ಮೇಷ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಕೆಲಸಗಳು ಉತ್ತಮ ಫಲವನ್ನು ನೀಡುತ್ತವೆ. ಸ್ವಲ್ಪ ಮಟ್ಟಿನ ಧನಸಂಗ್ರಹ ಆಗುತ್ತದೆ. ಕಳ್ಳಕಾಕರ ಹಾವಳಿ ಸುಳಿವು ಇರುವುದರಿಂದ ನಿಮ್ಮ ವಸ್ತುಗಳನ್ನು ಹೆಚ್ಚು ಜೋಪಾನವಾಗಿ ನೋಡಿಕೊಳ್ಳಿರಿ.
ವೃಷಭ
ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತಮ ಸಹಕಾರ ದೊರೆತು ಆದಾಯ ಹೆಚ್ಚುತ್ತದೆ. ನೀವು ಮಾಡಿದ ಕಾರ್ಯದಿಂದ ನಿಮ್ಮ ಸಂಸ್ಥೆಗೆ ಲಾಭವಾಗಿ ಎಲ್ಲರೂ ಪ್ರಶಂಸಿಸುವರು. ಹಣದ ಒಳಹರಿವು ಚೇತರಿಕೆಯನ್ನು ಕಾಣುತ್ತದೆ. ಮಹಿಳೆಯರ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು.
ಮಿಥುನ
ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಆದಾಯ ಹೆಚ್ಚುತ್ತದೆ. ನಿಮಗೆ ಬರಬೇಕಾಗಿದ್ದ ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಗಳ ವ್ಯವಹಾರಗಳು ಸುಗಮವಾಗಿ ಆಗುತ್ತವೆ. ಹಿರಿಯರ ಅನಾರೋಗ್ಯದಿಂದ ಹೆಚ್ಚು ಖರ್ಚು ಆಗಬಹುದು. ನಿಮ್ಮ ವ್ಯವಹಾರದಲ್ಲಿ ಸಾಮಾನ್ಯವಾದ ಬೆಳವಣಿಗೆಯನ್ನು ಕಾಣಬಹುದು.
ಕಟಕ
ವ್ಯಾಪಾರದ ಒಳ ಗುಟ್ಟುಗಳನ್ನು ಕರಗತ ಮಾಡಿಕೊಳ್ಳುವಿರಿ. ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವಿರಿ. ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇದ್ದೇ ಇರುತ್ತದೆ. ಕೆಲಸದಲ್ಲಿ ಹೆಚ್ಚು ಜಾಗರೂಕರಾಗಿರುವುದು ಬಹಳ ಉತ್ತಮ. ಆಧ್ಯಾತ್ಮಿಕ ವಿಷಯಗಳಲ್ಲಿ ತೊಡಗಿಸಿ ಕೊಂಡಿರುವವರಿಗೆ ಪ್ರಗತಿ ಇರುತ್ತದೆ.
ಸಿಂಹ
ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಇರಲಿದೆ. ಮಕ್ಕಳಿಂದ ನಿಮಗೆ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಜನಪ್ರತಿನಿಧಿಗಳಿಗೆ ಸಮೂಹದಲ್ಲಿ ಮುಜುಗರ ಉಂಟಾಗುವ ಸಂದರ್ಭಗಳು ಎದುರಾಗಬಹುದು. ದೂರ ಪ್ರಯಾಣದಿಂದ ಆರೋಗ್ಯ ಸಮಸ್ಯೆ ಕಾಣಿಸಬಹುದು. ಒಂದೆಡೆ ಸಾಲ ಪಡೆದು ಉಳಿದ ಕೈ ಸಾಲ ತೀರಿಸಬಹುದು.
ಕನ್ಯಾ
ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ವೃದ್ಧಿಮಾಡಿಕೊಳ್ಳುವಿರಿ. ವ್ಯವಹಾರಗಳಲ್ಲಿ ತಕ್ಕಮಟ್ಟಿನ ಚೇತರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಬಗ್ಗೆ ಗೊಂದಲ ಮೂಡಬಹುದು. ವಾಹನ ವಿಷಯದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು.
