ಮೇಷ ಸದಾಕಾಲ ಪಕ್ಕದಲ್ಲೇ ಇರುವ ಶತ್ರುಗಳ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಗುಪ್ತಚರ ದಳದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಕಾರ್ಯಭಾರಗಳು ಇರುತ್ತವೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೆಲವು ತ್ಯಾಗಗಳನ್ನು ಮಾಡಬೇಕಾದೀತು. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸರಿಯಾದ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳುವುದು ಉತ್ತಮ.
ವೃಷಭ
ಕುಸ್ತಿಪಟುಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಲಾಭ ಇರುತ್ತದೆ. ಕುಟುಂಬ ವ್ಯವಹಾರದಲ್ಲಿರುವ ಸಂಬಂಧಿಕರು ಮೋಸ ಮಾಡುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಸೋದರರೊಂದಿಗೆ ಇದ್ದ ಮನಃಸ್ತಾಪ ದೂರವಾಗುವ ಸಾಧ್ಯತೆ ಇದೆ. ತೀವ್ರ ಯಾತನೆ ಕೊಡುತ್ತಿದ್ದ ಕಾಯಿಲೆಗಳು ಈಗ ಕಡಿಮೆಯಾಗುವ ಸಾಧ್ಯತೆ ಇದೆ.
ಮಿಥುನ
ಬುದ್ಧಿವಂತಿಕೆಯಿಂದ ಶತ್ರುನಿಗ್ರಹ ಮಾಡಿಕೊಳ್ಳಲು ದಾರಿ ಹುಡುಕುವಿರಿ. ಆಟೊಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸಿದ್ಧಪಡಿಸಿದ ವಸ್ತ್ರಗಳ ವ್ಯಾಪಾರಿಗಳಿಗೆ ಹೆಚ್ಚು ಧನ ಆದಾಯವಿರುತ್ತದೆ. ಹಣದ ಒಳಹರಿವು ಅಗತ್ಯಕ್ಕಿಂತ ಹೆಚ್ಚು ಬರಬಹುದು. ಕುಟುಂಬದ ದಾಖಲೆಗಳನ್ನು ಈಗ ಸರಿಪಡಿಸಿಕೊಳ್ಳಬಹುದು.
ಕಟಕ
ಅತ್ತೆ-ಸೊಸೆಯರ ಸಂಬಂಧಗಳಲ್ಲಿ ಕಾವೇರಿದ ವಾತಾವರಣ ಬರಬಹುದು. ಬಹಳ ದಿನಗಳಿಂದ ನಡೆಯುತ್ತಿದ್ದ ಭೂ ವ್ಯವಹಾರ ಪೂರ್ಣಗೊಂಡು ಸಂಪೂರ್ಣ ಹಣ ಮತ್ತು ದಾಖಲೆ ನಿಮ್ಮ ಕೈ ಸೇರುತ್ತದೆ. ಅಡುಗೆ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುವ ಸಂದರ್ಭವಿದೆ. ನಿಮ್ಮ ವಿರೋಧಿಗಳು ನಿಮ್ಮೊಂದಿಗೆ ರಾಜಿಯಾಗಲು ಈಗ ಸಿದ್ಧರಾಗಿ ಬರುವರು.
ಸಿಂಹ
ಹಲವು ಯೋಜನಾ ಕೆಲಸಗಳಲ್ಲಿ ಮುಂದಾಳತ್ವವಹಿಸಿ ಸಮಸ್ಯೆಗಳನ್ನು ದೂರ ಮಾಡುವಿರಿ. ವ್ಯಾವಹಾರಿಕವಾಗಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಮೀಸಲಿಡುವಿರಿ. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಕಷ್ಟು ಆಸಕ್ತಿ ತೋರುವಿರಿ. ಸಂಗೀತಗಾರರಿಗೆ ಅವರ ಗುರಿಯನ್ನು ತಲುಪಲು ಪೂರಕವಾದ ವಾತಾವರಣ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗಬಹುದು.
ಕನ್ಯಾ
ಈ ವಾರ ಬಹಳ ಬುದ್ಧಿವಂತಿಕೆಯಿಂದ ನಡೆಯುವಿರಿ. ಒಟ್ಟಿನ ವ್ಯವಹಾರದಲ್ಲಿ ಹೆಚ್ಚು ಆದಾಯ ಬರುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲು ತಯಾರಾಗಿರಿ. ರಫ್ತು ವ್ಯವಹಾರ ಮಾಡುವವರಿಗೆ ಸ್ವಲ್ಪ ಅಡೆತಡೆಗಳು ಬರಬಹುದು. ಪ್ರೀತಿ ಪಾತ್ರರೊಂದಿಗೆ ಇಂದಿನ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ಮಾಡುವಿರಿ. ನಿಮ್ಮ ಹಿರಿಯರ ಸಲಹೆಗಳು ಬಹಳ ಅತ್ಯಮೂಲ್ಯವಾಗಿರುತ್ತವೆ.
