ಮೇಷ ರಾಶಿ : ಚಂದ್ರ ಶನಿ ಹನ್ನೊಂದನೇ ಮನೆಯಲ್ಲಿ ಇದ್ದಾರೆ. ಹಾಲು ಹಾಲಿನ ಉತ್ಪನ್ನ ಹಾಗೂ ಕಬ್ಬಿಣ ಎಣ್ಣೆ ಹತ್ತಿ ಈ ವ್ಯಾಪಾರಿಗಳಿಗೆ ಈ ವಾರ ಲಾಭ ಇದೆ. ಶುಕ್ರ ಮೂರನೇ ಮನೆಯಲ್ಲಿ, ವಾಹನದಿಂದಲೂ ಲಾಭ. ಅತ್ತೆಯ ಮನೆಯ ಕಡೆಯಿಂದ ಲಾಭ ಇದೆ.
ವೃಷಭ ರಾಶಿ : ಹತ್ತನೇ ಮನೆಯಲ್ಲಿ ಚಂದ್ರ ಶನಿ ವೃತ್ತಿಯಲ್ಲಿ ಒತ್ತಡ ಇರುತ್ತದೆ. ವಾರದ ಮಧ್ಯೆ ಸರಿ ಹೋಗುತ್ತದೆ. ವಾರದ ಮಧ್ಯದಿಂದ ವಾರಾಂತ್ಯದ ವರೆಗೂ ಖುಷಿಉಲ್ಲಾಸ. ಕೊಂಚ ಖರ್ಚುಗಳು ಮಿತಿ ಮೀರಿದರೂ ಅಲ್ಲಲ್ಲೇ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ಎರಡನೇ ಮನೆಯ ಶುಕ್ರನಿಂದ ಹಣಕಾಸಿಗೆ ಕೊರತೆ ಬರುವುದಿಲ್ಲ.
ಮಿಥುನ ರಾಶಿ : ಈ ವಾರದ ಚಂದ್ರ ಒಂಬತ್ತು ಹತ್ತು ಹನ್ನೊಂದನೇ ಮನೆಯಲ್ಲಿ ಸಂಚರಿಸುತ್ತ ನಿಮಗೆ ಶುಭಫಲಗಳನ್ನು ಕೊಡುತ್ತಾನೆ. ಪ್ರವಾಸ, ಪಿಕ್ ನಿಕ್ ವಿಹಾರ ತಾಣಗಳಿಗೆ ಭೇಟಿ ಕೊಡುವಿರಿ. ನಿಮ್ಮ ರಾಶಿಯಲ್ಲೇ ಇರುವ ಶುಕ್ರ ನಿಮಗೆ ಮಾನಸಿಕ ಆನಂದವನ್ನೂ ಸಂತೃಪ್ತಿಯನ್ನೂ ಹೆಚ್ಚಿಸುತ್ತಾನೆ.
ಕಟಕ ರಾಶಿ : ಹನ್ನೆರಡರಲ್ಲಿ ಶುಕ್ರ ರಾಶಿಯಲ್ಲೇ ಕುಜ ನಿಮಗೆ ಒತ್ತಡ ಮತ್ತು ಖರ್ಚು ಹೆಚ್ಚಿಸುತ್ತಾರೆ. ಆದರೆ ಹನ್ನೊಂದರ ಸೂರ್ಯ ನಿಮಗೆ ಶಕ್ತಿಯನ್ನು ಯಾವುದೇ ಸವಾಲು ಎದುರಿಸುವ ಕೆಚ್ಚನ್ನೂ ಕೊಟ್ಟು ನೀವು ಅಡೆತಡೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುವಂತೆ ಮಾಡುತ್ತಾನೆ. ಸರ್ಕಾರದಿಂದ ಲಾಭ ಇದೆ.
