ಮೇಷ : ನಿಮ್ಮದೇ ನಡೆಯಬೇಕೆನ್ನುವ ಹಠ ನಿಮ್ಮಲ್ಲಿ ಇರುತ್ತದೆ. ದೂರ ಪ್ರಯಾಣದ ವಿಹಾರವನ್ನು ಏರ್ಪಾಡು ಮಾಡಿ ಖರ್ಚು ಮತ್ತು ವ್ಯಸನವನ್ನು ತಂದುಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ನಡೆಯಿರಿ. ಹಣದ ಒಳಹರಿವು ಕಡಿಮೆ ಇರುವುದರಿಂದ ಆರ್ಥಿಕ ಸಂಗ್ರಹಣೆಗಾಗಿ ಮಾರ್ಗಗಳನ್ನು ಹುಡುಕುವಿರಿ. ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವವರು ಜಾಗ್ರತೆ ವಹಿಸಿರಿ. ಸಾಹಸ ಕಲಾವಿದರು ತಮ್ಮ ಕಾರ್ಯನಿರ್ವಹಿಸುವಾಗ ಎಚ್ಚರಿಕೆಯಿಂದಿರಿ.
ವೃಷಭ : ಸಿನಿಮಾ ನಟರಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ. ಕೆಲವೊಂದು ವಿಚಾರಗಳ ಬಗ್ಗೆ ಮನಸ್ಸಿನಲ್ಲಿ ಆತಂಕವಿರುತ್ತದೆ. ಅದನ್ನು ದೂರ ಮಾಡಿ ಮುಂದುವರಿಯಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಕಾಲವಿದು. ಕೆಲವರಿಗೆ ವಾಸಸ್ಥಾನ ಬದಲಾಗಬಹುದು. ಕುಟುಂಬದವರ ಮಾತಿಗೆ ಬೆಲೆ ಕೊಡುವುದು ಬಹಳ ಉತ್ತಮ. ನಿಮ್ಮ ಅಭಿರುಚಿಗೆ ಹೊಂದಾಣಿಕೆಯಾಗುವ ಸ್ನೇಹಿತರು ಈಗ ದೊರೆತು ಸಂತೋಷಪಡುವಿರಿ.
ಮಿಥುನ : ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಹಿಡಿತ ಸಾಧಿಸುವಿರಿ. ಮೋಸಗಾರರನ್ನು ಹುಡುಕಿ ವ್ಯವಹಾರಗಳಿಂದ ಹೊರಗಿಡುವಿರಿ. ನಿಮ್ಮ ನಿರ್ಧಾರಗಳು ಸರಿಯೆಂದು ಪಾಲುದಾರರಿಗೆ ಅರಿವು ಮೂಡುತ್ತದೆ. ರಕ್ತ ಸಂಬಂಧಿ ತೊಂದರೆ ಇರುವವರು ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ಅಡವಿಟ್ಟ ವಸ್ತುಗಳನ್ನು ಈಗ ಬಿಡಿಸಿಕೊಳ್ಳಬಹುದು.
ಕಟಕ : ಸಂಸಾರದಲ್ಲಿನ ಜವಾಬ್ದಾರಿ ಹೆಚ್ಚಾಗಲಿದೆ. ಧನದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಗೃಹ ಸಾಮಗ್ರಿಗಳ ಖರ್ಚು ಹೆಚ್ಚಾಗುತ್ತದೆ. ಹೊಸ ಜನರ ಸಂಪರ್ಕದಿಂದ ನಿಮ್ಮ ವ್ಯವಹಾರ ವಿಸ್ತರಿಸುತ್ತದೆ. ಚರ್ಮದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ತಂದೆಯಿಂದ ಮತ್ತು ಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಹಾಯ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ.
