ಬ್ರಹ್ಮರಕೂಟ್ಲು :ಮಂದಿರದ ಕಾಣಿಕೆ ಡಬ್ಬಿಯ ಹಣ ಕಳವಿಗೆ ಯತ್ನ, ಪ್ರಕರಣ ದಾಖಲು.

Coastal Bulletin
ಬ್ರಹ್ಮರಕೂಟ್ಲು :ಮಂದಿರದ ಕಾಣಿಕೆ ಡಬ್ಬಿಯ ಹಣ ಕಳವಿಗೆ ಯತ್ನ, ಪ್ರಕರಣ ದಾಖಲು.

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಟು ಶ್ರೀ ಮೂಕಾಂಬಿಕಾ ಶ್ರೀ ರಾಮ ಭಜನಾ ಮಂದಿರದ ಕಾಣಿಕೆ ಡಬ್ಬಿಯ ಹಣ ಕದಿಯುಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಇಲ್ಲಿನ ರಾಮ ಭಜನಾ ಮಂದಿರಕ್ಕೆ ಆಡಳಿತ ಸಮಿತಿ ಸದಸ್ಯ ದಿನಕರ ಎಂಬವರು ಮಂದಿರಕ್ಕೆ ಸೀಯಾಳ ಇಡಲೆಂದು ತೆರಳಿದಾಗ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕದಿಯಲು ಯತ್ನಿಸುತ್ತಿದ್ದನು. ಇದನ್ನು ನೋಡಿದ ದಿನಕರ ಅವರು ಮಂದಿರದ ಅಧ್ಯಕ್ಷರಾದ ಕೆ ಶಶಿಧರ ಅವರಿಗೆ ತಿಳಿಸಿದರು, ಅವರು ತಕ್ಷಣ ಪರಿಚಯಸ್ಥರಾದ ರಿಕ್ಷಾ ಚಾಲಕರಾದ ತಾರೇಶ್, ರೂಪೇಶ್ ಹಾಗೂ ರಂಜನ್ ಅವರಿಗೆ ವಿಷಯ ತಿಳಿಸಿ ಅವರೊಂದಿಗೆ ಮಂದಿರಕ್ಕೆ ಹೋಗಿ ಅಪರಿಚಿತ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಪರಿಚಿತ

ಕಳ್ಳ ಮಂದಿರದಿಂದ ಕದ್ದ ಹಣ ಸುಮಾರು 700 ರೂಪಾಯಿ ಎಂದು ಅಂದಾಜಿಸಲಾಗಿದೆ. ಆತನ ಚೀಲದಲ್ಲಿ ಮಂದಿರದ ಹಣವಲ್ಲದೆ ಬೇರೆ ಯಾವುದೋ ದೇವಸ್ಥಾನದಿಂದ ಕದ್ದ ಕಳಶದ ತಂಬಿಗೆ ಹಾಗೂ ಹಿತ್ತಾಳೆಯ ದೇವರ ಮೂರ್ತಿ ಪತ್ತೆಯಾಗಿದೆ. ಕಳ್ಳನು ಕಾಣಿಕೆ ಡಬ್ಬಿಯ ಹಣ ಕದಿಯುವುದು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಕೆ ಶಶಿಧರ ಅವರು ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment