ಮೇಷ ಕೃಷಿ ಯಂತ್ರೋಪಕರಣಗಳನ್ನು ಬಳಸುವವರಿಗೆ ಬರಬೇಕಿದ್ದ ಸಹಾಯಧನ ಈಗ ಬರುತ್ತದೆ. ಎದುರಾದ ಸಮಸ್ಯೆಗಳಿಗೆ ಸ್ನೇಹಿತರಿಂದ ಸೂಕ್ತ ಪರಿಹಾರ ಒದಗಿಬರುತ್ತದೆ. ದೂರ ಪ್ರಯಾಣದಿಂದ ಹೆಚ್ಚಿನ ಖರ್ಚು ಬರುತ್ತದೆ. ವಿದೇಶಿ ಸಂಸ್ಥೆಗಳಲ್ಲಿ ಹೂಡಿದ್ದ ಬಂಡವಾಳ ಈಗ ದೊಡ್ಡಮೊತ್ತವಾಗಿ ವಾಪಸ್ಸು ಬರುತ್ತದೆ.
ವೃಷಭ
ಸಾಲಸೋಲಗಳಿಂದ ಮುಕ್ತರಾಗಿ ನೆಮ್ಮದಿ ದೊರಕುವುದು. ಆದಾಯವು ಸಾಮಾನ್ಯವಾಗಿರುತ್ತದೆ. ರೈತಾಪಿ ವರ್ಗದವರಿಗೆ ಅವರು ಬೆಳೆದ ವಸ್ತುಗಳಿಗೆ ತಕ್ಕ ಬೆಲೆ ದೊರೆಯುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಧನವ್ಯಯವಾಗುತ್ತದೆ. ವಿದ್ಯುತ್ ಉಪಕರಣಗಳ ದುರಸ್ತಿಗಾಗಿ ಹಣ ಖರ್ಚಾಗಬಹುದು.
ಮಿಥುನ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಫಲತೆಯನ್ನು ಕಾಣುವ ಅವಕಾಶವಿದೆ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಹೋಗಿ ಬರುವಿರಿ. ತಂದೆಯಿಂದ ನಿಮ್ಮ ಕೆಲಸಗಳಿಗೆ ಸ್ವಲ್ಪ ಮಟ್ಟಿನ ಧನಸಹಾಯ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ.
ಕಟಕ
ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಿರಿ. ಹೊಸ ಉದ್ಯೋಗದಲ್ಲಿ ನಿಮ್ಮ ಶ್ರದ್ಧೆಯಿಂದ ಹಿರಿಯ ಅಧಿಕಾರಿಗಳ ಗಮನಸೆಳೆಯುವಿರಿ. ನಿಮ್ಮ ಕೈಕೆಳಗಿನ ಕೆಲಸಗಾರರೊಡನೆ ತಾಳ್ಮೆಯಿಂದ ವರ್ತಿಸುವುದು ಬಹಳ ಅಗತ್ಯ. ಖರ್ಚು ವೆಚ್ಚದಲ್ಲಿ ನಿಯಂತ್ರಣವನ್ನು ಸಾಧಿಸಿ ಧನ ನಿರ್ವಹಣೆಯನ್ನು ಮಾಡುವಿರಿ.
ಸಿಂಹ
ಮಾತೃ ವರ್ಗದವರಿಂದ ಧನಸಹಾಯ ದೊರೆತು ನಿಮ್ಮ ಯೋಜಿತ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ವಾಹನ ಚಾಲನೆ ವೇಳೆ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಿರಿ. ಬೆಂಕಿಯೊಂದಿಗೆ ಕೆಲಸ ಮಾಡುವವರು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಬಹಳ ಉತ್ತಮ.
ಕನ್ಯಾ
ವೈಯಕ್ತಿಕ ಜೀವನದಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿಯನ್ನು ಕಾಣಬಹುದು. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಹಿರಿಯ ಮಹಿಳಾಮಣಿಗಳಿಗೆ ಗೌರವಾದರಗಳು ದೊರೆಯುತ್ತವೆ. ಪ್ರತಿಭಾಸಂಪನ್ನರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ.
ತುಲಾ
ಗೃಹ ನಿರ್ಮಾಣಕಾರ್ಯದಲ್ಲಿ ಇದ್ದ ತೊಡಕುಗಳು ನಿವಾರಣೆಯಾಗಿ ಪ್ರಗತಿಯನ್ನು ಕಾಣಬಹುದು. ಹಣದ ಹರಿವು ಕಡಿಮೆ
ಇದ್ದರೂ ಆತಂಕಗೊಳ್ಳುವ ಪರಿಸ್ಥಿತಿ ಇರುವುದಿಲ್ಲ. ಮಹಿಳಾ ಕಲಾವಿದರುಗಳಿಗೆ ಉತ್ತಮ ಪ್ರೋತ್ಸಾಹ ದೊರೆತು ಆದಾಯ ಹೆಚ್ಚುತ್ತದೆ.
