ಮೇಷ ನಿರಾಯಾಸವಾಗಿ ಕೆಲಸ ಮಾಡಲು ಸಾಕಷ್ಟು ತಾಳ್ಮೆ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಲು ರಾಜಕೀಯ ವ್ಯಕ್ತಿಗಳ ಶಿಫಾರಸುಗಳನ್ನು ಬಳಸಿಕೊಳ್ಳುವಿರಿ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಕಾಣಬಹುದು.
ವೃಷಭ
ವಿದೇಶಿ ವ್ಯವಹಾರ ಮಾಡುವವರಿಗೆ ಉತ್ತಮ ಪ್ರೋತ್ಸಾಹದ ಜೊತೆಗೆ ಸಲಹೆ ಸೂಚನೆ ದೊರೆಯುತ್ತದೆ. ವ್ಯವಹಾರದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಜಾಣ್ಮೆಯನ್ನು ಬಳಸಿ ಗೆಲ್ಲುವಿರಿ. ಕೌಟುಂಬಿಕ ಸಮಸ್ಯೆಯೊಂದನ್ನು ಬಗೆಹರಿಸಲು ಕರೆ ಬರಬಹುದು, ಎಚ್ಚರದಿಂದ ಭಾಗವಹಿಸಿ.
ಮಿಥುನ
ಲೇವಾದೇವಿ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ಈಗಿನ ಸ್ಥಿತಿಯಲ್ಲಿ ದೊಡ್ಡಮಟ್ಟದ ಲೇವಾದೇವಿ ಖಂಡಿತವಾಗಿ ಬೇಡ. ವಿನಾಕಾರಣ ಮನೆಯವರೊಂದಿಗೆ ದುಡುಕಿ ಮಾತನಾಡುವ ಸಂದರ್ಭವಿದೆ, ತಾಳ್ಮೆವಹಿಸಿರಿ.
ಕಟಕ
ನಿರೀಕ್ಷೆಯಂತೆ ನಿತ್ಯದ ಕಾರ್ಯಗಳು ಸಾಗಿ ನೆಮ್ಮದಿ ಇರುತ್ತದೆ. ಕ್ರೀಡಾಪಟುಗಳಿಗೆ ಬಹಳ ಯಶಸ್ಸು ಸಿಗುವ ಸಾಧ್ಯತೆ ಇದೆ. ನ್ಯಾಯವಾದಿಗಳು ನ್ಯಾಯ ತೀರ್ಮಾನ ಮಾಡುವಲ್ಲಿ ಮುತುವರ್ಜಿವಹಿಸುವುದು ಒಳ್ಳೆಯದು.
ಸಿಂಹ
ಹೊಸ ವಾಹನವೊಂದನ್ನು ಖರೀದಿ ಮಾಡುವ ಸಲುವಾಗಿ ಮಿತ್ರರೊಡನೆ ಚರ್ಚೆ ಮಾಡಲಿದ್ದೀರಿ. ಆದರೆ ದಾಖಲೆ ಪರಿಶೀಲನೆಯನ್ನು ಸರಿಯಾಗಿ ಮಾಡಿ. ಜಮೀನು ಅಥವಾ ನಿವೇಶನವನ್ನು ಖರೀದಿ ಮಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಬೇರೆಯವರ ಸಲಹೆಯಿಂದಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ
ಕನ್ಯಾ
ಬಹುದಿನಗಳಿಂದ ನಡೆಯುತ್ತಿದ್ದ ಚಿತಾವಣೆಯು ಸಾರ್ವಜನಿಕರಿಗೆ ತಿಳಿದು ಅವರು ನಿಮ್ಮ ಮೇಲೆ ಜಗಳಕ್ಕೆ ಬರಬಹುದು. ಇದರಿಂದ ನಿಮ್ಮ ವ್ಯವಹಾರಗಳಲ್ಲಿ ಹಿನ್ನಡೆ ಕಾಣಬಹುದು. ನಿಮಗೆ ಸಾಲ ಕೊಟ್ಟವರು ಸಾಲ ವಾಪಸಾತಿಗಾಗಿ ದುಂಬಾಲು ಬೀಳಬಹುದು.
