ಪತ್ನಿಗೆ ವಿಚ್ಚೇದನ ನೀಡಿದ ಕಿರಿಕ್ ಕೀರ್ತೀ

Coastal Bulletin
ಪತ್ನಿಗೆ ವಿಚ್ಚೇದನ ನೀಡಿದ ಕಿರಿಕ್ ಕೀರ್ತೀ

ಬಿಗ್‌ಬಾಸ್ ಸೀಸನ್ 4, ಜೋಡಿ ನಂಬರ್ 1 ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ನಟ ಹಾಗೂ ನಿರೂಪಕ ಕಿರಿಕ್ ಕೀರ್ತಿ ಪತ್ನಿಯಿಂದ ವಿಚ್ಚೇದನ ಪಡೆದುಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಹತ್ವದ ಘೋಷಣೆ ಮಾಡಿದ್ದಾರೆ. ತಾವು ಹಾಗೂ ಪತ್ನಿ ಅರ್ಪಿತಾ ಬೇರ್ಪಟ್ಟಿರುವುದಾಗಿ ಕಿರಿಕ್ ಕೀರ್ತಿ ತಿಳಿಸಿದ್ದಾರೆ.

ವಿಚ್ಚೇದನ ಕುರಿತು ಮಾಹಿತಿ ನೀಡಿರುವ ಅವರು

ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಹೇಳಿದ್ದಾರೆ.


Leave a Comment