ಭಾರತದ ಮುಸ್ಲಿಂ ಮೂಲತಃ ಹಿಂದೂಗಳು: ಗುಲಾಂ ನಬಿ ಅಜಾದ್

Coastal Bulletin
ಭಾರತದ ಮುಸ್ಲಿಂ ಮೂಲತಃ ಹಿಂದೂಗಳು: ಗುಲಾಂ ನಬಿ ಅಜಾದ್

ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದಯ, ಮುಸ್ಲಿಂರೂ ಹಿಂದೂಗಳಾಗಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೋಗೆಸಿವ್ ಅಜಾದ್ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಇವರ ಈ ಹೇಳಿಕೆಯ ಕುರಿತು ಹಿಂದು ಸಂಘಟನೆಗಳಾದ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಸ್ವಾಗತಿಸಿದೆ. ಗುಲಾಂ ನಬಿ ಆಜಾದ್ ಅವರು ನೀಡಿದ ಹೇಳಿಕೆ ಸಮಂಜಸವಾಗಿದೆ. ಭಾರತದಲ್ಲಿ ಹಿಂದುಗಳನ್ನು ಹೇಗೆ ಇಸ್ಲಾಂ ಹಾಗೂ ಕ್ರೆöÊಸ್ತ ಧರ್ಮಕ್ಕೆ ಮತಾಂತರಗೊಳಿಸಲಾಯಿತು ಎಂಬುದಕ್ಕೆ ಇವರ

ಹೇಳಿಕೆ ಸಾಕ್ಷಿಯಾಗಿದೆ ಎಂದು ಬಜರಂಗದಳ ರಾಷ್ಟ್ರೀಯ ಸಂಚಾಲಕ ನೀರಜ್ ಟೌನೆರಿಯಾ ತಿಳಿಸಿದ್ದಾರೆ. 

ಆಜಾದ್ ತಮ್ಮ ಭಾಷಣದಲ್ಲಿ ಇಸ್ಲಾಂ ಹುಟ್ಟಿದ್ದು೧೫೦೦ ವರ್ಷಗಳ ಹಿಂದೆ. ಭಾರತದಲ್ಲಿ ಯಾರೂ ಹೊರಗಿನವರಲ್ಲ, ನಾವೆಲ್ಲರೂ ಈ ದೇಶಕ್ಕೆ ಸೇರಿದವರು. ಭಾರತದ ಮುಸ್ಲಿಂ ಮೂಲತಃ ಹಿಂದೂಗಳು, ಅನಂತರ ಮತಾಂತರಗೊಂಡಿದ್ದಾರೆ ಎಂದು ಹೇಳಿದ್ದಾರೆ. 


Leave a Comment