ಬಂಟ್ವಾಳ :ಫೋಟೋ ಗ್ರಾಫರ್ಸ್  ವತಿಯಿಂದ ಕ್ಷಯ ರೋಗಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ.

Coastal Bulletin
ಬಂಟ್ವಾಳ :ಫೋಟೋ ಗ್ರಾಫರ್ಸ್  ವತಿಯಿಂದ ಕ್ಷಯ ರೋಗಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ.

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ  ನಗರ ಪ್ರಾಥಮಿಕ  ಆರೋಗ್ಯ ಕೇಂದ್ರ ಬಿ ಮೂಡ ಕೈಕಂಬ ದಲ್ಲಿ ಭಾರತ ಸರಕಾರ ದ ನಿಕ್ಷಯ್ ಮಿತ್ರ ಯೋಜನೆ ಯಡಿಯಲ್ಲಿನ ಕ್ಷಯ ರೋಗಿಗೆ  ಒಂದು ತಿಂಗಳ ಪೌಷ್ಟಿಕ ಆಹಾರ ಸಾಮಗ್ರಿಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ವಲಯದ ಅಧ್ಯಕ್ಷರಾದ  ರಾಜೇಂದ್ರ ಕೆ, ವೈದ್ಯಾಧಿಕಾರಿ ಡಾ. ಅಶ್ವಿನಿ ಬಾಲಕೃಷ್ಣ, ಮಾಜಿ ಅಧ್ಯಕ್ಷ  ದಯಾನಂದ್ ಬಂಟ್ವಾಳ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ  ಹರೀಶ್ ಕುಂದರ್, ಕಾರ್ಯದರ್ಶಿ

ರವಿಕಲ್ಪನೆ , ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ಉಪಾಧ್ಯಕ್ಷರುಗಳಾದ ರೋಷನ್ ಕಲ್ಲಡ್ಕ, ಹರೀಶ್ ನಾಟಿ, ಛಾಯಾ ಕಾರ್ಯದರ್ಶಿ ಪ್ರಶಾಂತ್, ವಿಕೇಶ್  ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment