ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಕಳೆದ 20ವರ್ಷಗಳಿಂದ ಸರಬರಾಜು ಮಾಡುತ್ತಿದ್ದ ಕರ್ನಾಟಕ ಹಾಲು ಒಕ್ಕೂಟದ ಬಳ್ಳಾರಿ ವಿಭಾಗದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಕೆಎಂಎಫ್ ಹಾಲಿನ ಬೆಲೆ ಏರಿಕೆ ಮಾಡಿದ್ದರಿಂದ ತುಪ್ಪದ ದರವನ್ನೂ ಏರಿಸಿದೆ. ದರ ಗೊಂದಲದಿಂದ ಕೆಎಂಎಫ್ ಟಿಟಿಡಿ ಟೆಂಡರ್‌ನಿಂದ ದೂರ ಉಳಿದಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ತಿಳಿಸಿದ್ದಾರೆ.
ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಹಾಲಿನ ಬೇಡಿಕೆಯಿದೆ. ಆದರೆ ಮಾರುಕಟ್ಟೆ ಬೆಲೆಗಿಂತ ಅತೀ ಕಡಿಮೆ ದರಕ್ಕೆ ತುಪ್ಪ ಹಾಗೂ ಹಾಲಿನ ಉಪ ಉತ್ಪನ್ನಗಳನ್ನು ಮಾರಾಟ ಮಾಡಿದರೆ ನಿಗಮಕ್ಕೆ ನಷ್ಟವಾಗಲಿದೆ ಎಂದರು.
ಟಿಟಿಡಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ ವಿಚಾರದಲ್ಲಿ
ರಾಜಕೀಯ ಸದ್ದು ಕೇಳುತ್ತಿತ್ತು. ಆದರೆ ಟಿಟಿಡಿಗೆ ತುಪ್ಪ ಸರಬರಾಜು ಸ್ಥಗಿತ ಆಗಿರೋದು ಇದೇ ಮೊದಲಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಟಿಟಿಡಿಗೆ ತುಪ್ಪ ಸರಬರಾಜು ಆಗಿರಲಿಲ್ಲ, ಈ ಹಿಂದೆಯೂ ಟಿಟಿಡಿಗೆ ಹಲವು ಬಾರಿ ತುಪ್ಪ ಸ್ಥಗಿತವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಸೃಷ್ಟಪಡಿಸಿದ್ದಾರೆ.















