ಮೇಷ ರಾಶಿ : ಮೂರರಲ್ಲಿ ಸೂರ್ಯ ಬುಧ, ನಾಲ್ಕರಲ್ಲಿ ಶುಕ್ರ, ಐದರಲ್ಲಿ ಕುಜ ಸಮಯ ಬಹಳ ಚೆನ್ನಾಗಿದೆ. ವಾಹನದಿಂದ ಲಾಭ, ಭೂಮಿಯಿಂದ ಲಾಭ, ಸರ್ಕಾರದಿಂದ ಲಾಭ. ಸಹೋದರ ಬಂಧು ವರ್ಗದಿಂದ ಲಾಭ. ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಖರ್ಚುಗಳು ತಲೆ ಕೆಡಿಸುತ್ತದೆ. ಆದರೆ ಚಿಂತೆ ಬೇಡ.
ವೃಷಭ ರಾಶಿ : ಎರಡರ ಬುಧ, ಮೂರರ ಶುಕ್ರ ನಿಮಗೆ ಈಗ ಸಹಾಯ ಮಾಡುವ ಗ್ರಹಗಳು. ನಾಲ್ಕರ ಕುಜನಿಂದ ಕೊಂಚ ಒತ್ತಡದ ಜೀವನ ಇರುತ್ತದೆ. ಮೂರನೇ ಮನೆಯಲ್ಲಿ ಶುಕ್ರ ಹಿರಿಯ ಸ್ತ್ರೀ ಅಂದರೆ ತಾಯಿ, ಚಿಕ್ಕಮ್ಮ, ಅತ್ತೆ ಮೊದಲಾದವರಿಂದ ಸಹಾಯ ಕೊಡಿಸುತ್ತಾನೆ. ಆರರ ಕೇತು ಶೌರ್ಯ ಪರಾಕ್ರಮದಿಂದ ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತಾನೆ.
ಮಿಥುನ ರಾಶಿ : ನಿಮ್ಮ ರಾಶಿಯಲ್ಲೇ ಬುಧ ಸೂರ್ಯ ಇದ್ದು ಮಿಶ್ರಫಲವನ್ನು ಕೊಡುತ್ತಾರೆ. ಸೂರ್ಯ ಒತ್ತಡ ಹಾಗೂ ನಿಮ್ಮ ಕೋಪವನ್ನು ಹೆಚ್ಚಿಸುತ್ತಾರೆ. ಗುರುಬಲ ರಾಹುಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳು ನೀವೆಣಿಸಿದಂತೆ ಸಫಲವಾಗುತ್ತದೆ. ಎರಡನೇ ಮನೆಯ ಶುಕ್ರ ಕುಟುಂಬ ಸೌಖ್ಯ ಕೊಡುತ್ತಾನೆ.
ಕಟಕ ರಾಶಿ : ಈಗ ರಾಶಿಯಲ್ಲೇ ಶುಕ್ರನಿದ್ದು ಬೆಂದ ಮನಸ್ಸಿಗೆ ತಂಪು ಕೊಡುತ್ತಾನೆ. ಸುಡು ಬಿಸಿಲಲ್ಲಿ ತೀಡುವ ತಂಗಾಳಿಯಂತೆ ಶುಕ್ರ ನಿಮಗೆ ಆಸರೆಯಾಗುತ್ತಾನೆ. ಆದರೆ ಎರಡನೇ ಮನೆಯ ಕುಜ ಹತ್ತನೇ ಮನೆಯ ಗುರು, ಹನ್ನೆರಡರ ಸೂರ್ಯ ಬುಧ ಎಲ್ಲರೂ ನಿಮಗೆ ವ್ಯತಿರಿಕ್ತರು. ಸ್ವಲ್ಪ ಪರೀಕ್ಷೆಗಳ ಸವಾಲುಗಳ ಕಾಲ. ಎದೆಗುಂದಬೇಡಿ.
