ಬಿಡದಿ ಟೌನ್‌ಶಿಪ್‌ಗಾಗಿ 15 ಲಕ್ಷ ಸಸಿ ನೆಡುತ್ತಿದ್ದೇವೆ, ಬಿಜೆಪಿ ರೀತಿ ಇಡೀ ಅಂಡಮಾನ್ ಕಿತ್ತು ಬಿಸಾಕ್ತಿಲ್ಲ: ಪ್ರಿಯಾಂಕ್ ಖರ್ಗೆ

Coastal Bulletin
ಬಿಡದಿ ಟೌನ್‌ಶಿಪ್‌ಗಾಗಿ 15 ಲಕ್ಷ ಸಸಿ ನೆಡುತ್ತಿದ್ದೇವೆ, ಬಿಜೆಪಿ ರೀತಿ ಇಡೀ ಅಂಡಮಾನ್ ಕಿತ್ತು ಬಿಸಾಕ್ತಿಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿಡದಿ ಟೌನ್‌ಶಿಪ್‌ಗಾಗಿ (Bidadi Township) ಸಸಿ ನೆಡುತ್ತಿದ್ದೇವೆ. ಬಿಜೆಪಿ (BJP) ರೀತಿ ಇಡೀ ಅಂಡಮಾನ್ ಅನ್ನೇ ಕಿತ್ತು ಬಿಸಾಕುತ್ತಿಲ್ಲ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.

ಬಿಡದಿ ವಿಚಾರದಲ್ಲಿ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಅರಾವಳಿಯನ್ನೇ ಅದಾನಿ, ಅಂಬಾನಿಗೆ ಮಾರಲು ಹೊರಟಿದ್ದು ಯಾರು? ಜೆಡಿಎಸ್‌ನವರು ರಾಜಸ್ಥಾನ, ಗುಜರಾತ್ ಅಲ್ಲಿ ಪಾದಯಾತ್ರೆ ಮಾಡಲಿ. ನೂರು ಸ್ಮಾರ್ಟ್ ಸಿಟಿ ಮಾಡಲು ಹೊರಟ್ರಲ್ಲ, ಅದು ಹೇಗೆ ಮಾಡಿದ್ರು? ಪರಿಸರವನ್ನ ನಾವು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಅದಕ್ಕೆ ಬೆಂಗಳೂರಲ್ಲೇ ದೊಡ್ಡ ಅಭಿಯಾನ ಮಾಡುತ್ತಿದ್ದೇವೆ. 15 ಲಕ್ಷ ಸಸಿಗಳನ್ನ ನೆಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಹ್ಯಾರಿಸ್ ಹಾಗೂ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಸಸಿ ನೆಡುವ ಕಾರ್ಯ ಆಗುತ್ತಿದೆ. ಅಂಡಮಾನ್‌ಗೆ ಬಿಡದಿಯನ್ನ ಹೋಲಿಕೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸಾಮಾನ್ಯ ಪ್ರಜ್ಞೆ ಇದ್ಯಾ? ಅಂಡಮಾನ್ ಬಯೋ ಡೈವರ್ಸಿಟಿ, ಯೆಕೋ ಡೈವರ್ಸಿಟಿಯಲ್ಲಿ ಶ್ರೀಮಂತವಾಗಿದೆ. ಅಂಡಮಾನ್ ಹಾಗೂ ಬಿಡದಿಗೆ ಅಜಗಜಾಂತರ ವ್ಯತ್ಯಾಸವಿದೆ. ಬ್ರ್ಯಾಂಡ್ ಬೆಂಗಳೂರು ಅಂತ ಜೆಡಿಎಸ್ ಮಾಡಿದಾಗ ಏನು ಮಾಡಿದ್ರಿ? ಜೆಡಿಎಸ್‌ನವರು ನಗರದಲ್ಲಿ ಎಷ್ಟು ಮರ ನೆಟ್ಟಿದ್ದರು? ಉದ್ಯೋಗ ಸೃಷ್ಟಿ ಮಾಡಲೂ ನೀವು ಫೇಲ್ ಆಗಿದ್ರಿ. ಅದಕ್ಕೆ ನಿಮ್ಮ ನಾಯಕತ್ವವನ್ನ ತಿರಸ್ಕರಿಸಿ ನಮಗೆ ಅಶೀರ್ವಾದ ಮಾಡಿರೋದು ಎಂದು ಕಿಡಿಕಾರಿದರು.

ನನ್ನ ಪ್ರಕಾರ 7,500 ಎಕರೆಯಲ್ಲಿ 6 ಸಾವಿರಕ್ಕೂ ಹೆಚ್ಚು ಕನ್ಸೆಂಟ್ ಕೊಟ್ಟಿದ್ದಾರೆ. 1,500 ಎಕರೆ ಉಳಿದರಿರಬೇಕು ಅಷ್ಟೇ. ಜನ ಒಪ್ಪಿಗೆ ಕೊಟ್ಟ ಮೇಲೆ ಮಾತ್ರ ನಾವು ಯೋಜನೆ ಮುಂದುವರೆಸಲು ಆಗುತ್ತದೆ. ಯಾವುದೇ ರೀತಿಯ ದಬ್ಬಾಳಿಕೆ ನಮ್ಮ ಸರ್ಕಾರ ಮಾಡುತ್ತಿಲ್ಲ. ಚನ್ನರಾಯಪಟ್ಟಣದಲ್ಲಿ ಜಮೀನು ಭೂಸ್ವಾಧೀನ ಮಾಡಿದ್ದೆವು, ಅದನ್ನ ವಾಪಸ್ ಕೊಟ್ಟಿದ್ದೆವು. ರೈತರು ವಾಪಸ್ ಕೊಡಿ ಅಂದಾಗ ವಾಪಸ್ ಮಾಡಿದ್ದೆವು. ಈಗ ಅದೇ ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಯಾರೂ ರೈತರ ವಿರುದ್ಧ ಜಬರ್ದಸ್ತಿ ಮಾಡಲು ಆಗಲ್ಲ. ಹೆಚ್ಚಿನ ರೈತರು ನಾವು ಬಿಡದಿಯಲ್ಲಿ ಕೃಷಿಯನ್ನೇ ಮಾಡುತ್ತೇವೆ

