Coastal Bulletin

ಮಡಿಕೇರಿ: ನಗರದ ತಿಮ್ಮಯ್ಯ ವೃತ್ತದಲ್ಲಿ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಕೆಳಭಾಗದಲ್ಲಿ ತಡೆಗೋಡೆ ಕುಸಿಯುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ರಸ್ತೆ ಸೂಚಿಸಿದ್ದು, ಮಡಿಕೇರಿ – ಮಂಗಳೂರಿಗೆ ತೆರಳುವವರು ಹಾಗೂ ಮಡಿಕೇರಿ- ಮಂಗಳೂರಿನಿಂದ ಬರುವವರು ಮೇಕೆರಿ – ತಾಳತ್ತಮನೆ

– ಅಪ್ಪಂಗಳ  ಮಾರ್ಗವಾಗಿ ಸಾಗುವಂತೆ ಸೂಚನೆ ನೀಡಲಾಗಿದೆ.

ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಮಂಗಳೂರು ರಸ್ತೆ ಬಂದ್ ಮಾಡಿದ ಸಂಚಾರಿ ಪೊಲೀಸರು. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗ ಬಂದ್ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

Leave a Comment