ಮೇಷ ರೈತಾಪಿ ವರ್ಗದವರು ನೀರಿನಲ್ಲಿ ಕೆಲಸ ಮಾಡುವಾಗ ಎಚ್ಚರವಹಿಸುವುದು ಒಳ್ಳೆಯದು. ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಪ್ರಗತಿ ಇರುತ್ತದೆ.
ವೃಷಭ
ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ನಿರ್ವಹಣೆ ಮಾಡುವುದರಿಂದ ನಾಯಕತ್ವ ಪ್ರಾಪ್ತಿಯಾಗುತ್ತದೆ. ದ್ವಂದ್ವ ನಿರ್ಧಾರಗಳಲ್ಲಿ ಯಾವ ಕೆಲಸವನ್ನು ಆರಂಭಿಸಬೇಡಿರಿ. ಹಣದ ಒಳಹರಿವು ಅಪೇಕ್ಷೆಗೆ ತಕ್ಕಂತೆ ಇರುತ್ತದೆ.
ಮಿಥುನ
ಸಮುದ್ರ ದಡದಲ್ಲಿ ಕೆಲಸ ಮಾಡುವವರು ಸಾಕಷ್ಟು ಎಚ್ಚರಿಕೆ ವಹಿಸುವುದು ಅತಿ ಅಗತ್ಯ. ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯತೆಯನ್ನು ಪೂರೈಸುತ್ತದೆ. ಮಹಿಳೆಯರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಇದೆ.
ಕಟಕ
ನಿಮ್ಮ ವೈಯಕ್ತಿಕ ವಿಚಾರಗಳನ್ನು ಆತ್ಮೀಯರೊಡನೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಪರಿಹಾರವೆನಿಸುತ್ತದೆ. ಮಹಿಳೆಯರು ಸ್ವಲ್ಪ ದಿನ ರಾಜಕೀಯದಿಂದ ದೂರ ಇರುವುದು ಒಳ್ಳೆಯದು. ವಿಶೇಷ ವ್ಯಕ್ತಿಗಳಿಂದ ಪ್ರಭಾವಿತರಾಗಿ ಅವರನ್ನು ಅನುಕರಿಸಲು ಯತ್ನಿಸುವಿರಿ.
ಸಿಂಹ
ಮನೆಯ ನವೀಕರಣ ಕಾರ್ಯಗಳು ಸರಾಗವಾಗಿ ಆಗುವುದು. ಮನೆಗೆ ಅಲಂಕಾರ ವಸ್ತುಗಳನ್ನು ಖರೀದಿ ಮಾಡುವಿರಿ. ಮೀನು ಮುಂತಾದ ಸಮುದ್ರಖಾದ್ಯವನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಹಣಕಾಸಿನ ಸ್ಥಿತಿಯು ಸರಿ ಹೋಗುವಷ್ಟು ಇರುತ್ತದೆ.
ಕನ್ಯಾ
ಗೃಹ ನಿರ್ಮಾಣದ ಬಗ್ಗೆ ಸಾಕಷ್ಟು ಚಿಂತನೆಯನ್ನು ಮಾಡುವಿರಿ. ನೆರೆಹೊರೆಯವರ ಸಂಬಂಧದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆಯನ್ನು ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಡವಳಿಕೆಯಲ್ಲಿ ಸ್ವಲ್ಪಮಟ್ಟಿನ ಆಲಸ್ಯವನ್ನು ಕಾಣಬಹುದು.
ತುಲಾ
ಅನವಶ್ಯಕ ಮಾತುಗಳಲ್ಲಿ ತೊಡಗಿಕೊಳ್ಳದಿರುವುದು ನಿಮಗೆ ಉತ್ತಮ. ಹಣಕಾಸಿನ ವ್ಯವಹಾರಗಳು ಅಷ್ಟು ಲಾಭವನ್ನು ತರಲಾರವು. ಮಕ್ಕಳಿಗೋಸ್ಕರ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭವಿದೆ. ವಿದ್ಯಾರ್ಥಿಗಳು ಅಭ್ಯಾಸದಕಡೆಗೆ
ಹೆಚ್ಚುಗಮನ ಹರಿಸಬೇಕಾದ ಅಗತ್ಯವಿದೆ.
ವೃಶ್ಚಿಕ
ಮಾನಸಿಕ ದ್ವಂದ್ವ ನಿಲುವುಗಳಿಂದಾಗಿ ಸ್ವಲ್ಪ ನಷ್ಟ ಅನುಭವಿಸುವಿರಿ. ಶತ್ರುಗಳನ್ನು ಮಣಿಸಲು ಹೊಸ ತಂತ್ರಗಳನ್ನು ಹುಡುಕುವಿರಿ. ಆಸ್ತಿ ವಿಚಾರದಲ್ಲಿ ಸಂತೋಷಕರ ಸುದ್ದಿಗಳು ಕೇಳಿ ಬರುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರೆತು ಅಧ್ಯಯನ ಮುಂದುವರೆಯುತ್ತದೆ. ಮಕ್ಕಳಿಂದ ಸಾಕಷ್ಟು ಗೌರವ ದೊರೆಯುತ್ತದೆ.
ಧನು
ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಅತ್ಯಂತ ಚುರುಕಾಗಿ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಸಂಕಷ್ಟದ ಕಾಲ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಕೆಲಸಗಳಲ್ಲಿ ಮಂದಗತಿಯನ್ನು ಕಾಣಬಹುದು. ನಿಮ್ಮ ಸಂಗಾತಿಯ ಆದಾಯದಲ್ಲಿ ಸ್ವಲ್ಪ ಮಟ್ಟಿನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು.
ಮಕರ
ಕಷ್ಟಪಟ್ಟು ವಹಿಸಿಕೊಂಡ ಜವಾಬ್ದಾರಿಯನ್ನು ನಿರ್ವಹಣೆ ಮಾಡುವಿರಿ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಹಿರಿಯರಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಉದ್ಯೋಗಿಗಳ ಶುಭ ಸಮಾರಂಭಕ್ಕೆ ಹೋಗಿಬರುವ ಸಾಧ್ಯತೆ ಇದೆ.
ಕುಂಭ
ಒಂದು ರೀತಿಯ ಸಂತೋಷ ನಿಮಗೆ ದೊರೆಯಬಹುದು. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಒಡಹುಟ್ಟಿದವರಿಂದ ಸಮಸ್ಯೆಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ.
ಮೀನ
ಹಣದ ಒಳಹರಿವು ಉತ್ತಮವಾಗಿದ್ದರೂ ಸಾಕಷ್ಟು ಖರ್ಚು ಇರುತ್ತದೆ. ದುಡುಕಿನ ಮಾತಿನಿಂದ ಬಂಧುಗಳು ದೂರ ಆಗುವರು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಕಣ್ಣಿನ ತೊಂದರೆ ಹಾಗೂ ರಕ್ತದ ತೊಂದರೆ ಇರುವವರು ಶೀಘ್ರ ಚಿಕಿತ್ಸೆಗೆ ಹೋಗುವುದು ಬಹಳ ಉತ್ತಮ.
















