗಳನ್ನು ಕೇಳಲು ಸೋನಾರ್ ಅನ್ನು ಬಳಸಿದ್ದಾರೆ.


Leave a Comment