ಬಂಟ್ವಾಳ :ಆರೋಗ್ಯ ವಿಮಾ ಕ್ಷೇತ್ರದ ಮುಂಚೂಣಿಯ ಸಂಸ್ಥೆ ಸ್ಟಾರ್ ಹೆಲ್ತ್ ವಿಮಾ ಸಂಸ್ಥೆಯ ಬಂಟ್ವಾಳ ಶಾಖೆಯ ವಿಮಾ ಸೇಲ್ಸ್ ಮ್ಯಾನೇಜರ್ ನವೀನ್ ಕೊಡ್ಮಾನ್ ಬಳಗದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬಂಟ್ವಾಳ ಶಾಖೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಮಂಗಳೂರಿನ ವಲಯ ಪ್ರಬಂಧಕರಾದ ಉದಯ ರಾಮ ಕಾಂಚನ್ ಭಾಗವಹಿಸಿ ಆರೋಗ್ಯ ವಿಮೆಯ ಬಗ್ಗೆ ಮಾತನಾಡಿ, ಜನರಿಗೆ ಸಿಗುವ ಪ್ರಯೋಜನ ಮತ್ತು ಸಂಸ್ಥೆಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ಶಾಖೆಯ ಪ್ರಬಂಧಕರಾದ ಶರತ್ ಶೆಟ್ಟಿ ಮಾತನಾಡಿ, ಕಳೆದ ಆರ್ಥಿಕ
ವರ್ಷದಲ್ಲಿ ಬಳಗದ ಸಾಧನೆಯನ್ನು ಶ್ಲಾಗಿಸಿ ವಿಮಾ ಸಾಧಕರನ್ನ ಅಭಿನಂದಿಸಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಲೀನಾ ಮತ್ತು ವಿಶಾಲ ಹಾಗೂ ಸುಮಾರು 20ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು ಕಳೆದ ಆರ್ಥಿಕ ವರ್ಷದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು,
ವಿಮಾ ಸೇಲ್ಸ್ ಮ್ಯಾನೇಜರ್ ನವೀನ್ ಕೊಡ್ಮಾನ್ ಸ್ವಾಗತಿಸಿ ಸಾಧಕರನ್ನು ಅಭಿನಂದಿಸಿದರು.
