ಸಿಂಹ : ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಕೆಲವರಿಗೆ ರಾಜಕೀಯ ಪ್ರವೇಶ ದೊರೆಯುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರಗಳಲ್ಲಿ ಆತ್ಮೀಯರ ಸಲಹೆಗಳನ್ನು ಪರಿಗಣಿಸುವುದು ಬಹಳ ಉತ್ತಮ. ಜಮೀನು ಅಭಿವೃದ್ಧಿಪಡಿಸುವವರಿಗೆ ಈಗ ಉತ್ತಮ ಸಹಕಾರ ದೊರೆಯುತ್ತದೆ. ದೈವದ ಹರಕೆ ತೀರಿಸಲು ಕುಟುಂಬ ಸಮೇತ ಹೊರಡುವಿರಿ. ಹಣದ ಒಳಹರಿವು ಸದ್ಯದ ಅಗತ್ಯವನ್ನು ಪೂರೈಸುವಷ್ಟಿರುತ್ತದೆ.
ಕನ್ಯಾ : ಆಭರಣ ಕೊಳ್ಳುವಾಗ ಮೋಸ ಹೋಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕ ವೃತ್ತಿ ಮಾಡುವವರು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವು ದುಂದುವೆಚ್ಚಗಳಿಂದ ಸಂಸಾರ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತದೆ. ಧನದಾಯವು ಅಗತ್ಯಕ್ಕಿಂತ ಕಡಿಮೆ ಇರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಗಾತಿ ಒದಗುವ ಸಾಧ್ಯತೆ ಇದೆ.
ತುಲಾ : ಬರಹಗಾರರಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತದೆ. ಸಂಶೋಧಕರಿಗೆ ಅತಿ ಅಗತ್ಯವಿದ್ದ ಮಾಹಿತಿಯ ಪುಸ್ತಕ ದೊರೆಯುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ನಿಮ್ಮ ಗುಣ ಕೆಲವರಿಗೆ ಬೇಸರ ತರಿಸಬಹುದು. ತೆರಿಗೆ ಅಧಿಕಾರಿಗಳಿಗೆ ಹೆಚ್ಚು ಒತ್ತಡದ ಕೆಲಸಗಳಿರುತ್ತವೆ. ಕುಟುಂಬದಲ್ಲಿ ಮನಃಸ್ತಾಪ ಬರುವ ಸಂಭವವಿದೆ.
ಬಯಸಿದ್ದ ವರ್ಗಾವಣೆಯ ಬದಲು ದೂರದೂರಿಗೆ ವರ್ಗಾವಣೆ ಆಗಬಹುದು.
ವೃಶ್ಚಿಕ : ಆತ್ಮಗೌರವ ಹೆಚ್ಚಾಗುತ್ತದೆ. ಯಾವುದೇ ಅಪೇಕ್ಷೆ ಇಲ್ಲದೆ ಮಾಡುವ ಕೆಲಸಗಳಿಗೆ ಉತ್ತಮ ಫಲ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಶತ್ರುಗಳನ್ನು ಪತ್ತೆ ಮಾಡಲು ಹಲವಾರು ತಂತ್ರಗಳನ್ನು ಬಳಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ದೊರೆಯುವ ಕಾಲ. ವಿದೇಶದಲ್ಲಿ ಇರುವವರಿಗೆ ದೊರೆಯುತ್ತಿದ್ದ ಸೌಲಭ್ಯಗಳಲ್ಲಿ ಕಡಿತವನ್ನು ಕಾಣಬಹುದು. ಸರ್ಕಾರಿ ಸಂಸ್ಥೆಗಳಿಗೆ ಆಹಾರ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದವರಿಗೆ ಹಣ ಬರುವುದು ನಿಧಾನವಾಗಬಹುದು.
ಧನು : ನಿಮ್ಮ ಕಾರ್ಯದೊತ್ತಡದ ನಡುವೆ ಕುಟುಂಬದ ಕಡೆಗೂ ಗಮನಹರಿಸಿರಿ. ಗೃಹ ತಾಪತ್ರಯಗಳೆಲ್ಲ ನಿಧಾನವಾಗಿ ಕರಗುತ್ತವೆ. ಸೋದರಿಯರು ಸಂಬಂಧ ವೃದ್ಧಿಸಿಕೊಳ್ಳಲು ಬರುವರು. ರಾಜಕೀಯದಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಗಂಭೀರವಾಗಿ ಚಿಂತಿಸಿದಾಗ ಪರಿಹಾರ ದೊರೆಯುತ್ತದೆ. ನಿಮ್ಮೆಲ್ಲಾ ಅಭಿವೃದ್ಧಿಗೆ ಸ್ನೇಹಿತರು ಸಹಕಾರ ನೀಡುವರು. ಆಹಾರ ಪದಾರ್ಥಗಳನ್ನು ಸ್ವತಃ ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ.
