Coastal Bulletin

ಮೇಷ ಅಪೇಕ್ಷಿತ ಗುರಿ ತಲುಪಲು ನೇರ ಹಾಗೂ ದಿಟ್ಟನಡವಳಿಕೆಯು ಅತಿ ಅಗತ್ಯವಾಗಿರುತ್ತದೆ. ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ದೂರವಾಗುತ್ತವೆ. ನಿಂತಿದ್ದ ಕೆಲವು ವ್ಯವಹಾರಗಳು ಪುನಃ ಆರಂಭಗೊಳ್ಳುತ್ತವೆ. ಒಟ್ಟುಗೂಡಿದ ವ್ಯವಹಾರಗಳಲ್ಲಿ ಆದಾಯ ಹೆಚ್ಚು ಬರುತ್ತದೆ.

ವೃಷಭ

ದೊಡ್ಡ ದೊಡ್ಡ ಯೋಜನೆಗಳನ್ನು ಆರಂಭಿಸುವ ಮುನ್ನ ಸಾಕಷ್ಟು ವಿಚಾರ ಮಾಡಿರಿ. ಧನಾಗಮನವು ನಿರೀಕ್ಷೆಯಷ್ಟಿರುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರವಹಿಸಿರಿ. ಆರಂಭಿಸಿದ ಕೆಲವೊಂದು ಕೆಲಸಗಳಿಗೆ ಬಂಧುಗಳಿಂದ ವಿಘ್ನಗಳು ಎದುರಾಗಬಹುದು.

 ಮಿಥುನ

ನಿಮ್ಮ ಮಾತುಗಳಿಂದ ವೃಥಾ ಆರೋಪ ಎದುರಿಸುವ ಸಾಧ್ಯತೆ ಇದೆ. ಮಾತಿನ ಮೇಲೆ ಸಾಕಷ್ಟು ಹಿಡಿತ ಇರುವುದು ಒಳ್ಳೆಯದು. ಕುಟುಂಬದ ವ್ಯವಹಾರದಲ್ಲಿ ಒಡಹುಟ್ಟಿದವರಿಂದ ಮೋಸ ಹೋಗುವ ಸಾಧ್ಯತೆ ಇದೆ.

 ಕಟಕ

ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಗತಿಯನ್ನು ಕಾಣುವ ಕಾಲ. ಅವಿವಾಹಿತರಿಗೆ ಸಂಬಂಧ ಒದಗಿ ಬರುವ ಸಾಧ್ಯತೆ ಇದೆ. ನಿಮ್ಮ ಕಾರ್ಯಸ್ಥಳದಲ್ಲಿ ಸಣ್ಣ ಮಾತುಗಳಿಗೆ ಕಿವಿಗೊಡದೆ ನೀವು ಕಾರ್ಯದಲ್ಲಿ ಮುಂದುವರಿಯುವುದು ಒಳ್ಳೆಯದು. ಮೂಳೆಯ ತೊಂದರೆಗಳು ಬಾಧಿಸಬಹುದು. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಒಳಿತು. 

 ಸಿಂಹ

ನಿಮ್ಮ ಧಾರ್ಮಿಕ ನಡೆಯ ಬಗ್ಗೆ ಜನರು ಪ್ರಶ್ನಿಸಬಹುದು. ಆದ್ದರಿಂದ ಎಚ್ಚರಿಕೆಯ ನಡೆ ಇರಲಿ. ಉದ್ಯೋಗ ನಿಮಿತ್ತ ದೂರಪ್ರಯಾಣದ ಸಾಧ್ಯತೆಗಳಿವೆ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಲಾಭ ವಿರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ಕೆಲಸಗಳು ನಿಧಾನವಾಗಬಹುದು. 

 ಕನ್ಯಾ

ಮನೋವೃತ್ತಿಯ ಮೇಲೆ ಹಿಡಿತವನ್ನು ಸಾಧಿಸಿ ನಿತ್ಯದ ಕಾರ್ಯಗಳನ್ನು ಮಾಡುವುದು ಒಳಿತು. ನಿಮ್ಮ ಸಂಗಾತಿಯ ಸಲಹೆಗಳು ನಿಮಗೆ ಸಾಕಷ್ಟು ಒಳಿತನ್ನು ತರುತ್ತವೆ. ಷೇರು ವ್ಯವಹಾರ ಮಾಡುವವರಿಗೆ ಹಿನ್ನಡೆ ಇರುತ್ತದೆ. ಗೃಹ ಅಲಂಕಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಅಭಿವೃದ್ಧಿ ಇರುತ್ತದೆ. ತಂದೆಯ ಸ್ವಂತ ವ್ಯಾಪಾರದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗುತ್ತದೆ.

