Coastal Bulletin

ಮೇಷ ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಯತ್ನಗಳಿಗೆ ಅಡ್ಡಿ ಎದುರಾದರೂ ಕಾರ್ಯನಿಲ್ಲದೆ ನಿಧಾನವಾಗಿಯಾದರೂ ಮುಂದುವರೆಯುವುದು. ಯಾವುದೇ ವ್ಯಕ್ತಿಯ ಹೊಗಳಿಕೆಗೆ ಮರುಳಾಗುವುದು ಬೇಡ. ನೀವು ಅವಮಾನಿಸಿದ ವ್ಯಕ್ತಿಗಳು, ಕಾದು ನಿಮ್ಮನ್ನೇ ಅವಮಾನಿಸಬಹುದು. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಖರ್ಚು ಸಾಕಷ್ಟು ಕಡಿಮೆ ಮಾಡುವುದು ಉತ್ತಮ.

ವೃಷಭ

ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಮಾತು ಹೆಚ್ಚು ನಡೆಯುತ್ತದೆ ಹಾಗೂ ಪ್ರಮುಖ ಸ್ಥಾನವನ್ನು ಹೊಂದುವ ಅವಕಾಶವಿದೆ. ಹೋಟೆಲ್ ಉದ್ಯಮದವರಿಗೆ ವ್ಯಾಪಾರದಲ್ಲಿ ಏರಿಕೆಯಾಗುವ ಸಂಭವವಿದೆ. ಸಹೋದರಿಯರನ್ನು ಭೇಟಿಯಾಗುವ ಲಕ್ಷಣಗಳಿವೆ. ಸ್ಥಿರಾಸ್ತಿ ಕುರಿತ ನಿಮ್ಮ ನಿರ್ಧಾರಗಳು ಸರಿಯಾಗಿರುತ್ತವೆ. ರಾಜಕೀಯ ವ್ಯಕ್ತಿಗಳಿಗೆ ಅವರ ಪ್ರತಿಸ್ಪರ್ಧಿಗಳಿಂದ ಹೆಚ್ಚಿನ ಹೋರಾಟವಿರಲಿದೆ. 

ಮಿಥುನ

ವ್ಯವಹಾರದಲ್ಲಿ ವಾದ ವಿವಾದಕ್ಕಿಂತ ಸಮಾಧಾನದ ಮಾತುಗಳು ಹೆಚ್ಚು ಫಲ ಕೊಡುತ್ತವೆ. ಸಹೋದರರಿಂದ ನಿಮ್ಮ ಕೆಲವು ಕೆಲಸಗಳಿಗೆ ವಿರೋಧ ವ್ಯಕ್ತವಾಗಬಹುದು. ಆದಾಯದಷ್ಟೇ ಖರ್ಚು ಇದ್ದೇ ಇರುತ್ತದೆ. ನಿಮ್ಮ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿರಿ. ಸಾಂಸಾರಿಕ ವಿಷಯಗಳಲ್ಲಿ ನಿಮ್ಮ ಹಿರಿಯರ ಮಾತನ್ನು ಮೀರದಿರುವುದು ನಿಮಗೆ ಉತ್ತಮ. 

ಕಟಕ

ಈ ವಾರ ಹಣಕ್ಕೆ ಕೊರತೆ ಇಲ್ಲ. ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರ ಆಗುವ ಸಾಧ್ಯತೆಗಳಿವೆ. ಸರ್ಕಾರದ ಕಡೆಯಿಂದ ಬರಬೇಕಿದ್ದ ಎಲ್ಲ ರೀತಿಯ ಸಹಾಯಧನ ಈಗ ಬರುತ್ತದೆ. ಆಸ್ತಿ ವಿಚಾರದಲ್ಲಿ ಅಷ್ಟು ಮುಂದುವರಿಯಲು ಅನುಕೂಲವಿರುವುದಿಲ್ಲ. ವೃತ್ತಿರಂಗದಲ್ಲಿ ತಮ್ಮತನವನ್ನು ಕಾಯ್ದುಕೊಳ್ಳುವುದರಿಂದ ಮುಂದಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. 

ಸಿಂಹ

ರಾಜಕಾರಣಿಗಳಿಗೆ ಸ್ಥಾನ ಬದಲಾವಣೆ ಅಥವಾ ಸ್ಥಾನ ಭದ್ರತೆಯ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇರುತ್ತದೆ. ರೇಷ್ಮೆ ನೇಕಾರರಿಗೆ ಬೇಡಿಕೆ ಬಂದು ಆದಾಯ ಹೆಚ್ಚುತ್ತದೆ. ರೋಗದ ಬಗ್ಗೆ ಇದ್ದ ಸಂಶಯ ದೂರವಾಗಿ ಮನಸ್ಸು ಹಗುರವಾಗುತ್ತದೆ. ಕೂಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಧಾರ್ಮಿಕ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳ ಕಾಣಬಹುದು. 

ಕನ್ಯಾ

ನಿಮ್ಮ ಮಾತುಕತೆಗಳಲ್ಲಿ ಸಂಪೂರ್ಣ ವ್ಯಾವಹಾರಿಕತೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಸೋದರರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಹಿರಿಯರ ಆಸ್ತಿ ವಿಚಾರದಲ್ಲಿ ತಗಾದೆಗಳು ಬರುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯವಿದೆ. ಕಾಲು ನೋವು ಇರುವವರಿಗೆ ನೋವು ಅತಿಯಾಗಿ ಬಾಧಿಸುವ ಲಕ್ಷಣವಿದೆ. 

