Coastal Bulletin

ನಾಳೆ ಜೂನ್ 24ರ ಶನಿವಾರ ಮತ್ತು 25 ಭಾನುವಾರದಂದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುವ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಎಸ್. ಆತ್ಮಿ ಗೌಡ ಆಯ್ಕೆಯಾಗಿದ್ದು, ಈಕೆ ಸುಜಿತ್ ಹಾಗೂ ಉಮಾಶ್ರೀ ಪಿ.ಬಿ ದಂಪತಿ ಪುತ್ರಿಯಾಗಿದ್ದಾಳೆ.

ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿ ಅನಂತರ ನಡೆದ ೩ ಸುತ್ತಿನ ಆಡಿಷನ್‌ನಲ್ಲಿ ಭಾಗವಹಿಸಿ ಅವರು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಶೋದಲ್ಲಿ ಪುಟಾಣಿ ಆತ್ಮಿ ಗೌಡ ಜೊತೆಗೆ ತಂದೆ ಸುಜಿತ್ ಹಾಗೂ ತಾಯಿ ಉಮಾಶ್ರೀಯವರೂ ಕಾಣಿಸಿಕೊಳ್ಳಲಿದ್ದಾರೆ. 


ಆತ್ಮಿ ಗೌಡ ಸಂಪ್ಯಾಡಿ ನಿವಾಸಿ ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ಕೆ. ಜೋಗಪ್ಪ ಗೌಡ ಮತ್ತು

ನಿವೃತ್ತ ಶಿಕ್ಷಕಿ ಚಂದ್ರಾವತಿ ದಂಪತಿಯ ಮೊಮ್ಮಗಳು. ರಾಮಕುಂಜ ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್ ಎಲ್‌ಕೆಜಿ ಪುಟಾಣಿ. ಈ ಬಾರಿ ಛೋಟಾ ಚಾಂಪಿಯನ್ ವೇದಿಕೆಯಲ್ಲಿ ಬೆಂಗಳೂರು ಬಾಯ್ಸ್ ಚಿತ್ರ ತಂಡದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿತ್ರ ತಂಡದವರಾದ ಅಭಿಷೇಕ್ ರಾಮ್‌ದಾಸ್, ಚಂದನ್ ಆಚಾರ್, ರೋಹಿತ್ ಭಾನುಪ್ರಕಾಶ್, ವೈನಿಧಿ ಜಗದೀಶ, ಸೋನಿ, ಧರ್ಮವಿಶ್, ವಿಕ್ರಮ್ ಎಲೈಹ್‌ರವರು ಭಾಗವಹಿಸಿ ಮಕ್ಕಳಿಗೆ ಶುಭಹಾರೈಸಿದರು.

Leave a Comment