ಬಂಟ್ವಾಳ :ಕೆನರಾ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಹಾಗೂ ಕಲೆ, ಸಾಂಸ್ಕೃತಿಕ ಸಮಿತಿಯು ಕಾಲೇಜಿನಲ್ಲಿ ಜೂನ್ 21, 2023 ರಂದು ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸವನ್ನು ಆಯೋಜಿಸಿತ್ತು.
ಕಾಲೇಜಿನ ಡೀನ್ ಎಕ್ರೆಡಿಟೇಶನ್ ಡಾ.ಎನ್.ವೆಂಕಟೇಶ್ , ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಪ್ರಿಯಾ ವಿ ಫ್ರಾಂಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಯೋಗ ಕೌಶಲ್ಯವನ್ನು ಪ್ರದರ್ಶಿಸಿದರು. ಡಾ. ಎನ್. ವೆಂಕಟೇಶ್ ಯೋಗದ ಪ್ರಯೋಜನಗಳನ್ನು ವಿವರಿಸಿದರು ಮತ್ತು
ಅದರ ಬೇರುಗಳು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಆಳವಾಗಿವೆ ಎಂಬುದನ್ನು ಪ್ರಸ್ತಾಪಿಸಿದರು.
ಪ್ರಾಂಶುಪಾಲ ಡಾ.ಗಣೇಶ್ ವಿ ಭಟ್ ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು.
ಸಂಯೋಜಕ ನಾರಾಯಣ ಸ್ವಾಮಿ ಆರ್, ಎನ್‌ಎಸ್‌ಎಸ್-ಸಂಯೋಜಕ , ಕಲೆ ಮತ್ತು ಸಾಂಸ್ಕೃತಿಕ ಸಮಿತಿಯ ನವೀನ್ ಎ ಕಲಾಲ್ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.















