breaking news

Coastal Bulletin

ಕಾಂಗ್ರೆಸ್ ಸರ್ಕಾರದಿಂದ ಬಡವರಿಗೆ ೧೦ ಕೆಜಿ ಅಕ್ಕಿಯನ್ನು ನೀಡಲು ಬಯಸುತ್ತಿದ್ದು ಆದರೆ ಈ ನಿಯಮಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಆದುದರಿಂದ ನಾವು ಬೇರೆ ರಾಜ್ಯದಿಂದ ಅಕ್ಕಿಯನ್ನು ಖರೀದಿ ಮಾಡಿಯಾದರೂ ಬಡವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಿದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅನ್ಯಬಾಗ್ಯ ಯೋಜನೆಗೆ ಆಹಾರ ನಿಗಮ ಅಕ್ಕಿ ನೀಡಲು ನಿರಾಕರಿಸಿದ್ದರೂ ಕೇಂದ್ರದ ಎನ್.ಸಿ.ಎಫ್., ನಾಫೆಡ್‌ನಿಂದ ಹೆಚ್ಚುವರಿ ಅಕ್ಕಿಯನ್ನು ಪಡೆದುಕೊಳ್ಳಲು ನಿರ್ಧರಿಸಿದ್ದೇವೆ. ಒಂದುವೇಳೆ ತಕ್ಷಣಕ್ಕೆ ಹೆಚ್ಚುವರಿ ಅಕ್ಕಿ ಲಭ್ಯವಾಗದಿದ್ದಲಗಲಿ ರಾಗಿ, ಜೋಳ ವಿತರಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಆರು ತಿಂಗಳವಗೆ ರಾಗಿ, ಜೋಳ ಕೊಡುವಷ್ಟು ದಾಸ್ತಾನು

ಲಭ್ಯವಿದ್ದು, ಮೈಸೂರು ಭಾಗದ ಪಡಿತರ ಚೀಟಿದಾರರಿಗೆ ಎರಡು ಕೆಜಿ ರಾಗಿ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ೨ ಕೆಜಿ ಜೋಳ ನೀಡಬಹುದು. ಉಳಿದ ಮೂರು ಕೆಜಿ ಅಕ್ಕಿ ಸೇರಿ ಒಟ್ಟು ೧೦ ಕೆಜಿ ಆಹಾರ ಧಾನ್ಯ ನೀಡುವ ಚಿಂತನೆ ಇದೆ ಎಂದು ಹೇಳಿದರು.


Leave a Comment