ಕೊಚ್ಚಿ: ಈ ವರೆಗೆ ಸಿನಿಮಾ ನಟ ನಟಿಯರ ಮನೆಗಳ ಮೇಲೆ ಐಟಿ ದಾಳಿ ಆಗುತ್ತಿತ್ತು ಆದರೆ ಇದೇ ಮೊದಲ ಬಾರಿಗೆ ಕೇರಳದ ಆದಾಯ ತೆರಿಗೆ ಇಲಾಖೆಯು ನಟಿ ಪರ್ಲೆ ಮಾಣಿ ಸೇರಿದಂತೆ 10 ಕ್ಕೂ ಅಧಿಕ ಖ್ಯಾತ ಯುಟ್ಯೂಬರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದೆ. ನಿನ್ನೆಯಷ್ಟೇ ಕೇರಳದ ಕೆಲ ಯೂಟ್ಯೂಬರ್ಸ್ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ತೆರಿಗೆ ವಂಚನೆ ಆರೋಪದ ಅಡಿಯಲ್ಲಿ ಕೆಲ ಯೂಟ್ಯೂಬರ್ಸ್ ವಿರುದ್ದ ಕ್ರಮ ತೆಗೆದುಕೊಳ್ಳಲು ಐಟಿ ಇಲಾಖೆ ಮುಂದಾಗಿದೆ.
ಸುಮಾರು 25 ಕೋಟಿ ರೂಪಾಯಿ ತೆರಿಗೆಯನ್ನು ಯೂಟ್ಯೂಬರ್ಸ್ ವಂಚಿಸಿರುವುದು ಐಟಿ ದಾಳಿ ವೇಳೆ ತಿಳಿದುಬಂದಿದೆ. ಕೆಲ ಯುಟ್ಯೂಬರ್ಸ್ 2 ಕೋಟಿ ರೂಪಾಯಿವರೆಗೂ ತೆರಿಗೆ ಕಟ್ಟಬೇಕಿದೆ. ಆದರೆ ಕೆಲವರು ಇಲ್ಲಿವರೆಗೆ ಒಂದೇ ಒಂದು ರೂಪಾಯಿ ತೆರಿಗೆ ಕಟ್ಟಿಲ್ಲ ಎಂದು ಐಟಿ ಇಲಾಖೆಯು ತಿಳಿಸಿದೆ.
ಐಟಿ ಇಲಾಖೆಯು ತನ್ನ ತೆರಿಗೆ
ತಪಾಸಣೆಯನ್ನು ರಾಜ್ಯದ ಹೆಚ್ಚಿನ ಯುಟ್ಯೂಬರ್ಸ್ ಗೆ ವಿಸ್ತರಿಸುವ ಸುಳಿವು ಸಿಕ್ಕಿದೆ. ಇದುವರೆಗೆ ಐಟಿ ಅಧಿಕಾರಿಗಳು ರಾಜ್ಯದ 13 ಯೂಟ್ಯೂಬರ್ಸ್ ಮನೆ ಮತ್ತು ಕಚೇರಿಗಳನ್ನು ಮಾತ್ರ ಪರಿಶೀಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯುಟ್ಯೂಬರ್ಸ್ ಮನೆಗಳ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.















