ಬಂಟ್ವಾಳ ತಾಲೂಕು ಹೋಟೆಲ್ ಮಾಲೀಕರ ನೂತನ ಸಂಘಟನೆ ಅಸ್ತಿತ್ವಕ್ಕೆ.

Coastal Bulletin
ಬಂಟ್ವಾಳ ತಾಲೂಕು ಹೋಟೆಲ್ ಮಾಲೀಕರ ನೂತನ ಸಂಘಟನೆ ಅಸ್ತಿತ್ವಕ್ಕೆ.

ಬಂಟ್ವಾಳ ತಾಲೂಕಿನಾದ್ಯಂತ ಹೊಟೇಲ್ ಉದ್ಯಮ ನಡೆಸಿಕೊಂಡು ಬರುತ್ತಾ ಹಸಿದು ಬಾಯಾರಿ ಬಂದಂತಹ ಗ್ರಾಹಕ ಬಂಧುಗಳಿಗೆ ನಗು ಮೊಗದಿ ಬರಮಾಡಿ ಆಥಿತ್ಯದೊಂದಿಗೆ ಹೊಟ್ಟೆ ತಂಪಾಗಿಸುವ ವೃತ್ತಿ ಕಾಯಕ ಮಾಡಿಕೊಂಡು ಬರುತ್ತಿರುವ ಹೊಟೇಲ್ ಮಾಲೀಕರ ಸಂಘಟನೆ ಸ್ಥಾಪಿಸಿ ಹೋಟೆಲಿಗರ ನೋವು ನಲಿವುಗಳಲ್ಲಿ ಪಾಲ್ಗೊಳ್ಳಲುತ್ತಾ ವಿವಿಧ ಸ್ತರಗಳ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಬೇಕೆನ್ನುವ ಧ್ಯೇಯ ಉದ್ದೇಶದೊಂದಿಗೆ ಬಂಟ್ವಾಳ ತಾಲೂಕು ಹೋಟೆಲ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.


ಬಂಟ್ವಾಳ ತಾಲೂಕು ಹೋಟೆಲ್ ಅಸೋಸಿಯೇಷನ್ (BTHA) ಇದರ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲೀಕರಾದ ಚಂದ್ರಹಾಸ ಡಿ. ಶೆಟ್ಟಿಯವರು, ಉಪಾಧ್ಯಕ್ಷರಾಗಿ ಹೋಟೆಲ್ ಮತ್ಸ್ಯ ಸಾಗರ್ ನ ನಾರಾಯಣ್ ಸಿ ಪೆರ್ನೆ, ಕಾರ್ಯದರ್ಶಿ ಅನಿಯಾ ದರ್ಬಾರ್ ನ

ಹಂಝ ಬಸ್ತಿಕೋಡಿ , ಜೊತೆ ಕಾರ್ಯದರ್ಶಿ ಸಂತೋಷ್ ರೈ ಕೋಶಾಧಿಕಾರಿ ಬಿ. ಧರ್ಮೇಂದ್ರ ಬಂಟ್ವಾಳರವರು ಆಯ್ಕೆಯಾಗಿ, ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು..


Leave a Comment