ಸಿಂಹ ರಾಶಿ : ರಾಶಿಯಲ್ಲೇ ಕುಜ ನಿಮ್ಮ ಧೈರ್ಯ ಸಾಹಸವನ್ನು ಹೆಚ್ಚಿಸುತ್ತಾನೆ. ಕೃಷಿಕರಿಗೆ ಉತ್ತಮ ಕಾಲ. ನಿಮಗೆ ಕಾವು ಹೆಚ್ಚು. ಅದರ ಜೊತೆಗೆ ಕುಜನೂ ನಿಮ್ಮ ರಾಶಿಯಲ್ಲಿ ಇರುವುದು ಇನ್ನಷ್ಟು ಕಾವು ಹೆಚ್ಚಿಸುತ್ತದೆ. ಕೋಪ ದುಡುಕನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಗುರುಬಲ ಇರುವುದರಿಂದ ಎಲ್ಲ ಕೆಲಸಗಳು ಸುಸೂತ್ರ ಸಾಗುತ್ತದೆ.
ಕನ್ಯಾ ರಾಶಿ : ಎಂಟರಲ್ಲಿ ಗುರು-ರಾಹು ಇರುವುದು ಕೊಂಚ ಗಂಭೀರ ಸಮಯ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಓಡಾಟದ ಬಗ್ಗೆಯೂ ಎಚ್ಚರಿಕೆ ವಹಿಸಿ. ವೃತ್ತಿಯಲ್ಲಿ ಯಶಸ್ಸಿದೆ. ಹನ್ನೊಂದರ ಶುಕ್ರನಿಂದ ವಾಹನದಿಂದ ಲಾಭ. ಹೊಸ ವಾಹನ ಖರೀದಿ ಭಾಗ್ಯ ಇದೆ. ಆರರ ಶನಿ ಕೂಡ ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾನೆ. ಈಗ ಅಭಿವೃದ್ಧಿ ಕೆಲಸಗಳು ನಡೆಯುವ ಸಮಯ.
ತುಲಾ ರಾಶಿ : ಹತ್ತರಲ್ಲಿ ಶುಕ್ರ ವೃತ್ತಿಯಲ್ಲಿ ಏಳಿಗೆಯನ್ನು ತೋರಿಸುತ್ತಾನೆ. ಹನ್ನೊಂದರ ಕುಜ ಭೂಮಿಯಿಂದ
ಲಾಭ ಕೊಡಿಸುತ್ತಾನೆ. ಭೂಮಿಯ ವ್ಯಾಜ್ಯಗಳು ಇದ್ದರೆ ಪರಿಹಾರ ಆಗುತ್ತದೆ. ಪಿತ್ರಾರ್ಜಿತ ಅಸ್ತಿ ಬರುತ್ತದೆ. ಇದಕ್ಕೆ ಇರುವ ಅಡ್ಡಿ ಆತಂಕಗಳುಪರಿಹಾರ ಆಗುತ್ತದೆ.
ವೃಶ್ಚಿಕ ರಾಶಿ : ಗಂಡ ಹೆಂಡತಿಯರ ಮನಸ್ತಾಪ ತಾರಕಕ್ಕೆ ಹೋಗುತ್ತದೆ. ಜಾಗ್ರತೆ ವಹಿಸಿ. ಪರಸ್ಪರ ಒಬ್ಬನ್ನೊಬ್ಬರು ಗೌರವಿಸಿ. ಪರಸ್ಪರ ಸಹಕಾರ ನೀಡಿ ನಿಮ್ಮ ಸಮಸ್ಯೆಗಳನ್ನು ಮನೆಯಲ್ಲೇ ಪರಿಹಾರ ಮಾಡಿಕೊಳ್ಳಿ. ಬೀದಿಗೆ ಬಂದರೆ ನಿಮಗೆ ಅಪಮಾನ ವಿನಾ ಬೇರೇನೂ ಇಲ್ಲ.
