Coastal Bulletin

ಮೇಷ : ನಿಮ್ಮ ಮಿತ್ರರ ಉಪಾಯಗಳಿಂದ ಕೆಲವು ಸಂಕಟದಿಂದ ಪಾರಾಗುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಅತ್ಯಂತ ಚುರುಕಾಗಿ ಕೆಲಸ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಸ್ಥಿರಾಸ್ತಿಯ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ರಕ್ತದ ತೊಂದರೆ ಅಥವಾ ತಲೆನೋವು ಕಾಡಬಹುದು.

ವೃಷಭ : ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಕೆಲಸ ಕಾರ್ಯಗಳಲ್ಲಿ ವೃಥಾ ಕಾಲಹರಣ ಮಾಡಿದಲ್ಲಿ ಸಾಕಷ್ಟು ನಷ್ಟ ಅನುಭವಿಸುವಿರಿ. ವಿಶೇಷ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಾಕಷ್ಟು ವಿಚಾರ ಮಾಡಿರಿ. ಕೃಷಿಯಿಂದ ಹೆಚ್ಚಿನ ಆದಾಯ ಬರುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ವ್ಯಾಪಾರ ದೊರೆಯುವುದರ ಜೊತೆಗೆ ಹೆಚ್ಚಿನ ಲಾಭವಿರುತ್ತದೆ. ಅತ್ಯಂತ ಚುರುಕಾಗಿ ವಿಷಯಗಳನ್ನು ಗ್ರಹಿಸಿಕೊಂಡು ಓದಿನಲ್ಲಿ ಮುನ್ನಡೆ ಸಾಧಿಸುವಿರಿ. 

ಮಿಥುನ : ವೃತ್ತಿಯಲ್ಲಿ ನಿಮ್ಮ ನಾಯಕತ್ವದ ಗುಣ ಅನಾವರಣಗೊಂಡು ಮೆಚ್ಚುಗೆ ಸಿಗುತ್ತದೆ. ಹೊರ ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಈಗ ಉತ್ತಮ ಅವಕಾಶಗಳು ದೊರೆಯುತ್ತವೆ. ಭೂಮಿ ಖರೀದಿಯ ವಿಷಯದಲ್ಲಿ ನಿಮ್ಮ ತೀರ್ಮಾನವನ್ನು ಬದಲಾಯಿಸಬೇಕಾಗಬಹುದು. ಷೇರು ಮಾರುಕಟ್ಟೆ ವ್ಯವಹಾರಗಳು ಅಷ್ಟು ಲಾಭ ತರುವುದಿಲ್ಲ. 

ಕಟಕ : ಹಂಗಾಮಿ ನೌಕರಿಯಲ್ಲಿರುವವರಿಗೆ ನೌಕರಿ ಕಾಯಂ ಆಗುವ ಲಕ್ಷಣವಿದೆ. ಮಾರ್ಗದರ್ಶಕರ ಸ್ಪಷ್ಟ ಸಲಹೆಗಳು ನಿಮಗೆ ಹೆಚ್ಚು ಅನುಕೂಲವನ್ನು ತರುತ್ತವೆ. ಧನದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಚಾಣಾಕ್ಷತನ ವೃತ್ತಿಯಲ್ಲಿ  ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಉದ್ಧಟತನದ ಮಾತು ನಿಮಗೆ ತೊಂದರೆ ಮಾಡಬಹುದು. ಸಿದ್ಧ ಉಡುಪು ಮಾರಾಟಗಾರರಿಗೆ ಹೆಚ್ಚಿನ ವ್ಯವಹಾರವಿರುತ್ತದೆ. 

ಸಿಂಹ : ಯಾವುದೇ ಕೆಲಸ ಆರಂಭಿಸಿದ ನಂತರ ಅದನ್ನು ಮುಕ್ತಾಯಗೊಳಿಸುವವರೆಗೂ ಅದರೊಡನೆ ಇರುವುದು ಮುಖ್ಯ. ಧನಾದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡುವುದು ಬೇಡ. ಕಾನೂನು ವಿದ್ಯೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಏಳಿಗೆ ಇರುತ್ತದೆ. ಹಿರಿಯರಿಂದ ನಿಮ್ಮ ಕಾರ್ಯಗಳಿಗೆ ಧನ ಸಹಾಯ ಸಿಗುತ್ತದೆ. 

ಕನ್ಯಾ : ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಕಾರ್ಯ ಸಾಧನೆಗಾಗಿ ಸಾಕಷ್ಟು ಶ್ರಮಪಡಬೇಕಾದೀತು. ಧನಾದಾಯವು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಏಳಿಗೆ ಇರುತ್ತದೆ. ಗೃಹ  ನಿರ್ಮಾಣ ಮಾಡುತ್ತಿರುವವರಿಗೆ ಬೇಕಾದ ಆರ್ಥಿಕ ಸಹಾಯ ದೊರೆಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸಾಕಷ್ಟು ಅನಿವಾರ್ಯದ ಓಡಾಟಗಳು ಎದುರಾಗುತ್ತವೆ.

