ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದ. ಕ. ಉಡುಪಿ ಜಿಲ್ಲೆ. ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಗ್ರಹಣ ದಿನಾಚರಣೆಯನ್ನು ವಿಟ್ಲ ದ ಐಬಿ ( ನಿರೀಕ್ಷಣಾ ಮಂದಿರ )ಯಲ್ಲಿ ನಡೆಸಲಾಯಿತು.
ವಲಯದ ಹಿರಿಯ ಛಾಯಾ ಗ್ರಾಹಕರಾದ ಕೃಷ್ಣ ಭಟ್ ರವರನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ವಲಯದ ಅಧ್ಯಕ್ಷ ರಾದ ರಾಜೇಂದ್ರ ಕೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಕಟ್ಟದ ಸಮಿತಿ ಅಧ್ಯಕ್ಷ ರಾದ
ಆನಂದ್ ಯಾನ್, ಗೌರವಧ್ಯಕ್ಷರಾದ ಕಿಶೋರ್, ಪ್ರ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ವಲಯದ ಮಾಜಿ ಅಧ್ಯಕ್ಷರು ಗಳು ಹಾಗೂ ಹೆಚ್ಚಿನ ಸದಸ್ಯರುಗಳು ಉಪಸ್ಥಿತರಿದ್ದರು.
ದಯಾನಂದ್ ಬಂಟ್ವಾಳ ಸ್ವಾಗತಿಸಿ, ರಂಜು ಧಾಮ ಧನ್ಯವಾದ ವಿತ್ತರು.