ಅಂದರೆ ವಾಪಸ್ ಕೊಡುತ್ತೇವೆ. ಇಲ್ಲ ನಮ್ಮ ಮುಂದಿನ ಪೀಳಿಗೆಗೆ ಕೈಗಾರಿಕೆಗಳು ಬೇಕು ಅಂದರೆ ಸರ್ಕಾರಕ್ಕೆ ಕೊಡುತ್ತಾರೆ ಎಂದರು.

ನಮ್ಮ ರಾಜ್ಯದಲ್ಲಿ ಆರ್ಥಿಕ ಪ್ರಗತಿಯಾಗಬೇಕು. ಬಂಡವಾಳ ಹರಿದುಬರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಿಕೆಯಾಗಬೇಕು. ಕರ್ನಾಟಕ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಅವರ ಮೊದಲ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅದಕ್ಕಾಗಿ ನಾವು ಎಲ್ಲಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಕರಾವಳಿ ಮಾತ್ರವಲ್ಲ ಎಲ್ಲಾ ಪ್ರವಾಸಿ ಕ್ಷೇತ್ರವನ್ನೂ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ಜನ ಸ್ಪಂದನ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಕೆಲಸ ಸಿಎಂ ಮಾಡುತ್ತಿದ್ದಾರೆ. ಜನ ಸಿಎಂ ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಬರೋದು ಬೇಡ. ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಆಡಳಿತ ಸುಧಾರಣೆಗೆ ಸಿಎಂ ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ನುಡಿದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರವಾಗಿ ಮಾತನಾಡಿ, ಸರ್ಕಾರದ ಗ್ಯಾರಂಟಿ ಪರಿಷ್ಕರಣೆ ಕಾರ್ಯ ಸರಿಯಾಗಿದೆ. ಸರ್ಕಾರದ ಉದ್ದೇಶ ಯೋಜನೆ ಅರ್ಹ ಪಲಾನುಭವಿಗಳಿಗೆ ಹೋಗಬೇಕು. ಸರ್ಕಾರದ ಸವಲತ್ತು ಅನರ್ಹರು, ಬೇರೆ ರಾಜ್ಯದವರು, ಬೇರೆ ಬೇರೆ ಖಾತೆಗೆ ಹೋಗುತ್ತಿದೆ, ಅದನ್ನ ತಪ್ಪಿಸಬೇಕಿದೆ. ಅರ್ಹ ಫಲಾನುಭವಿಗಳಿಗಷ್ಟೇ ಗ್ಯಾರಂಟಿ ಹೋಗಬೇಕಿದೆ. ಪರಿಷ್ಕರಣೆಯಲ್ಲಿ ಯಾವುದೇ ತಪ್ಪಿಲ್ಲ ಎಂದರು.

ವಿಜಯೇಂದ್ರ, ಆರ್ ಅಶೋಕ್ ನಾಯಕತ್ವದ ವಿರುದ್ಧ ಅವರ ಶಾಸಕರು ಮತ ಹಾಕಿದ್ದಾರೆ. ಪಾಪ ಯತ್ನಾಳ್ ಹೇಳಿದ್ದು ನಿಜ ಆಯಿತು. ಯತ್ನಾಳ್ ಅವರ ಪರ ವೋಟ್ ಹಾಕಿಲ್ಲ ಅಂದ್ರೇ ಇನ್ನೊಂದು ಕಡಿಮೆಯಾಗುತ್ತಿತ್ತು. ಯತ್ನಾಳ್ ಅವರಿಗೆ ಬಿಜೆಪಿಯವರು ಧನ್ಯವಾದ ತಿಳಿಸಬೇಕು. ವಿಜಯೇಂದ್ರರಿಗೆ ಸಮನ್ಸ್ ನೀಡಿದ್ದಾರಂತೆ. ವಿಜಯೇಂದ್ರಗೆ ವೈಯಕ್ತಿಕ ಸಲಹೆ ಕೊಡುತ್ತಿದ್ದೇನೆ. ವಿಜಯೇಂದ್ರ ದಯವಿಟ್ಟು ದೆಹಲಿಗೆ ಹೋಗಬೇಡಿ. ವಿಜಯೇಂದ್ರ ದೆಹಲಿಗೆ ಹೋದ್ರೇ ಬಿಜೆಪಿ ಹೈಕಮಾಂಡ್ ನಿಮ್ಮ ರಾಜೀನಾಮೆ ಕೇಳುತ್ತಾರೆ ಎಂದು ಲೇವಡಿ ಮಾಡಿದರು.

Leave a Comment