ತುಲಾ : ನಿಮ್ಮ ಯಶಸ್ಸನ್ನು ನಿಮ್ಮ ಸಹವರ್ತಿಗಳು ಅಥವಾ ನಿಮ್ಮ ಪಾಲುದಾರರು ತಡೆಹಿಡಿಯುವರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ದೊರೆಯುತ್ತದೆ. ಪ್ರಭಾವಿತ ವ್ಯಕ್ತಿಗಳನ್ನು ಸಂಧಿಸುವ ಅವಕಾಶ ದೊರೆತು

ಅವರಿಂದ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವಿರಿ. ವಕೀಲರಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ ಹಾಗೂ ಹೆಚ್ಚು ಸಂಪಾದನೆ ಇರುತ್ತದೆ. ಹಣದ ಒಳ ಹರಿವು ಮಂದಗತಿಯಲ್ಲಿರುತ್ತದೆ. 

ವೃಶ್ಚಿಕ : ವ್ಯವಹಾರದಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾಗಬಹುದು. ಕೆಲವರು ನಿಮ್ಮನ್ನು ಕೆಣಕಲೆಂದೇ ಬರುವರು ಅವರ ಬಗ್ಗೆ ತಾಳ್ಮೆಯಿಂದಿರಿ. ಷೇರುಪೇಟೆ ವ್ಯವಹಾರಗಳಿಂದ ಕೆಲವರಿಗೆ ಹೆಚ್ಚಿನ ಸಂಪಾದನೆಯಾಗಬಹುದು. ತಾಂತ್ರಿಕ ತಜ್ಞರಿಗೆ ಅಧಿಕ ಆಯಾಸದಿಂದ ಕೆಲಸಗಳು ಬಾಕಿ ಉಳಿಯಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಬಹಳ ಉತ್ತಮ ವ್ಯಾಪಾರ ನಡೆದು ಆದಾಯ ಹೆಚ್ಚುತ್ತದೆ.

ಧನು : ಹಣಕಾಸಿನ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರ ವಹಿಸಿರಿ. ಇಲ್ಲವಾದಲ್ಲಿ ನಷ್ಟ ಸಂಭವಿಸಬಹುದು. ನಿಮ್ಮ ಸಾಮರ್ಥ್ಯವನ್ನು ಒರೆಹಚ್ಚಿ ಕೆಲಸಮಾಡಿದಲ್ಲಿ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಯೋಜನಾಬದ್ಧ ಕೆಲಸಗಳಿಂದ ಪ್ರಗತಿಯನ್ನು ಕಾಣಬಹುದು. ಹಣದ ಒಳ ಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು. ಇತರರ ನಯವಂಚನೆ ಮಾತುಗಳಿಗೆ ಬೆರಗಾಗದಿರಿ.

ಮಕರ : ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಸಂತೋಷವಾಗುತ್ತದೆ. ಮಂದಗತಿಯಲ್ಲಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಲು ಸಿಬ್ಬಂದಿಗೆ ತಾಕೀತು ಮಾಡಬೇಕಾಗಬಹುದು. ಕೆಲವರಿಗೆ ಷೇರು ವ್ಯವಹಾರಗಳಿಂದ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಮಹಿಳಾ ರಾಜಕಾರಣಿಗಳಿಗೆ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. 

ಕುಂಭ : ನಿಮ್ಮ ಕೆಲವೊಂದು ಗೊಂದಲದ ಸಮಸ್ಯೆಗಳಿಗೆ ಉತ್ತಮ ಮಾರ್ಗದರ್ಶನ ಪಡೆಯುವುದು ಸಾಕಷ್ಟು ಒಳ್ಳೆಯದು. ಯುವಕರು ಹಣ ಸಂಪಾದನೆಗಾಗಿ ಅನೈತಿಕ ಮಾರ್ಗಗಳನ್ನು ಅನುಸರಿಸುವುದು ಬೇಡ. ಹೋಟೆಲ್ ಉದ್ಯಮದವರಿಗೆ ಉತ್ತಮ ವ್ಯವಹಾರ ನಡೆಯುತ್ತದೆ. ಮನೆಯವರೊಡನೆ ಕಿರುಪ್ರವಾಸ ಹೋಗಿ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಇದೆ. 

ಮೀನ : ಅತಿಯಾದ ಆತ್ಮವಿಶ್ವಾಸ ಸ್ವಲ್ಪ ತೊಂದರೆ ಕೊಡಬಹುದು. ಹಣದ ಒಳಹರಿವಿನಲ್ಲಿ ಏರಿಳಿತವಿರುತ್ತದೆ. ವಿದೇಶಗಳಿಗೆ ಬಟ್ಟೆ ಹಾಗೂ ಔಷಧಿಯನ್ನು ರಫ್ತು ಮಾಡುವವರಿಗೆ ಉತ್ತಮ ಮಾರುಕಟ್ಟೆ ದೊರೆತು ಸಂತಸವಾಗುತ್ತದೆ. ರಿಯಲ್ಎಸ್ಟೇಟ್ ವ್ಯವಹಾರವನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಮಕ್ಕಳು ಹೆಚ್ಚು ಹಣ ಖರ್ಚು ಮಾಡಿಸುವರು. ಕುಟುಂಬದಲ್ಲಿ ಸಾಕಷ್ಟು ಸ್ಥಿರತೆಯನ್ನು ಕಾಣಬಹುದು. ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ.

Leave a Comment