ತುಲಾ
ನಿಮ್ಮ ಕೆಲಸ ಕಾರ್ಯಗಳು ನಿರೀಕ್ಷೆಯಂತೆ ನಡೆಯದೆ ಸ್ವಲ್ಪ ಬೇಸರವಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಧನಸಹಾಯ ಒದಗಿ ಬರುತ್ತದೆ. ಸಂಗಾತಿಯ ಮನರಂಜನೆಗಾಗಿ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗಬಹುದು. ಶತ್ರುಗಳ ಯೋಜನೆಗಳನ್ನು ಧ್ವಂಸ ಮಾಡುವಂತಹ ತಂತ್ರಗಳನ್ನು ರೂಪಿಸುವಿರಿ. ರಾಜಕೀಯ ವ್ಯಕ್ತಿಗಳು ತಮ್ಮತನವನ್ನು ಉಳಿಸಿಕೊಂಡಲ್ಲಿ ರಾಜಕೀಯದಲ್ಲಿ ಮುಂದುವರೆಯಲು ಅನುಕೂಲವಾಗುತ್ತದೆ
ವೃಶ್ಚಿಕ
ಉದ್ಯೋಗದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ಮನೆ
ನಿರ್ಮಾಣಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ನಿಮ್ಮ ನಡೆ-ನುಡಿಯಿಂದ ಜನರಿಂದ ಗೌರವ ಪಡೆಯುವಿರಿ. ಕೆಲವು ಮಹಿಳೆಯರಿಗೆ ವಸ್ತ್ರಾಭರಣಗಳನ್ನು ಖರೀದಿ ಮಾಡುವ ಯೋಗವಿದೆ. ಹಳೆಯ ಸಾಲಗಳಿಂದ ವಿಮುಕ್ತಿ ಪಡೆಯುವಿರಿ. ರಾಜಕಾರಣಿಗಳಿಗೆ ಯಶಸ್ಸಿನ ವಾರವಾಗಿರುತ್ತದೆ.
ಧನು
ನಿಮ್ಮ ಪಾಲಿನ ಕೆಲಸವನ್ನು ಸರಾಗವಾಗಿ ಮಾಡಿ ಮುಗಿಸುತ್ತೀರಿ. ದೂರದೂರುಗಳಿಗೆ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಬೇರೆಯವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವಿರಿ. ಖರ್ಚುಗಳು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯವಹಾರದ ಕೆಲವೊಂದು ವಿಚಾರಗಳನ್ನು ಯಾರಿಗೂ ಹೇಳದಿರುವುದು ಬಹಳ ಉತ್ತಮ.
ಮಕರ
ಮಕ್ಕಳಿಂದ ಆಗುತ್ತಿದ್ದ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕಾರಸ್ಥ ಮಹಿಳೆಯರಿಗೆ ನೆಮ್ಮದಿ ಕದಡುವ ಸಂದರ್ಭವಿದೆ. ವ್ಯಾಪಾರ-ವ್ಯವಹಾರದಲ್ಲಿ ಸಾಮಾನ್ಯ ಲಾಭ ಇರುತ್ತದೆ. ಔಷಧಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಹೆಚ್ಚಳವಾಗುತ್ತದೆ. ಪ್ರಸೂತಿ ವೈದ್ಯರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಸಹೋದರರಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಸಹಕಾರ ದೊರೆಯುತ್ತದೆ. ವಾಹನ ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ.
ಕುಂಭ
ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಹಿತಕರ ಬದಲಾವಣೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹುಮ್ಮಸ್ಸು ತರುವ ವಾರವಾಗಿರುತ್ತದೆ. ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ವ್ಯಾಪಾರ ಹೆಚ್ಚಾಗಿ ಲಾಭ ಬರುತ್ತದೆ. ಸ್ವಂತ ಉದ್ಯೋಗ ಮಾಡುವವರಿಗೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ. ವಿದೇಶದಲ್ಲಿ ಸ್ಥಿರಾಸ್ತಿಯನ್ನು ಮಾಡಬೇಕೆನ್ನುವವರಿಗೆ ಸರಾಗವಾಗಿ ಮಾಡುವ ಅವಕಾಶ ದೊರೆಯುತ್ತದೆ
ಮೀನ
ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಕಾಶ ಒದಗುತ್ತದೆ. ಹಿರಿಯರ ಸಹಕಾರದಿಂದ ನಿಮ್ಮ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣಬಹುದು. ಬೇರೆಯವರ ಪಾಲಾಗಿದ್ದ ನಿಮ್ಮ ಪೂರ್ವಿಕರ ಆಸ್ತಿಯನ್ನು ಖರೀದಿ ಮಾಡಲು ತಯಾರಿ ನಡೆಸುವಿರಿ. ಆಸ್ತಿ ದಾಖಲೆಗಳಲ್ಲಿದ್ದ ವ್ಯತ್ಯಾಸಗಳು ಸರಿಯಾಗುತ್ತವೆ. ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿರಿ














