Coastal Bulletin

ತುಂಬೆ: ಡಿ.17ರಂದು ತುಂಬೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾ ಪಂ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ಇವರ ನೇತ್ರತ್ವದಲ್ಲಿ ವಿಕಲ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತ್ತು. ಗ್ರಾಮದಲ್ಲಿ 46 ವಿಕಲ ಚೇತನರು ಇದ್ದು .ಈ ಕಾರ್ಯಕ್ರಮದಲ್ಲಿ ಹೆಚ್ಚಿನ ವಿಕಲ ಚೇತನ ಫಲಾನುಭವಿಗಳು ಹಾಜರಿದ್ದರು ,ವಿಕಲ ಚೇತನ ಗ್ರಾಮೀಣ ಪುರ್ನವಸು ಕಾರ್ಯಕರ್ತ ಮಹಮ್ಮದ್ ಸಮೀರ್ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು. ಪಂಚಾಯತ್ ಅಭಿವೃದಿ ಅಧಿಕಾರಿ ಶ್ರೀಮತಿ ಚಂದ್ರಾವತಿ ವಿಕಲ ಚೇತನರಿಗೆ ಗ್ರಾಮ ಪಂಚಾಯತ್ ನಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

ಅಧ್ಯಕ್ಷರು ತನ್ನ ಅವಧಿಯಲ್ಲಿ ವಿಕಲ ಚೇತನರಿಗೆ ನೀಡಿದ ಸೌಲಭ್ಯಗಳ ಅಂಕಿ ಅಂಶಗಳ ಮಾಹಿತಿ ನೀಡಿದರು.ವಿಕಲ ಚೇತನ ಗ್ರಾಮೀಣ ಪುನರ್ವವಸತಿ ಕಾರ್ಯಕರ್ತ ಮಹಮ್ಮದ್ ಸಮೀರ್ ರವರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಅಭಿನಂದನೆಗಳನು ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ  ಪಂಚಾಯತ್ ಸದಸ್ಯರಾದ ಇಬ್ರಾಹಿಂ ವಳವೂರು ,ಅಬ್ದುಲ್

ಅಝೀಝ್,ಅರುಣ್ ಕುಮಾರ್ ಗಾಣದ ಲಚ್ಚಿಲ್,ಮಹಮ್ಮದ್ ಝಹೂರ್ ,ಶ್ರೀಮತಿ ಹೇಮಲತಾ ಜಿ ಪೂಜಾರಿ ,ಅತಿಕಾ ಬಾನು ,ಶಶಿಕಲಾ ಮನೋಹರ ಕೊಟ್ಟಾರಿ ಜಯಂತಿ ಶ್ರೀದರ ,ಶ್ರೀಮತಿ ಜಯಂತಿ ನಾಗೇಶ್ ಪಂಚಾಯತ್ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ,ಪಂಚಾಯತ್ ಸಿಬ್ಬಂದಿ ಪ್ರಕೃತಿ ಸಂಜೀವಿನಿ ಘಟಕದ ಸದ್ಯಸ್ಯರು ಉಪಸ್ಥಿತರಿದ್ದರು.

Leave a Comment