ಪಾಣೆಮಂಗಳೂರು: ಬಂಟವಾಳ ಜೈನ್ ಮಿಲನ ಮಾಸಿಕ ಸಭೆ.

Coastal Bulletin
ಪಾಣೆಮಂಗಳೂರು: ಬಂಟವಾಳ ಜೈನ್ ಮಿಲನ ಮಾಸಿಕ ಸಭೆ.

ಬಂಟ್ವಾಳ :ಬಂಟವಾಳ ಜೈನ್ ಮಿಲನ ಮಾಸಿಕ ಸಭೆಯು ಪಾಣೆಮಂಗಳೂರು ಭಗವಾನ್ 1008 ಶ್ರೀ ಅನಂತನಾಥ ಜಿನ ಚೈತ್ರಾಲಯದಲ್ಲಿ ಆ 21ರ ಶುಕ್ರವಾರ ಜರಗಿತು.

ಅಧ್ಯಕ್ಷತೆಯನ್ನು ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷರಾದ ವೀರ್ ರಾಜೇಂದ್ರ ಜೈನ್ ಇವರು ವಹಿಸಿದ್ದರು. ಇವರು ಪ್ರಸ್ತಾವಿಕ ಮತ್ತು ಮುಖ್ಯ ಅತಿಥಿಗಳ ಸ್ವಾಗತವನ್ನ ಮಾಡಿದರು ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಸುನೀತಾ ಶಾಂತಿಪ್ರಸಾದ್ ವೇಣೂರು, ಅಧ್ಯಕ್ಷರು ಬ್ರಾಹ್ಮಿ ಮಹಿಳಾ  ಸಮಾಜ ಮಾತನಾಡುತ್ತಾ ಕುಟುಂಬದಲ್ಲಿ ಮಹಿಳೆಯ ಪಾತ್ರ ಈ ವಿಷಯದಲ್ಲಿ ಬಹಳ ಅರ್ಥಪೂರ್ಣವಾಗಿ ಮಾತನಾಡಿ ಮಹಿಳೆಯರು ಮನೆಯಲ್ಲಿಯೂ ಆಕಾಶದಲ್ಲಿಯೂ ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ  ಇಂದಿನ ಯುಗದಲ್ಲಿ ಬಹಳ  ಯಶಸ್ವಿಯನ್ನು ಹೊಂದಿದ್ದಾರೆ ಎಂದರು.

ಪೂರ್ವ ಅಧ್ಯಕ್ಷರಾದ ಆದಿರಾಜ ಜೈನ್ ಕೆ ಇವರು  ಮಾತನಾಡುತ್ತಾ ಜೈನ್ ಮಿಲನ್ ಮಾಸಿಕ ಸಭೆಯು ಇಂದಿಗೆ 28 ವರ್ಷಗಳ ಪೂರೈಕೆ ಯಲ್ಲಿ ಯಶಸ್ವಿ ಗಳಿಸಿದೆ ಎಂದು ಹಾರೈಸಿದರು. ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಮಾತನಾಡಿ  ಜೈನ್ ಮಿಲನ್  ಸಂಘಟನೆ ಒಟ್ಟುಗೂಡಿಸುವಲ್ಲಿ ಬಹಳ ಮಹತ್ತರ

ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.

ಮಂಗಳೂರು ವಿಭಾಗ ಕಾರ್ಯದರ್ಶಿ ವೀರ್ ಸುಭಾಷ್ ಚಂದ್ರ ಜೈನ್ ಮಾತನಾಡಿ ಕೆಲವೊಂದು ಮಾಹಿತಿ ನೀಡಿದರು ಜೈನ್ ಮಿಲನ್ ನಿರ್ದೇಶಕರಾದ ವೀರ್ ಜಯರಾಜ್ ಕಂಬ್ಳಿ ಶುಭ ಹಾರೈಸಿದರು ಜೈನ್ ಮಿಲನ್ ಕಾರ್ಯದರ್ಶಿ ಜಯ ಕೀರ್ತಿ ಯವರು ವರದಿ ವಾಚಿಸಿದರು ವೀರಾಂಗನ ಸುವರ್ಣ ಸಿದ್ದಕಟ್ಟೆ ಪ್ರಾರ್ಥನೆ ಮಾಡಿದರು ಧನ್ಯವಾದ ಖಜಾಂಚಿ ವೀರ್ ಪ್ರವೀಣ್ ನಿರ್ವಹಿಸಿದರು.

ಕಾರ್ಯಕ್ರಮ ನಿರೂಪಣೆ ಬಿ ವಿಜಯಕುಮಾರಿ ಇಂದ್ರ ಮಾಡಿದರು ಕೊನೆಯಲ್ಲಿಅತಿಥಿ ಸುನೀತಾ ಶಾಂತಿ ಪ್ರಸಾದ್ ಇವರಿಗೆ ಸನ್ಮಾನ ಮಾಡಲಾಯಿತು ಸನ್ಮಾನದ ಪರಿಚಯವನ್ನು ವೀರಾಂಗನ ಗೀತಾಜಿನ ಚಂದ್ರ ವಾಚಿಸಿದರು ಕಾರ್ಯಕ್ರಮವು ವೀರಾಂಗನ ಮನುಶ್ರೀ ಯವರ ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು. ಸಭೆಯ ಅತೀಥೆಯವನ್ನು ಸ್ವರ್ಗೀಯ ಧನ ಕೀರ್ತಿ ಶೆಟ್ಟಿ ಪರಿವಾರದವರು ವಹಿಸಿದ್ದರು.

Leave a Comment