ಧನಸ್ಸು ರಾಶಿ : ಮಕ್ಕಳಿಂದ ಕಿರಿಕಿರಿ ಇದೆ ವಿರೋಧ ಇದೆ. ಹಣದ ಹರಿವು ಉತ್ತಮವಾಗಿದೆ. ನೌಕರಿಯಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳ ಇದೆ. ಒಂಬತ್ತರಲ್ಲಿ ಕುಜ ಪಿತ್ರಾರ್ಜಿತ ಆಸ್ತಿ ಕೊಡಿಸುತ್ತಾನೆ. ಮೂರರಲ್ಲಿ ಶನಿ ನಿಮಗೆ ಶೌರ್ಯ ಪರಾಕ್ರಮದಿಂದ ಯಾವುದೇ ಕೆಲಸ ನಿಮ್ಮ ಪರವಾಗಿ ನಡೆಯುವಂತೆ ಮಾಡುತ್ತಾನೆ. ಐದರ ಗುರು ರಕ್ಷೆಯನ್ನು ನೀಡುತ್ತಾನೆ. ವಿಧ್ಯಾರ್ಥಿಗಳಿಗೆ ಶುಭವಿದೆ.
ಮಕರ ರಾಶಿ : ಈಗ ನಿಮಗೆ ಶುಕ್ರ ಏಳನೇ ಮನೆಯಲ್ಲಿಇರುವುದು ಕೊಂಚ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆರನೇ ಮನೆಯಲ್ಲಿ ಸೂರ್ಯ ಬುಧ ಇರುವುದು ಕೊಂಚ ನೆಮ್ಮದಿ ಕೊಡುತ್ತದೆ. ಎಂಟರಲ್ಲಿ ಕುಜ ಇರುವುದೂ ಅಷ್ಟು ಒಳ್ಳೆಯದಲ್ಲ. ಜಾಗರೂಕರಾಗಿರಿ. ಸೂರ್ಯ ಬುಧರಿಂದ ಧನಲಾಭ ಕಾರ್ಯ ಸಿದ್ಧಿ ಇದೆ.
ಕುಂಭ ರಾಶಿ : ನಿಮಗೆ ಏಳನೇ ಮನೆಯ ಕುಜ ನಿಮ್ಮ ರಾಶಿಯನ್ನು ನೋಡುವುದರಿಂದ ಒತ್ತಡಗಳು ಹೆಚ್ಚು. ಸಣ್ಣ ಸಣ್ಣ ವಿಷಯಕ್ಕೂ ಕೋಪ ಕಿರಿಕಿರಿ ಇರುತ್ತದೆ. ಶನಿ ಕೂಡ ನಿಮ್ಮ ರಾಶಿಯಲ್ಲೇ ಇದ್ದಾನೆ. ಕುಟುಂಬ ಸೌಖ್ಯಕ್ಕೆ ಕೊಂಚ ತೊಂದರೆ ಆಗುತ್ತದೆ. ಕುಟುಂಬ ಸದಸ್ಯರ ನಡುವೆ ಜಗಳ ಮನಸ್ತಾಪ ಮೊದಲಾದ ತೊಂದರೆಗಳು ಇವೆ.
ಮೀನ ರಾಶಿ : ಈಗ ನಿಮಗೆ ಗುರುಬಲ ಇದೆ. ಯಾವುದಕ್ಕೂ ಚಿಂತೆ ಮಾಡಬೇಕಾದ ಅಗತ್ಯ ಇಲ್ಲ. ನಾಲ್ಕನೇ ಮನೆಯಲ್ಕಿ ಬುಧ ಇರುವುದರಿಂದ ವಿದ್ವಾಂಸರ ಸಖ್ಯ ದೊರೆತು ಜ್ಞಾನವೃದ್ಧಿ ಆಗುತ್ತದೆ. ಸಜ್ಜನ ಸ್ನೇಹಿತರು ಸಿಗುತ್ತಾರೆ. ಸತ್ ಸಭೆಗಳಲ್ಲಿ ವಿದ್ವಾಂಸರ ಪ್ರವಚನಗಳಲ್ಲಿ ಭಾಗವಹಿಸುವ ಯೋಗ ಇದೆ. ಐದನೇ ಮನೆಯಲ್ಲಿ ಶುಕ್ರ ಇರುವುದು ಕೂಡ ನಿಮಗೆ ಈಗ ಅದೃಷ್ಟ.
