ಸಿಂಹ ರಾಶಿ : ಸೂರ್ಯ ಹತ್ತನೇ ಮನೆ, ಹನ್ನೊಂದನೇ ಮನೆ ಶುಕ್ರ ಇಬ್ಬರೂ ನಿಮಗೆ ಈಗ ಅನುಕೂಲರು. ಗುರು ಒಂಬತ್ತನೇ ಮನೆಯಲ್ಲಿ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಸಾಥ್ ಕೊಡಲು ತಯಾರಾಗಿಇದ್ದಾನೆ. ನಿಮ್ಮೆಲ್ಲ ಯೋಜನೆಗಳಿಗೆ ಗುರುವಿನ ಅನುಗ್ರಹ ಆಶೀರ್ವಾದ ಇದೆ. ಕೆಲಸಯಾರ್ಯಗಳಲ್ಲಿ ಜಯಶೀಲರಾಗುತ್ತೀರಿ. ಭೂಮಿ ವ್ಯವಹಾರದಲ್ಲಿ ನಷ್ಟವಿದೆ ಎಚ್ಚರಿಕೆಯಿಂದ ನಿಭಾಯಿಸಿ.
ಕನ್ಯಾ ರಾಶಿ : ಈ ವಾರ ನಿಮಗೆ ಚಂದ್ರ ಆರು ಏಳು ಎಂಟನೇ ಮನೆಯಲ್ಲಿ ಸಂಚರಿಸುತ್ತ ಶುಭ ಪ್ರದನಾಗಿದ್ದಾನೆ. ಶನಿ ಆರನೇ ಮನೆಯಲ್ಲಿಇದ್ದು ಶತ್ರುಗಳನ್ನು ದೂರ ಮಾಡಿಸುತ್ತಾನೆ ಹಾಗೂ ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಹನ್ನೊಂದರಲ್ಲಿ ಕುಜನೂ ಸಹ ನಿಮಗೆ ಅನುಕೂಲಕರನಾಗಿದ್ದಾನೆ. ಭೂಮಿಯಿಂದ ಲಾಭ ಇದೆ.
ತುಲಾ ರಾಶಿ : ನಿಮಗೆ ಈಗ ಅದೃಷ್ಟದ ದಿನಗಳು. ಉನ್ನತ ಅಧಿಕಾರ ಸಿಗಬಹುದು. ವಿದೇಶ ಪ್ರಯಾಣ ಯೋಗ ಬರಬಹುದು. ವೃತ್ತಿಯಲ್ಲಿ ಒಳ್ಳೆಯ ಬಡ್ತಿ ಸಿಗಬಹುದು. ಏನುಬೇಕಾದರೂ ಆಗಬಹುದು.
ಈಗ ನಿಮಗೆ ಸಮಯ ಬಹಳ ಚೆನ್ನಾಗಿದೆ. ಜನ ನಿಮಗಾಗಿ ಕಾದು ಕುಳಿತಿರುತ್ತಾರೆ. ನಿಮ್ಮ ಒಂದು ಮಾತಿಗೆ ಈಗ ಕೋಟಿವರಹದಷ್ಡು ಬೆಲೆ ಇದೆ.
ವೃಶ್ಚಿಕ ರಾಶಿ : ಈಗ ನಿಮಗೆ ಕೊಂಚ ಪರೀಕ್ಷೆಯ ಕಾಲ. ನಿಮ್ಮ ಯೋಜನೆಗಳು ನಿಮ್ಮ ಅನಾಲಿಸಿಸ್ ಉಲ್ಟಾ ಆಗಬಹುದು. ಮನಸ್ಸಿಗೆ ಮುಜಗರ ಆಗುವ ಸಂಗತಿಗಳು ನಡೆಯಬಹುದು. ಬೇಸರ ಮಾಡಿಕೊಳ್ಳದೆ ಮೌನಧಾರಣೆ ಮಾಡಿ. ಅನವಶ್ಯಕ ಮಾತಾಡುವುದರಿಂದ ಪ್ರಯೋಜನವಿಲ್ಲ. ಮೌನವಾಗಿದ್ದು ನಿಮ್ಮ ಗುರಿಯತ್ತ ಸಾಗುವ ಪ್ರಯತ್ನ ಮಾಡಿ.
