Coastal Bulletin

ಸಕಲೇಶಪುರ :ಪತಿಯ ಸಾವಿನಿಂದ ಮಾನಸಿಕ ಖಿನ್ನತೆಗೆ ಒಳಗಾದ ಪತ್ನಿ ತನ್ನ ಕರುಳಕುಡಿಯನ್ನು ಕೊಂದು ತಾನೂ ಆತ್ಮಹತ್ಯೆಗೈದ ಘಟನೆ ಸಕಲೇಶಪುರ ತಾಲೂಕಿನ ಆನೆಮಹಲ್ ಎಂಬಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಪ್ರಜ್ವಲಾ(26) ಮತ್ತು ಆಕೆಯ ಎರಡು ವರ್ಷದ ಮಗು ಸಾದ್ವಿ ಎಂದು ಗುರುತಿಸಲಾಗಿದೆ.

ಯುವತಿಯ ಪತಿ ಸುರೇಂದ್ರ ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಬಳಿಕ ತೀವ್ರ ಖಿನ್ನತೆಗೆ ಒಳಗಾಗಿದ್ದ ಪ್ರಜ್ವಲಾ ಅವಳನ್ನು ಹೆತ್ತವರು ಸೇರಿ ಆನೆಮಹಲ್ ಗ್ರಾಮದ ಮೋಹನ್ ಎಂಬಾತನ ಜೊತೆಗೆ ಮದುವೆ ಮಾಡಿದ್ದರು.

ಪತಿಯ ಅಗಲಿಕೆಯಿಂದ

ಹೊರಬರದೇ ಅದೇ ಖಿನ್ನತೆಯಲ್ಲಿದ್ದ ಪ್ರಜ್ವಲಾ ಮೊದಲ ಪತಿಯ ಚಿಂತೆಯಲ್ಲೇ ತನ್ನ ಮಗುವನ್ನು ನೇಣಿಗೆ ಹಾಕಿ ತಾನೂ ನೇಣಿ ಕೊರಳೊಡ್ಡಿದ್ದಾಳೆ.ಎರಡನೇ ಗಂಡನ ಮನೆಯಲ್ಲೇ ಯುವತಿ ಈ ಕೃತ್ಯ ಎಸಗಿದ್ದು ಸಕಲೇಶಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment