ನೆತ್ತರಕೆರೆ: ಎಡುವೆಂಚರ್ ಪಿಯು ಕಾಲೇಜಿನಲ್ಲಿ "ಪ್ರತಿಭಾಮೃತ" ಪ್ರತಿಭೆಗಳ ಅನಾವರಣ ಕಾರ್ಯಕ್ರಮ.

Coastal Bulletin
ನೆತ್ತರಕೆರೆ: ಎಡುವೆಂಚರ್ ಪಿಯು ಕಾಲೇಜಿನಲ್ಲಿ "ಪ್ರತಿಭಾಮೃತ" ಪ್ರತಿಭೆಗಳ ಅನಾವರಣ ಕಾರ್ಯಕ್ರಮ.

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಅಕ್ಷರಾಚಲ ಕ್ಯಾಂಪಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ “ಪ್ರತಿಭಾಮೃತ”  ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವು ಸಂಪ್ರದಾಯಬದ್ಧವಾಗಿ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಸಂಸ್ಥೆಯ ಆಶಯದ ಪ್ರತಿಬಿಂಬವಾಗಿ, ವಿವಿಧ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿತ್ತು.

ಸಮಾರಂಭವನ್ನು ಕಾಲೇಜಿನ ಅಧ್ಯಕ್ಷರಾದ ಅಮೃತ್ ರೈ ಅವರು ಉದ್ಘಾಟಿಸಿದರು. ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ, ಖಜಾಂಚಿ ಅಶ್ವಥ್ ರೈ, ಟ್ರಸ್ಟಿಗಳಾದ ಸಮತಾ ಕಿಶೋರ್,  ದೀಪಿಕಾ ಸಂದೇಶ್ ಟಿ, ಮೋಹನ್ ಕುಮಾರ್ ಬಿ, ಪ್ರಾಂಶುಪಾಲರಾದ ಮಹೇಶ್ ಕೆ.ಎನ್.  ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಆಗಮಿಸಿದ ವಿದೂಷಿ ಡಿಂಪಲ್ ಶಿವರಾಜ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಳೆದ 22 ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಅನೇಕ ವೇದಿಕೆಗಳಲ್ಲಿ ತಮ್ಮ

ಪ್ರತಿಭೆಯನ್ನು ಪ್ರದರ್ಶಿಸಿರುವುದನ್ನು ಉಲ್ಲೇಖಿಸಿ, ಶ್ರಮ ಮತ್ತು ನಿಷ್ಠೆಯಿಂದ ಸಾಧನೆ ಸಾಧ್ಯವೆಂದು ತಿಳಿಸಿದರು.

ತರಗತಿವಾರು ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ಸಂಗೀತ, ನಾಟಕ ಹಾಗೂ ಇತರ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಮೆರೆದರು. ಅಂತಿಮವಾಗಿ ಪ್ರಥಮ ಪಿಯುಸಿ   ಪಿಸಿಎಂಸಿ ಪ್ರಥಮ ಸ್ಥಾನವನ್ನು ಪಡೆದರೆ ಪ್ರಥಮ ಪಿಯುಸಿ   ಪಿಸಿಎಂಬಿ - ಎ ವಿಭಾಗವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕೊನೆಯಲ್ಲಿ, ಅತಿಥಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.ಸಂಸ್ಕೃತ ಉಪನ್ಯಾಸಕ ಅನಂತ್ ಭಟ್ ಸ್ವಾಗತಿಸಿದರು.ಕನ್ನಡ ಉಪನ್ಯಾಸಕ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಭಾಷಾ ವಿಭಾಗ ಕಾರ್ಯಕ್ರಮ ಸಂಯೋಜಿಸಿತು.

Leave a Comment