ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆಗಳು. ತರಬೇತುದಾರ ರಾಜೇಶ್ ಶ್ರೀಮಾನ್ ಶಿಷ್ಯರಿಗೆ ವಿವಿಧ ವಿಭಾಗಳಲ್ಲಿ ಪ್ರಶಸ್ತಿ.

Coastal Bulletin
ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆಗಳು. ತರಬೇತುದಾರ ರಾಜೇಶ್ ಶ್ರೀಮಾನ್ ಶಿಷ್ಯರಿಗೆ ವಿವಿಧ ವಿಭಾಗಳಲ್ಲಿ ಪ್ರಶಸ್ತಿ.

ಬಂಟ್ವಾಳ :ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರಾಟೆ ಹಾಗೂ ಸ್ಕೇಟಿಂಗ್ ತರಬೇತುದಾರ ರಾಜೇಶ್ ಶ್ರೀಮಾನ್ ಅವರ ವಿದ್ಯಾರ್ಥಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಜಯಿಸಿದ್ದಾರೆ.


ಪ್ರೌಢಶಾಲಾ ಬಾಲಕರ ಅಂಡರ್ 17 ವಯೊಮಿತಿ ವಿಭಾಗದಲ್ಲಿ ಗೀತೇಶ ನೆತ್ತರಕೆರೆ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಹಂಸಿಕಾ ನೆತ್ತರಕೆರೆ ತೃತೀಯ (ಇವರು ಪೊಳಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು) ಪ್ರಾಥಮಿಕ ಬಾಲಕರ ಅಂಡರ್ 14 ವಯೊಮಿತಿ ವಿವಿಧ ವಿಭಾಗದಲ್ಲಿ ರಿಶಾನ್

ಕುಲಾಲ್ ಪ್ರಥಮ ಮತ್ತು ದ್ವಿತೀಯ(ಸೆಂಟ್ ಜೋಸೆಫ್ ಸ್ಕೂಲ್ ಅಡ್ಯಾರ್ ) ಡೆಲ್ವಿನ್ ನೆತ್ತರಕೆರೆ ತೃತೀಯ (ಇನ್ಫೆಂಟ್ ಜೀಸಸ್ ಸ್ಕೂಲ್ ಮೊಡಂಕಾಪು) ಪ್ರಶಸ್ತಿಯನ್ನು ಪಡೆದಿರುತ್ತಾರೆ.

ದ. ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆ ನೆತ್ತರಕೆರೆಯಲ್ಲಿ ಉಚಿತವಾಗಿ ಸ್ಕೇಟಿಂಗ್ ಹಾಗೂ ಕರಾಟೆ  ತರಬೇತಿಯನ್ನು ರಾಜೇಶ್ ಶ್ರೀಮಾನ್ ನೀಡುತ್ತಿದ್ದಾರೆ.

Leave a Comment