ಮಕರ : ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಆಶೀರ್ವಾದ ಇರುತ್ತದೆ. ದೂರ ಪ್ರಯಾಣದಿಂದ ನಿಮಗೆ ಲಾಭವಿರುತ್ತದೆ. ಸೂಕ್ಷ್ಮ ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಎಚ್ಚರವಹಿಸಿರಿ. ಸಹೋದ್ಯೋಗಿಗಳು ನಿಮ್ಮ ಬಗ್ಗೆ ಕಾಳಜಿ ತೋರುವರು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇರುತ್ತದೆ. ಉದ್ಯಮಿಗಳು ಕ್ರಮೇಣ ಇಡೀ ಉದ್ಯಮವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಅವಕಾಶ ಇರುತ್ತದೆ.
ಕುಂಭ : ಹೊಸ ಸ್ಥಳದಲ್ಲಿ ಶಿಕ್ಷಕ ವೃತ್ತಿ ಆರಂಭಿಸುವವರಿಗೆ ಸೂಕ್ತ ಅನೂಕೂಲ ದೊರೆಯುತ್ತದೆ. ಬಾಕಿ ಇರುವ ಕೆಲಸಗಳನ್ನು ಈಗ ಮುಗಿಸಿಕೊಳ್ಳಬಹುದು. ಬಟ್ಟೆ ಉದ್ದಿಮೆದಾರರಿಗೆ ಹೆಚ್ಚು ತಯಾರಿಕಾ ಆದೇಶಗಳು ಬರುವ ಸಾಧ್ಯತೆಗಳಿವೆ. ಧನಾದಾಯವು ನಿಮ್ಮ ನಿರೀಕ್ಷೆಗೆ ಮೀರಿ ಇರುತ್ತದೆ. ಕೆಲವರು ನಿಮ್ಮ ಹೆಸರನ್ನು ಬಳಸಿಕೊಂಡು ಅವರ ಕಾರ್ಯಸಾಧನೆ ಮಾಡಿಕೊಳ್ಳುವರು. ರಾಜಕೀಯ ವ್ಯಕ್ತಿಗಳಿಗೆ ಕೆಲವು ಸನ್ನಿವೇಶಗಳು ಅನುಕೂಲಕರವಾಗಿ ಒದಗಿ ಬರುತ್ತವೆ. ಯುವಕರು ಕೆಲವು ಮೂರ್ಖ ನಿರ್ಧಾರಗಳಿಂದ ಕೈಸುಟ್ಟುಕೊಳ್ಳುವರು.
ಮೀನ : ಅದಿರು ಮಾರಾಟಗಾರರಿಗೆ ವ್ಯವಹಾರ ವಿಸ್ತರಣೆಯಾಗುವ ಸಂದರ್ಭವಿದೆ. ಆಮದು ಮತ್ತು ರಫ್ತು ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ವಿದೇಶಗಳಿಗೆ ಹಣ ವರ್ಗಾವಣೆ ಮಾಡುವವರಿಗೆ ಹೆಚ್ಚು ಕೆಲಸವಿರುತ್ತದೆ. ಕಿರಿಕಿರಿ ಎನ್ನುವ ವಾತಾವರಣ ಸಹೋದ್ಯೋಗಿಗಳ ನಡುವೆ ಇರುತ್ತದೆ. ನಿಮ್ಮ ಸ್ವಂತ ವ್ಯವಹಾರಗಳಿಗಾಗಿ ಒಡಹುಟ್ಟಿದವರನ್ನು ಹೆಚ್ಚು ಓಲೈಕೆ ಮಾಡುವಿರಿ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದರಿಂದ ನಿಮಗೆ ಲಾಭ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ.















