ಇತ್ತೀಚಿಗೆ ಬಿಡುಗಡೆಗೊಂಡ ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ತನ್ವಿ ರಾವ್ ಅವರು ಸೀರಿಯಲ್ ನಿಂದ ಹಿಂದೆ ಸರಿದಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಟ ನಟಿಯರು ಸಿರೀಯಲ್ ಹಿಟ್ ಆಗುತ್ತಿದೆ ಎನ್ನುತ್ತಿದೆ ಅನ್ನುವಾಗಲೇ ಬೇರೆ ಭಾಷೆಗಳಲ್ಲಿ ನಟನೆ ಮಾಡಲು ಜಂಪ್ ಆಗುತ್ತಾರೆ. ಇದಕ್ಕೆ ಉದಾಹರಣೆಗಳು ಸಾಕಷ್ಟೀದೆ. ಅದೇ ರೀತಿಯಲ್ಲಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ದಾರಾವಾಹಿ ಎಲ್ಲರಿಗೂ ಅಚ್ಚುಮೆಚ್ಚು. ಈ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರದಲ್ಲಿಯೂ ಉಳಿದ ಧಾರಾವಾಹಿಗಳಿಗೆ ಪೈಪೋಟಿಯನ್ನು
ನೀಡುತ್ತಿದೆ. ಹೀಗಿರುವಾಗಲೇ ಕೀರ್ತಿ ಪಾತ್ರವನ್ನು ನಿಭಾಯಿಸುತ್ತೀರುವ ತನ್ವಿ ರಾವ್ ಹೊರಬಂದಿದ್ದಾರೆ ಎಂಬ ವದಂತಿಯು ಹಬ್ಬಿಕೊಂಡಿತ್ತು.
ಈ ಮಾತಿಗೆ ಸ್ಪಷ್ಟನೆಯನ್ನು ನೀಡಿದ ಅವರು, ಲಕ್ಷ್ಮೀಬಾರಮ್ಮ ಸೀರಿಯಲ್ ಬಿಡುವಂತ ಯಾವುದೇ ಸಂದರ್ಭ ನನಗೆ ಒದಗಿ ಬಂದಿಲ್ಲ. ನನ್ನ ಕಿರುತೆರೆ ಸೇರಿ ಇತರೆ ವಿಚಾರಗಳ ಬಗ್ಗೆ ನಾನೇ ನಿಮಗೆ ಅಪ್‌ಡೇಟ್ ಮಾಹಿತಿಯನ್ನು ನೀಡುವೆ ಎಂದು ತಿಳಿಸಿದ್ದಾರೆ.















