ಬಂಟ್ವಾಳ: ಭಾರತೀಯ ಜೀವ ವಿಮಾ ನಿಗಮ ಇದರ ಪ್ರತಿನಿಧಿಗಳ ಸಂಘ (ಲಿಕಾಯ್) ದಕ್ಷಿಣ ಮಧ್ಯ ವಲಯ ಉಪಾಧ್ಯಕ್ಷರಾಗಿ ಲೋಕೇಶ ಶೆಟ್ಟಿ ಧರ್ಮಸ್ಥಳ ಇವರು ಅವಿರೋಧ ಆಯ್ಕೆಯಾಗಿದ್ದಾರೆ.
ವಿಶಾಖಪಟ್ಟಣದಲ್ಲಿ ಈಚೆಗೆ ನಡೆದ ಸಂಘದ ಮಹಾ ಸಮ್ಮೇಳನದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕರ್ನಾಟಕ ಸೇರಿದಂತೆ ಆಂಧ್ರ್ರ ಪ್ರದೇಶ ಮತ್ತು ತೆಲಂಗಾಣ ಹೀಗೆ ಮೂರು ರಾಜ್ಯಗಳ ವ್ಯಾಪ್ತಿಯಲ್ಲಿ ಸಂಘಟನೆ ಬಲಪಡಿಸುವ ಮಹತ್ತರ ಜವಾಬ್ದಾರಿ ಅವಿಭಜಿತ ಜಿಲ್ಲೆಗೆ
ಇದೇ ಪ್ರಥಮ ಬಾರಿಗೆ ಲಭಿಸಿದೆ. ಬಂಟ್ವಾಳ ಭಾರತೀಯ ಜೀವ ವಿಮಾ ನಿಗಮ ಶಾಖೆ ಇದರ ಬೆಳ್ತಂಗಡಿ ಉಪ ಶಾಖೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಲಿಕಾಯ್ ಸಂಘಟನೆ ರಾಜ್ಯಾಧ್ಯಕ್ಷರೂ ಆಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.















