ಮಂಗಳೂರು :ಲಾಕ್ಡೌನ್ ಕಾನೂನು ಉಲ್ಲಂಘಿಸಿ, ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅದ್ದೂರಿ ಮದುವೆಗೆ ಮಹಾನಗರ ಪಾಲಿಕೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಭಾಸ್ಕರಚಂದ್ರ ಶೆಟ್ಟಿಯ ಪುತ್ರಿಯ ಮದುವೆ ಸೇರಿದಂತೆ ಜೋಡಿಗಳ ಮದುವೆಯನ್ನು ಮಂಗಳಾದೇವಿ ದೇವಸ್ಥಾನದ ಅಂಗಣದಲ್ಲಿರುವ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು.ದೇವಸ್ಥಾನದ ಎದುರಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ನೂರಾರು ಜನರು ಸೇರಿದ್ದು ಇಷ್ಟಾಗುತ್ತಿದ್ದಂತೆ ಬೆಳಗ್ಗೆ ಹತ್ತೂವರೆ
ಸುಮಾರಿಗೆ ಅಧಿಕಾರಿಗಳು ದಾಳಿ ನಡೆಸಿ ಶಿಸ್ತುಕ್ರಮ ಜರುಗಿಸಿದ್ದಾರೆ. ಲಾಕ್ಡೌನ್ ಮಧ್ಯೆ ಮದುವೆ ನಡೆಸುವುದಿದ್ದರೂ 25 ಜನರಿಗೆ ಮೀರದಂತೆ ಸರಳ ಸಮಾರಂಭ ನಡೆಸಬೇಕೆಂಬ ಕಾನೂನನ್ನು ಮುರಿದು ಅದ್ದೂರಿ ಮದುವೆ ನಡೆದಿದ್ದು, ಸಮಾರಂಭದ ಆಯೋಜಕರ ವಿರುದ್ಧ ಅಧಿಕಾರಿಗಳು ದಬಾಯಿಸಿದ ಪ್ರಸಂಗ ನಡೆಯಿತು.