ತುಲಾ

ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ ಜಾಸ್ತಿಯಾಗಬಹುದು. ಸಾರಿಗೆ ವಾಹನ ಬಳಸಿ ದಿನನಿತ್ಯ ದುಡಿಯುವವರಿಗೆ ಸಂಪಾದನೆ ಜಾಸ್ತಿ ಆಗುವ ಯೋಗವಿದೆ. ನ್ಯಾಯಾಲಯದ ವಿಚಾರಗಳಲ್ಲಿ

ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ನಿಮ್ಮ ಶಕ್ತಿ ಸಾಮರ್ಥ್ಯ ಅರಿತು ಜವಾಬ್ದಾರಿ ವಹಿಸಿಕೊಳ್ಳುವುದು ಬಹಳ ಉತ್ತಮ. ವಿದ್ಯಾರ್ಥಿಗಳ ಶಿಸ್ತುಬದ್ಧ ಅಭ್ಯಾಸ ಅವರಿಗೆ ಉತ್ತಮ ಫಲ ಕೊಡುತ್ತದೆ. 

ವೃಶ್ಚಿಕ

ವೃತ್ತಿಯಲ್ಲಿ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತದೆ. ನಿಮ್ಮ ಶತ್ರುಗಳನ್ನು ಮಟ್ಟಹಾಕಲು ಅವರದೇ ತಂತ್ರಗಳನ್ನು ಬಳಸಬೇಕಾದ ಅಗತ್ಯವಿರುತ್ತದೆ. ಬಹಳ ಕಾಲದಿಂದ ಅಪೇಕ್ಷಿಸುತ್ತಿದ್ದ ವಸ್ತುವೊಂದು ದೊರೆತು ಸಂತಸವಾಗುತ್ತದೆ. ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯ.

ಧನು

ಮನೆ ಬದಲಾಯಿಸುವ ಯೋಚನೆಗೆ ಚಾಲನೆ ಸಿಗುತ್ತದೆ. ಸಿನಿಮಾ ರಂಗದವರಿಗೆ ಅದರಲ್ಲೂ ಸಾಹಸ ಕಲಾವಿದರುಗಳಿಗೆ ಹೆಚ್ಚು ಅವಕಾಶ ದೊರೆಯುತ್ತದೆ. ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ತಾಂತ್ರಿಕತೆಯ ಒಳಗುಟ್ಟುಗಳನ್ನು ಎಲ್ಲರಿಗೂ ತಿಳಿಯುವಂತೆ ಹೇಳುವುದು ಬೇಡ. ಹಣದ ಒಳಹರಿವು ಸಾಮಾನ್ಯವಾಗಿರುವುದರಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಉತ್ತಮ. 

ಮಕರ

ಎಲ್ಲವನ್ನೂ ನೀವು ಕಷ್ಟಪಟ್ಟು ಸಂಪಾದಿಸುವಿರಿ. ಉದ್ಯೋಗದಲ್ಲಿ ಸಮಾಧಾನವಿಲ್ಲದಿದ್ದರೂ ಆರ್ಥಿಕ ತೊಂದರೆ ಇರುವುದಿಲ್ಲ. ಸಾಮಾಜಿಕ ಕೆಲಸಗಳಲ್ಲಿ ಅಪಾರ ಜನಬೆಂಬಲ ದೊರೆತು ಕಾರ್ಯಗಳನ್ನು ಮಾಡಿ ಸಾಧಿಸುವಿರಿ. ಬೇರೆಯವರ ಸಮಸ್ಯೆಗಳಿಗೆ ನೆರವಾಗುವ ನಿಮ್ಮ ಗುಣ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳಲು ನಂಬುಗೆಯ ವ್ಯಕ್ತಿಯೊಬ್ಬನನ್ನು ನೇಮಿಸಿಕೊಳ್ಳುವಿರಿ. 

ಕುಂಭ

ಹಣ ವ್ಯವಹಾರ ಮಾಡುವವರಿಗೆ ನಿರೀಕ್ಷೆಗೂ ಮೀರಿ ಆದಾಯವಿರುತ್ತದೆ. ಹಿರಿಯರು ಸಾಮಾಜಿಕ ಕೆಲಸಗಳಿಂದ ಹೆಚ್ಚು ಗೌರವ ಪಡೆಯುತ್ತಾರೆ. ತೆರಿಗೆ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಆಸ್ಪತ್ರೆ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಬಟ್ಟೆಯ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುವ ಸಾಧ್ಯತೆ ಇದೆ. ಆಸ್ತಿ ಕೊಳ್ಳುವ ಬಗ್ಗೆ ಸರಿಯಾಗಿ ಆಲೋಚನೆಯನ್ನು ಮಾಡಿರಿ. 

ಮೀನ

ಹೈನುಗಾರಿಕೆಯನ್ನು ಮಾಡುವವರಿಗೆ ಆದಾಯ ಸಮತೋಲನವಾಗಿರುವುದು. ಕೃಷಿಕರಿಗೆ ಹೆಚ್ಚು ಆದಾಯ ಬರುವ ಸಾಧ್ಯತೆಯಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಸಂತಸಕ್ಕಾಗಿ ಸಾಕಷ್ಟು ಹಣ ಖರ್ಚು  ಮಾಡುವಿರಿ. ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಸಿಗುವ ಕಾಲವಿದು. 

Leave a Comment