ತುಲಾ
ಉದ್ಯೋಗದಲ್ಲಿ ಸಾಕಷ್ಟು ಒತ್ತಡವಿದ್ದು ಚಿಂತೆಗೊಳಗಾಗುತ್ತಾರೆ. ಹಣಕಾಸಿನ ವ್ಯವಹಾರವನ್ನು ಮಾಡುವವರಿಗೆ ಸಂಕಷ್ಟಗಳು ಎದುರಾಗಬಹುದು. ಹಿರಿಯರು ತಮ್ಮ ಅಭಿರುಚಿಗೆ ತಕ್ಕಂತೆ ಕೆಲಸ
ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಒಳಿತು, ಇಲ್ಲವಾದಲ್ಲಿ ಕಾವೇರಿದ ಮಾತುಗಳು ಆಗಬಹುದು.
ವೃಶ್ಚಿಕ
ಹಿರಿಯರ ಸಲಹೆ ಬಗ್ಗೆ ನಂಬಿಕೆ ಇಟ್ಟು ನಡೆದಲ್ಲಿ ನಿಮಗೆ ಅನುಕೂಲವಾಗುತ್ತದೆ. ಹೊಸ ಕಾರ್ಯವನ್ನು ಈಗ ಆರಂಭಿಸಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಎಲ್ಲ ಸವಲತ್ತುಗಳು ದೊರೆಯುತ್ತವೆ. ಮಕ್ಕಳಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುವ ಸಾಧ್ಯತೆ ಇದೆ.
ಧನು
ಹೊಸ ಹೊಸ ವಿಚಾರಗಳ ಬಗ್ಗೆ ಹಿರಿಯರೊಡನೆ ಚರ್ಚಿಸಿ ಮುಂದುವರೆಯುವುದರಿಂದ ನಿಮಗೆ ಹೆಚ್ಚು ಅನುಕೂಲ. ಸದಾಚಾರ ಕಾರ್ಯಕ್ರಮಗಳಲ್ಲಿ ಸಾಕಷ್ಟು ಶ್ರದ್ಧೆಯಿಂದ ಭಾಗವಹಿಸುವಿರಿ. ಮಿತ್ರರ ನಡುವಿನ ಹಣದ ವಿಚಾರದ ಮಧ್ಯಸ್ಥಿಕೆಯನ್ನು ಮಾಡುವಾಗ ಗಂಭೀರವಾಗಿ ಆಲೋಚನೆ ಮಾಡಿರಿ.
ಮಕರ
ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಲಸ್ಯ ಸಲ್ಲದು. ದೃಢವಾಗಿ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು. ಬಂಧುಗಳಿಗೆ ಅವರ ತಪ್ಪಿನ ಅರಿವಾಗುವುದರಿಂದ ಇದ್ದ ದ್ವೇಷ ದೂರವಾಗುತ್ತದೆ.
ಕುಂಭ
ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ಲೇವಾದೇವಿ ವ್ಯವಹಾರಸ್ಥರಿಗೆ ಬಾಕಿ ವಸೂಲಿ ಆಗಬಹುದು. ಹಿರಿಯ ವ್ಯಕ್ತಿಗಳ ವಿರುದ್ಧ ಪಿತೂರಿ ಮಾಡುತ್ತಿದ್ದವರ ಬಣ್ಣ ಬಯಲಾಗಲಿದೆ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು.
ಮೀನ
ಬಯಸಿದ ಒಡವೆಯನ್ನು ಈಗ ಕೊಳ್ಳಬಹುದು. ಸರ್ಕಾರಿ ಸೌಲಭ್ಯಗಳು ಈಗ ಸರಾಗವಾಗಿ ನಿಮಗೆ ದೊರೆಯುತ್ತವೆ. ಉದ್ದಿಮೆದಾರರಿಗೆ ಹೊಸ ಯಂತ್ರೋಪಕರಣಗಳನ್ನು ಕೊಳ್ಳುವ ಯೋಗವಿದೆ. ಕಾರ್ಮಿಕರಿಗೆ ಅಧಿಕ ಕೆಲಸದ ಒತ್ತಡವಿರುತ್ತದೆ. ಕಟ್ಟಡ ಕಾರ್ಮಿಕರು ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕು.














