ಮೇಷ ಕೃಷಿ ಸಂಬಂಧಿತ ಉದ್ಯೋಗಗಳಿಂದ ಆದಾಯ ಬರುತ್ತದೆ. ಕೆಲವೊಂದು ಕೆಲಸ ಕಾರ್ಯಗಳು ಕೈಗೂಡಿದರೂ ಕೆಲವು ಕೆಲಸಗಳಲ್ಲಿ ಹಿನ್ನಡೆ ಇರುತ್ತದೆ. ಅಕಾಲ ಭೋಜನದಿಂದಾಗಿ ಆರೋಗ್ಯ ತಪ್ಪಬಹುದು. ದೂರ ಪ್ರಯಾಣದಿಂದ ದೇಹಾಲಸ್ಯ ಆಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಪಟ್ಟ ವಿಷಯಗಳನ್ನು ಕಲೆ ಹಾಕಲು ಸಾಕಷ್ಟು ಸುತ್ತಾಟ ಮಾಡುವಿರಿ.
ವೃಷಭ
ಹಣಕಾಸಿನ ಅನುಕೂಲತೆ ಒದಗಿಬರುತ್ತದೆ. ಕಾನೂನಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಮನೆಯವರ ಮನೋಗುಣಕ್ಕೆ ಅನುವಾಗಿ ಹೊಂದಿಕೊಳ್ಳುವಿರಿ. ಸಾಲಮಾಡಿ ಸಣ್ಣಪುಟ್ಟ ಕೈಸಾಲಗಳನ್ನು ತೀರಿಸಿಕೊಳ್ಳುವಿರಿ. ಉದ್ಯೋಗದಾತರ ಕೃಪೆಯಿಂದ ತಾಂತ್ರಿಕತೆಯಲ್ಲಿ ಕೌಶಲ ಪಡೆದುಕೊಳ್ಳುವಿರಿ. ಸಹೋದ್ಯೋಗಿಗಳ ಗೆಳೆತನವನ್ನು ಗಟ್ಟಿ ಮಾಡಿಕೊಳ್ಳುವಿರಿ.
ಮಿಥುನ
ಮನೆಯವರೊಂದಿಗೆ ಚರ್ಚೆಯ ಮೂಲಕ ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವಿರಿ. ಇದರಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ದೊರೆತು ನೆಮ್ಮದಿಯಾಗುವುದು. ದ್ರವ ರೂಪದ ರಾಸಾಯನಿಕ ಪದಾರ್ಥಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.
ಕಟಕ
ಹೊಸ ಜನರ ಪರಿಚಯವಾಗಿ ವ್ಯವಹಾರದಲ್ಲಿ ಚೇತರಿಕೆಯನ್ನು ಕಾಣಬಹುದು. ಆರ್ಥಿಕ ಸ್ಥಿತಿಯು ಉತ್ತಮ ಸ್ಥಿತಿಯತ್ತ ಹೊರಳುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ. ಇಲ್ಲಿ ಅವರು ತಮ್ಮ ಮನೋಗತವನ್ನು ಪ್ರಚುರಪಡಿಸಬಹುದು.
ಸಿಂಹ
ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರ ನಡೆಯುವ ಸಂದರ್ಭವಿದೆ. ಹಿರಿಯರ ಹದಗೆಟ್ಟ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮ ಕಾಲವಾದರೂ ಹೆಚ್ಚಿನ ಶ್ರಮ ಆಗತ್ಯ. ಖರ್ಚಿನ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಮಿತಿಮೀರಿದಲ್ಲಿ ಸಾಲ ಮಾಡಬೇಕಾದ ಸಂದರ್ಭ ಬರಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.
ಕನ್ಯಾ
ಸಂಗಾತಿ ಆದಾಯದಲ್ಲಿ ಸ್ವಲ್ಪ ಏರಿಕೆ ಕಂಡು ಬರುತ್ತದೆ ಹಾಗೂ ನಿಮ್ಮೆಲ್ಲಾ ಕೆಲಸಗಳಿಗೂ ಸಂಗಾತಿಯ ಸಹಕಾರ ದೊರೆಯುತ್ತದೆ. ವೃತ್ತಿಯಲ್ಲಿ ಮಹಿಳಾ ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಕೆಲವೊಂದು ಗೃಹ ಕೈಗಾರಿಕೆಯ ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶವಿದೆ.