ವೃಶ್ಚಿಕ
ವೃತ್ತಿ ಜೀವನದ ಸಮಸ್ಯೆಗಳಿಗೆ ಅಲ್ಪಮಟ್ಟಿನ ಪರಿಹಾರ ದೊರೆಯುತ್ತದೆ. ಹೋಟೆಲ್ ಉದ್ದಿಮೆದಾರರಿಗೆ ಸರ್ಕಾರದ ಕಡೆಯಿಂದ ಹಿತಕರ ಸಂದೇಶವೊಂದು ಬರುತ್ತದೆ. ಹೊಸ ವಾಹನ ಮಾರಾಟ ಮಾಡುವವರಿಗೆ ಮಾರಾಟದಲ್ಲಿ ಪ್ರಗತಿ ಇರುತ್ತದೆ. ಕುಟುಂಬ ಸಮೇತ ಸಂತೋಷದ ವಿಹಾರಕ್ಕಾಗಿ ಪ್ರಯಾಣ ಬೆಳೆಸುವಿರಿ. ಕೃಷಿಕರಿಗೆ ನಿರೀಕ್ಷಿತ ಆದಾಯ ಬಂದು ಸಂತೋಷವಾಗುತ್ತದೆ.
ಧನು
ಮಕ್ಕಳಿಂದ ನಿಮಗೆ ಧನಸಹಾಯ ಬರುತ್ತದೆ. ಮೂಳೆ ನೋವು ಸ್ವಲ್ಪ ಹೆಚ್ಚಾಗಬಹುದು. ದೈನಂದಿನ ಚಟುವಟಿಕೆಗಳಲ್ಲಿ ಸಾಕಷ್ಟು ಉತ್ಸಾಹವನ್ನು ಕಾಣಬಹುದು. ಆಶಿಸಿದ್ದ ದೇವತಾ ದರ್ಶನವನ್ನು ಮಾಡುವ ಯೋಗವಿದೆ. ಸಮಾಲೋಚನೆ ನಡೆಸಿ ಮಾಡಿಕೊಂಡ ಒಪ್ಪಂದದ ಹಣದ ವ್ಯವಹಾರಗಳಲ್ಲಿ ಲಾಭ ಕಾಣಬಹುದು.
ಮಕರ
ಈ ವಾರ ನಿಮಗೆ ಆತ್ಮಗೌರವ ಹೆಚ್ಚಾಗಿರುತ್ತದೆ. ನಿಮ್ಮ ಆದಾಯವು ತೃಪ್ತಿಪಡುವ ಸ್ಥಿತಿಯಲ್ಲಿರುತ್ತದೆ. ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಗುಣದಿಂದ ಎಲ್ಲರೂ ನಿಮಗೆ ಸಹಕಾರ ನೀಡುವರು. ಹೆಚ್ಚಿನ ವಿದ್ಯೆಯನ್ನು ಕಲಿಯಲು ದೂರ ಪ್ರಯಾಣ ಮಾಡಬೇಕಾಗುತ್ತದೆ.
ಕುಂಭ
ಮನೆಗೆ ಕೆಲವೊಂದು ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ. ಗೊಂದಲದ ಸ್ಥಿತಿಯಿಂದ ಯುವಕರು ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಮಹಿಳೆಯರ ಸಿದ್ಧಪಡಿಸಿದ ಬಟ್ಟೆಗಳನ್ನು ಮಾರುವವರಿಗೆ ಸಾಕಷ್ಟು ಲಾಭ ದೊರೆಯುತ್ತದೆ.
ಮೀನ
ಪ್ರಮುಖ ಕೆಲಸಗಳನ್ನು ಮಾಡುವಾಗ ಅತಿಯಾದ ಆತುರ ಬೇಡ. ನೆರೆಹೊರೆಯವರೊಡನೆ ಸಂಬಂಧ ವೃದ್ಧಿಸಿಕೊಳ್ಳುವುದು ಒಳ್ಳೆಯದು. ಪಾಲುದಾರಿಕೆ ವ್ಯವಹಾರದಲ್ಲಿ ಇದ್ದ ಮನಃಸ್ತಾಪ ದೂರವಾಗಿ ಪುನಃ ಒಗ್ಗೂಡಿ ವ್ಯವಹಾರ ನಡೆಸುವಿರಿ.














