Coastal Bulletin

ಮೇಷ ಕೌಟುಂಬಿಕ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗೆ ಮುಕ್ತಿ ಪಡೆಯಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಸುಧಾರಣೆ ಕಂಡುಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಹಣಕಾಸು ಸಂಸ್ಥೆಗಳಿಗೆ ಅಧಿಕಾರಿಗಳ ವ್ಯತಿರಿಕ್ತ ಸಲಹೆಗಳಿಂದ ನಷ್ಟ ಸಂಭವಿಸಬಹುದು.

ವೃಷಭ

ಹೊಸ ವ್ಯಕ್ತಿಗಳ ಪರಿಚಯವಾಗಿ ಮತ್ತು ಅವರ ಸಹಕಾರದಿಂದ ಕಲಾವಿದರುಗಳಿಗೆ ಗೌರವ ಪ್ರಾಪ್ತಿಯಾಗುತ್ತದೆ. ಅನಿರೀಕ್ಷಿತ ಮೂಲದಿಂದ ಧನಾಗಮನವಾಗಿ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ.

ಮಿಥುನ

ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕುಟುಂಬ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ಆಸ್ತಿ ವಿವಾದಗಳಲ್ಲಿ ನಿಮಗೆ ಹೆಚ್ಚು ಅನುಕೂಲ ಆಗುತ್ತದೆ. ನೆರೆಹೊರೆಯವರೊಂದಿಗೆ ವಿರಸ ಖಂಡಿತ ಬೇಡ. ಜಲ ಸಂಬಂಧಿ ಕೆಲಸಗಳನ್ನು ಮಾಡುವವರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆ.

ಕಟಕ

ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು ದೊರೆತು ಇದಕ್ಕೆ ಬೇಕಾದ ಸಹಕಾರಗಳು ಮಿತ್ರರಿಂದ ದೊರೆಯುತ್ತವೆ. ಕೆಲವೊಂದು ತುರ್ತು ವಿಷಯಗಳ ಪರಿಹಾರಕ್ಕಾಗಿ ನಿಮ್ಮ ಸಂಬಂಧಿಗಳ ಸಹಾಯವನ್ನು ಪಡೆಯುವಿರಿ. ದೈನಂದಿನ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ಸಿಂಹ

ಬಂಧುಗಳಲ್ಲಿನ ಭಿನ್ನಾಭಿಪ್ರಾಯವನ್ನು ದೂರ ಮಾಡುವಲ್ಲಿ ಸಾಕಷ್ಟು ಸಫಲತೆ ಕಾಣುವಿರಿ. ಭೂ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ತೈಲ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ನಿಮ್ಮ ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಸಂದರ್ಭ ಬರಬಹುದು. 

ಕನ್ಯಾ

ವಿದ್ಯಾರ್ಥಿಗಳಿಗೆ ಅವರ ಸಮಸ್ಯೆಗಳಿಂದ ಮುಕ್ತಿ ಹೊಂದುವ ಅವಕಾಶವಿದೆ. ಮಹಿಳಾ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆತು ಯಶಸ್ಸು ಸಿಗುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ಭ್ರಷ್ಟಾಚಾರದ ಆರೋಪ ಬರುವ ಸಾಧ್ಯತೆಗಳಿವೆ. ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಬರಬೇಕಾಗಿದ್ದ ಎಲ್ಲ ರೀತಿಯ ಸಹಾಯಧನಗಳು ಈಗ ಬರುತ್ತವೆ. 

ತುಲಾ

ನಿರುದ್ಯೋಗಿಗಳಿಗೆ ಉದ್ಯೋಗದ

ಬಾಗಿಲು ತೆರೆಯುತ್ತದೆ. ಆತುರದ ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ವಿಘ್ನವಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಆಮದು ಮತ್ತು ರಫ್ತು ವ್ಯವಹಾರ ಮಾಡುತ್ತಿರುವವರಿಗೆ ಕಾನೂನಿನ ಸಮಸ್ಯೆಗಳು ಬರಬಹುದು.

ವೃಶ್ಚಿಕ

ಕೃಷಿಕರಿಗೆ ಸರ್ಕಾರದಿಂದ ಸಹಾಯಧನದ ರೂಪದಲ್ಲಿ ಕೃಷಿ ಉಪಕರಣಗಳು ದೊರೆಯಬಹುದು. ಉದ್ಯೋಗ ಕ್ಷೇತ್ರದಲ್ಲಿರುವವರಿಗೆ ಒಂದು ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. 

ಧನು

ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇಚ್ಛೆ ಇದ್ದರೂ ಅವಕಾಶ ದೊರೆಯುವುದು ಕಡಿಮೆ. ಮಹಿಳೆಯರಿಗೆ ಅವರ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಸಹಕಾರ ದೊರೆಯುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವಾದರಗಳು ದೊರೆಯುವ ಸಾಧ್ಯತೆ ಇದೆ. ಪ್ರಗತಿಯಲ್ಲಿರುವ ಮನೆ ಕೆಲಸಗಳಿಗೆ ಬೇಕಾದ ಹಣದ ಸಹಾಯ ದೊರೆಯುತ್ತದೆ.

ಮಕರ

ಸಾಕಷ್ಟು ಅಡೆತಡೆಗಳ ನಡುವೆಯೂ ಶುಭ ಕಾರ್ಯವೊಂದನ್ನು ಮಾಡಿ ಮುಗಿಸುವಿರಿ. ಔಷಧಿ ತಯಾರಕರಿಗೆ ಹೆಚ್ಚಿನ ತಯಾರಿಕಾ ಆದೇಶಗಳು ದೊರೆತು ಮುಂಗಡ ಹಣ ದೊರೆಯುತ್ತದೆ.

ಕುಂಭ

ಹಿರಿಯರು ಬಂಧುಗಳ ಗೌರವಕ್ಕೆ ಪಾತ್ರರಾಗುವರು. ಮನರಂಜನಾ ಕಲೆಯನ್ನು ಪ್ರದರ್ಶಿಸುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಏರಿಕೆ ಕಾಣಬಹುದು. ಒಂದು ನೂತನ ವ್ಯವಹಾರದಲ್ಲಿ ಹಣ ತೊಡಗಿಸುವ ಸಾಧ್ಯತೆಯಿದೆ. 

ಮೀನ

ಉದ್ಯೋಗದಲ್ಲಿರುವ ಮಹಿಳೆಯರು ಅವರ ನಡವಳಿಕೆಯಿಂದ ಟೀಕೆಗೊಳಗಾಗುವರು. ಅಧಿಕಾರಿಗಳ ಅಸಹಕಾರದಿಂದ ಕೆಲವು ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಸರ್ಕಾರಿ ಉದ್ಯೋಗದಲ್ಲಿರುವವರು ವರ್ಗಾವಣೆಯನ್ನು ನಿರೀಕ್ಷಿಸಬಹುದು


Leave a Comment