ತುಲಾ
ಸಂಗಾತಿಯ ಕಡೆಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಧನಸಹಾಯ ಒದಗುತ್ತದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಬಡ್ತಿ ಸಿಗುವ ಸಂದರ್ಭವಿದೆ. ಸರ್ಕಾರಿ ಇಲಾಖಾ ಪತ್ರ ವ್ಯವಹಾರಗಳಲ್ಲಿ ಮುನ್ನಡೆಯನ್ನು ಸಾಧಿಸಬಹುದು. ಗೃಹ ಬಳಕೆ ಸಾಮಗ್ರಿಗಳನ್ನು ಮಾರಾಟ ಮಾಡುವವರ
ವ್ಯವಹಾರ ವಿಸ್ತರಿಸುತ್ತದೆ.
ವೃಶ್ಚಿಕ
ಬರಹಗಾರರು, ಕಲಾವಿದರಿಗೆ ಉತ್ತಮ ಉತ್ತೇಜನ ದೊರೆಯುತ್ತದೆ. ಕೃಷಿಕರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮಕ್ಕಳ ಬದುಕಿನಲ್ಲಿ ಹೊಸ ತಿರುವು ಕಂಡು ಮುನ್ನಡೆಯನ್ನು ಕಾಣಬಹುದು. ಸಾಂಸ್ಕೃತಿಕ ಕಾರ್ಯಗಳನ್ನು ಏರ್ಪಾಡು ಮಾಡುವವರಿಗೆ ಬಿಡುವಿಲ್ಲದ ಕೆಲಸಗಳಿರುತ್ತವೆ.
ಧನು
ಔದ್ಯೋಗಿಕ ಸಮಸ್ಯೆಗಳು ಮೇಲಧಿಕಾರಿಯ ನೆರವಿನಿಂದ ಪರಿಹಾರವಾಗುವುದು. ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ವಾಣಿಜ್ಯ ಅಧಿಕಾರಿಗಳು ಮತ್ತು ಸರ್ಕಾರದ ಸಹಕಾರ ದೊರೆಯುತ್ತದೆ. ಸ್ಥಿರಾಸ್ತಿ ಕೊಳ್ಳುವ ಯೋಗವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಶತ್ರುಗಳನ್ನು ಮಣಿಸಲು ಅವರದೇ ತಂತ್ರಗಳನ್ನು ಬಳಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರದ್ಧೆ ವಹಿಸಬೇಕಾದ ಅನಿವಾರ್ಯವಿದೆ.
ಮಕರ
ಅಬಕಾರಿ ಇಲಾಖೆಯ ಕೆಲಸಗಾರರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಕೆಲವು ರಾಜಕಾರಣಿಗಳಿಗೆ ಗೊಂದಲಮಯ ಸನ್ನಿವೇಶಗಳು ಉಂಟಾಗುತ್ತವೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಲೇವಾದೇವಿ ಮಾಡುವವರಿಗೆ ಸ್ವಲ್ಪ ವಸೂಲಾತಿ ಆಗುತ್ತದೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫಲ ಇರುತ್ತದೆ. ಪರಿಣಿತ ತಂತ್ರಜ್ಞರಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ.
ಕುಂಭ
ಉಪನ್ಯಾಸಕರಿಗೆ, ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ ಹಾಗೂ ಉಪನ್ಯಾಸಗಳು ಜನ ಮನ್ನಣೆಗೆ ಪಾತ್ರವಾಗುತ್ತದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಈಗ ಅವಕಾಶ ದೊರೆಯುತ್ತದೆ. ಹಣದ ಒಳಹರಿವು ಉತ್ತಮವಾಗಿದ್ದರೂ ಅದರ ನಿರ್ವಹಣೆ ಅತಿ ಮುಖ್ಯ. ಯುವಕರ ನಡವಳಿಕೆಗಳು ಸಮಾಜದಲ್ಲಿ ಪ್ರಶ್ನಾರ್ಹವಾಗಿ ಎಲ್ಲರ ಮುಂದೆ ಸಣ್ಣವರಾಗುವರು.
ಮೀನ
ಬಹಳ ದಿನಗಳಿಂದ ಬಾಕಿ ಇರುವ ಕೆಲಸಗಳನ್ನು ಮುಗಿಸುವ ಬಗ್ಗೆ ಆಲೋಚನೆ ಮಾಡಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ರೀತಿಯ ಅನುಕೂಲಗಳು ಒದಗುತ್ತದೆ. ದ್ವಿದಳ ಧಾನ್ಯದ ಬೆಳೆಗಾರರಿಗೆ ಹೆಚ್ಚು ಲಾಭವಿರುತ್ತದೆ. ಹಣದ ಒಳಹರಿವು ಕಡಿಮೆಯಿರುತ್ತದೆ. ನಿಮಗಾಗಿ ಅಲಂಕಾರಿಕ ವಸ್ತುಗಳನ್ನು ಕೊಳ್ಳುವಿರಿ.
