 ತುಲಾ

ಕುಟುಂಬ ಸದಸ್ಯರೊಡನೆ

ವಾಗ್ವಾದ ಮಾಡಿ ಎಲ್ಲರ ಬೇಸರಕ್ಕೆ ಕಾರಣರಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಗಾಯಗಳಾಗಬಹುದು ಎಚ್ಚರ ವಹಿಸಿರಿ. ವಿದೇಶಕ್ಕೆ ಔಷಧಿಯನ್ನು ರಫ್ತು ಮಾಡುವವರ ವ್ಯವಹಾರಗಳು ವೃದ್ಧಿಸುತ್ತವೆ. 

ವೃಶ್ಚಿಕ

ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ದೇವರ ಬಗ್ಗೆ ಒಲವು ಹೆಚ್ಚುವುದು. ಕ್ರೀಡಾ ಪಟುಗಳಿಗೆ ಉತ್ತಮ ಭವಿಷ್ಯ ದೊರೆಯುವ ಸಂದರ್ಭವಿದೆ. ಅಪರೂಪದ ಅವಕಾಶಗಳನ್ನು ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಂಡಲ್ಲಿ ಗೆಲುವು ನಿಮ್ಮದಾಗುತ್ತದೆ. 

 ಧನು

ನಿಮ್ಮ ಮುಂದಾಳತ್ವದ ಬಗ್ಗೆ ಎಲ್ಲರಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಕಾಣುವ ಸಾಧ್ಯತೆ ಇದೆ. ವಾಹನ ಖರೀದಿಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಪ್ರತಿಸ್ಪರ್ಧಿಗಳ ಸವಾಲನ್ನು ಸರಿಯಾಗಿ ಅವಲೋಕಿಸಿ ಎದುರುತ್ತರ ಕೊಡುವುದು ಉತ್ತಮ.

 ಮಕರ

ಕೆಲಸಕಾರ್ಯಗಳಲ್ಲಿ ಹೊಸ ಉತ್ಸಾಹವನ್ನು ಕಾಣಬಹುದು. ರಾಜಕಾರಣಿಗಳು ತಮ್ಮ ಸ್ಥಾನಮಾನಕ್ಕಾಗಿ ಹಿರಿಯ ನಾಯಕರನ್ನು ಓಲೈಸುವರು. ದಿಢೀರ್‌ ನಿರ್ಧಾರಗಳಿಂದ ಕೆಲವು ಕೆಲಸಗಳು ನಿಧಾನವಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. 

 ಕುಂಭ

ಕುಟುಂಬದವರೊಡನೆ ಧಾರ್ಮಿಕ ಸ್ಥಳಗಳನ್ನು ನೋಡುವ ಯೋಗವಿದೆ. ದೈನಂದಿನ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ನಿಮ್ಮ ವ್ಯವಹಾರಗಳ ಗುಟ್ಟನ್ನು ಯಾರಿಗೂ ಹೇಳದಿರುವುದು ಬಹಳ ಉತ್ತಮ. ಸದ್ಯದಲ್ಲಿ ದೊಡ್ಡಮಟ್ಟದ ಹೂಡಿಕೆಗಳನ್ನು ಮಾಡದಿರುವುದು ಒಳಿತು. 

 ಮೀನ

ಸ್ವಯಂ ಉದ್ಯೋಗ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಅಸಡ್ಡೆ ತೋರುವ ನೌಕರರು ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ ಇದೆ. ಅನ್ಯರ ಅನಪೇಕ್ಷಿತ ಹಸ್ತಕ್ಷೇಪದಿಂದ ನಿಮ್ಮ ವ್ಯವಹಾರಗಳಲ್ಲಿ ವ್ಯತ್ಯಾಸ ಆಗಬಹುದು.

Leave a Comment