ತುಲಾ
ವ್ಯಂಗ್ಯಚಿತ್ರ ಕಲಾವಿದರುಗಳಿಗೆ ಹೆಚ್ಚು ಬೇಡಿಕೆ ಬರುವ ಸಾಧ್ಯತೆ ಇದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಕೃಷಿ ಕಾರ್ಮಿಕರಿಗೆ ಬೇಡಿಕೆ
ಹೆಚ್ಚುತ್ತದೆ, ತನ್ಮೂಲಕ ಹೆಚ್ಚು ಸಂಪಾದನೆಯಾಗುತ್ತದೆ. ನಿಮ್ಮ ಮಕ್ಕಳ ನಡವಳಿಕೆ ಬೇಸರ ತರಿಸುತ್ತದೆ. ವಿದ್ಯಾರ್ಥಿಗಳಿಗೆ ಅಲ್ಪಯಶಸ್ಸಿನ ಕಾಲವಾಗಿರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಮುನ್ನಡೆ ಇರುತ್ತದೆ.
ವೃಶ್ಚಿಕ
ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಆಶಿಸುತ್ತಿದ್ದ ಸಾಲ ಸೌಲಭ್ಯಗಳು ದೊರೆಯುತ್ತವೆ. ಹಳೆಯ ಸಾಲಗಳನ್ನು ಈಗ ತೀರಿಸಿ ಋಣಮುಕ್ತರಾಗುವಿರಿ. ಕೆಲವೊಂದು ಗುಂಪು ಚಟುವಟಿಕೆಗಳಲ್ಲಿ ನಿಮ್ಮ ಮುಂದಾಳತ್ವ ಇರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸಿರುತ್ತದೆ. ಮಿತ್ರರ ಹಾಗೂ ಬಂಧುಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಮಗೆ ಅನುಕೂಲ.
ಧನು
ವ್ಯಾಪಾರ-ವ್ಯವಹಾರದಲ್ಲಿ ಇರುವವರು ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾದೀತು. ಸತತ ಪ್ರಯತ್ನದಲ್ಲಿ ಜಯ ನಿಮ್ಮದಾಗುವುದು. ದಾನ ಮಾಡುವ ಮನಸ್ಸು ಹೆಚ್ಚಾಗುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಗುಣಮುಖರಾಗಬಹುದು. ನಿಮ್ಮ ಕೆಲವು ವಿಚಾರಗಳನ್ನು ಯಾರಲ್ಲೂ ಹೇಳಿಕೊಳ್ಳದಿರುವುದು ಉತ್ತಮ.
ಮಕರ
ಕಬ್ಬಿಣದ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಿರುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಧಾರ್ಮಿಕ ಕೆಲಸಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದುವಿರಿ. ಕೃಷಿಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ನಿಮ್ಮ ಕಠಿಣ ನಿರ್ಧಾರಗಳಿಂದ ಹಿಡಿದ ಕೆಲಸವನ್ನು ಸಾಧಿಸುವಿರಿ. ಉಸಿರಾಟದ ಸಮಸ್ಯೆ ಕಾಡಬಹುದು. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ.
ಕುಂಭ
ರೈತರಿಗೆ ಅವರ ಶ್ರಮಕ್ಕೆ ತಕ್ಕ ಫಲ ದೊರೆತು ಸಂತೋಷವಾಗುತ್ತದೆ. ಜಮೀನು ಕೊಡು-ಕೊಳ್ಳುವಿಕೆ ಮಾಡುವವರಿಗೆ ಹೆಚ್ಚಿನ ಆದಾಯ ಇರುತ್ತದೆ. ಪಶುಸಂಗೋಪನೆ ಮಾಡುವವರಿಗೆ ಉತ್ತಮ ಆದಾಯ ಬರುತ್ತದೆ. ಶೀತ ಸಂಬಂಧಿ ಕಾಯಿಲೆಗಳಿರುವವರು ಉಪೇಕ್ಷೆ ಮಾಡಬೇಡಿ. ಚಿಕಿತ್ಸೆಗೆ ಹೋಗುವುದು ಬಹಳ ಉತ್ತಮ. ಮನೆಯ ವಿಸ್ತರಣೆಯ ವಿಚಾರವಾಗಿ ಉತ್ತಮ ಆಲೋಚನೆಗಳು ಗರಿಗೆದರುತ್ತವೆ.
ಮೀನ
ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿ ಗೆಲುವಿನ ನಗೆ ಬೀರುವರು. ನಿಮ್ಮ ಭವಿಷ್ಯದ ಭದ್ರತೆಗಾಗಿ ಹಣ ಕೂಡಿಡುವಿರಿ. ನಿಮ್ಮ ಆಸೆಯಂತೆ ವಸ್ತ್ರಗಳನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಸಂತೋಷಪಡುವರು. ಜಾನಪದ ಸಂಗೀತಗಾರರಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುವ ಸಾಧ್ಯತೆ ಇದೆ.