ಧನಸ್ಸು ರಾಶಿ : ಈಗ ಬದಲಾವಣೆಯ ಕಾಲ. ಹೊಸ ಜೀವನ ಹೊಸ ಅನುಭವಕ್ಕೆ ತೆರೆದುಕೊಳ್ಳುವ ಸಮಯ. ನೀವು ಊಹಿಸದೇ ಇದ್ದ ದೊಡ್ಡ ಅಧಿಕಾರ ಪದವಿ ಈಗ ನಿಮ್ಮನ್ನು ಹುಡುಕಿ ಬರುತ್ತದೆ. ಎಲ್ಲರೂ ನಿಮ್ಮ ಮಾತು ಕೇಳುತ್ತಾರೆ. ನಿಮ್ಮ ನಿರ್ಧಾರ ನಿಮ್ಮ ಯೋಜನೆಗಳು ಈ ವಾರದಲ್ಲಿ ಫಲ ಕಾಣುತ್ತದೆ. ಯಶಸ್ಸಿನ ಮೆಟ್ಡಿಲನ್ನು ಏರುವ ಸಮಯ. ಅವಿವಾಹಿತರಿಗೆ ವಿವಾಹ ಯೋಗ ಇದೆ.
ಮಕರ ರಾಶಿ : ಬುಧ ನಾಲ್ಕನೇ ಮನೆಯಲ್ಲಿ ಇರುವುದು ನಿಮಗೆ ಈಗ ತುಂಬಾ ಸಹಾಯ ಮಾಡುತ್ತಿದೆ. ಭಾಗ್ಯಸ್ಥಾನದ ಅಧಿಪತಿ ಸುಖಸ್ಥಾನದಲ್ಲಿ ಇರುವುದು ನಿಮಗೆ ಶುಭಫಲಗಳನ್ನು ನೀಡುತ್ತಿದೆ. ನಾಲ್ಕರ ಗುರು ಹಾಗೂ ರಾಹುವಿನದೋಷ ಬುಧನಿಂದ ಕಡಿಮೆಯಾಗುತ್ತದೆ.
ಕುಂಭ ರಾಶಿ : ರಾಹು ಒಬ್ಬನೇ ಈಗ ನಿಮಗೆ ಬಲ. ರಾಹು ಹಣ ಕೊಡುತ್ತಾನೆಯೇ ವಿನಾ ಅಧಿಕಾರ ಕೊಡಿಸಲ್ಲ. ಹಾಗಾಗಿ ನಿರುದ್ಯೋಗಿಗಳು ಕಾಯಬೇಕು. ದೊಡ್ಡ ಅಧಿಕಾರಕ್ಕಾಗಿ ಆಸೆ ಪಡುವವರು ಈಗ ಕೈಚೆಲ್ಲುವುದೇ ಹಿತ. ಈಗ ನಿನಗೆ ಅಧಿಕಾರದ ಯೋಗ ಇಲ್ಲ. ವೃತ್ತಿಯಲ್ಲಿ ವರ್ಗಾವಣೆ ಮತ್ತುಒತ್ತಡ ಇರುತ್ತದೆ.
ಮೀನ ರಾಶಿ : ಸಾಡೆಸಾತಿ ಇದ್ದರೂ ಈಗ ನಿಮಗೆ ಸಂಪೂರ್ಣ ಗುರುಬಲ ಇರುವುದು ನಾನಾ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ನೀವು ಊಹೆ ಮಾಡದಂತಹ ಅಧಿಕಾರ ಹುದ್ದೆ ನಿಮ್ಮನ್ನು ಅರಸಿಬರುತ್ತದೆ. ಆದರೆ ಒತ್ತಡವೂ ಹಾಗೆಯೇ ಇರುತ್ತದೆ. ನಾಲ್ಕರಲ್ಲಿ ಶುಕ್ರ ವಾಹನದಿಂದ ಲಾಭ ಕೊಡಿಸುತ್ತಾನೆ. ಹೊಸ ಆಸ್ತಿಕೊಳ್ಳುವ ಬಗ್ಗೆ ಯೋಚಿಸುತ್ತೀರಿ















