Coastal Bulletin

ಮೇಷ‌ : ನಿಮ್ಮ ನಡವಳಿಕೆಯಿಂದ ನೀವು ಮಾಡುವ ಕೆಲಸಗಳಲ್ಲಿ ಹೆಜ್ಜೆಹೆಜ್ಜೆಗೂ ಸಮಸ್ಯೆಗಳು ಬರಬಹುದು. ಅನವಶ್ಯಕ ಚಿಂತೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ನಿಮ್ಮ ಕೆಲವು ಯೋಜನೆಗಳು ಖರ್ಚಿಗೆ ದಾರಿಯಾದರೂ ಮುಂದೆ ಫಲವಿರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಉತ್ಸಾಹ ಇರುತ್ತದೆ.

ವೃಷಭ : ಒಡಹುಟ್ಟಿದವರಿಂದ ನಿಮಗೆ ಸಹಕಾರ ದೊರೆಯುತ್ತದೆ. ಎಲ್ಲರೆದುರಿಗೆ ಮನೋಭಿಲಾಷೆಯನ್ನು ವ್ಯಕ್ತಪಡಿಸುವುದು ಒಳ್ಳೆಯದು. ಅವಿವಾಹಿತರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆ ಮಾಡುವವರು ಸಾಕಷ್ಟು ಆಲೋಚನೆ ಮಾಡುವುದು ಒಳಿತು. ನಿಮ್ಮ ಮಹತ್ವದ ಯೋಜನೆಗಳ ಜಾರಿಗೆ ಕಾದುನೋಡುವ ತಂತ್ರ ಬಳಸಿರಿ.

ಮಿಥುನ : ಅಭಿವೃದ್ಧಿಯಲ್ಲಿ ಕೆಲವು ಎಡರುತೊಡರುಗಳು ಬಂದರೂ ಅಭಿವೃದ್ಧಿ ಸಾಗುತ್ತದೆ. ಸದಾಕಾಲ ನಿಮ್ಮ ಪಕ್ಕದಲ್ಲಿ ಇರುವವರು ನಿಮ್ಮನ್ನು ವಂಚಿಸಬಹುದು ಎಚ್ಚರ. ಗೃಹ ನಿರ್ಮಾಣದ ಯೋಜನೆಗೆ ಆಲೋಚನೆ ಮಾಡುವಿರಿ. ಹಿತಶತ್ರುಗಳ ಕಾಟ ಕಡಿಮೆಯಾಗುವ ಸಂದರ್ಭವಿದೆ. ಬಟ್ಟೆ ವ್ಯಾಪಾರ ಮಾಡುವವರಿಗೆ ಸ್ವಲ್ಪ ಆದಾಯ ಹೆಚ್ಚುತ್ತದೆ. ಮಕ್ಕಳಿಗಾಗಿ ಧಾರ್ಮಿಕ ಆಚರಣೆಯನ್ನು ಕೈಗೊಳ್ಳುವಿರಿ. 

ಕಟಕ : ಅಪರಿಚಿತರೊಡನೆ ನಿಮ್ಮ ಯಾವುದೇ ವಿಷಯಗಳನ್ನು ಹಂಚಿಕೊಳ್ಳಬೇಡಿರಿ, ಇದು ನಷ್ಟಕ್ಕೆ ಕಾರಣವಾಗಬಹುದು. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು. ಸ್ಥಿರಾಸ್ತಿ ವಿಷಯದಲ್ಲಿ ಮುಂದುವರಿಯುವುದು ಬೇಡ. ಕೆಲವು ರಾಜಕೀಯ ನಾಯಕರಿಗೆ ವರಿಷ್ಠರ ಸಂಪರ್ಕ ದೊರೆಯಬಹುದು. ನಿಮ್ಮ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು.

ಸಿಂಹ : ಕೆಲಸಗಳಲ್ಲಿ ತಾಂತ್ರಿಕವಾಗಿ ತಪ್ಪಾಗದಂತೆ ಎಚ್ಚರವಹಿಸಿರಿ. ಸ್ವಲ್ಪ ತಿರುಗಾಟ ಹೆಚ್ಚಾಗಬಹುದು. ಸರ್ಕಾರಿ ಸವಲತ್ತುಗಳು ಈಗ ಸಿಗಲಾರಂಭಿಸುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಮೂಳೆ ತೊಂದರೆ ಅಥವಾ ಅಜೀರ್ಣ ಪ್ರಕ್ರಿಯೆ ಸಾಕಷ್ಟು ಬಾಧಿಸಬಹುದು. ಷೇರುಪೇಟೆ ವ್ಯವಹಾರಗಳು ಅಷ್ಟು ಒಳಿತಲ್ಲ. ನಿವೇಶನ ಖರೀದಿ ಮಾಡಬಹುದು.

ಕನ್ಯಾ : ಅತ್ಯಧಿಕ ಆತ್ಮವಿಶ್ವಾಸದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೋಗುವುದು ಸರಿಯಲ್ಲ. ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಮುನ್ನಡೆ ಸಾಧಿಸುವಿರಿ. ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ಉನ್ನತ ಹುದ್ದೆಗೆ ಏರುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. 

ತುಲಾ : ಬಂಧು ಮಿತ್ರರ ಸಲಹೆಗೆ ಗಮನ ಕೊಡುವುದು ಒಳಿತು. ಕೃಷಿಕರಿಗೆ ಅವರ ಬೆಳೆಯ ಮೂಲಕ ಹೆಚ್ಚಿನ ಲಾಭ ಬರುತ್ತದೆ. ಕಾರ್ಮಿಕರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ

ನಿರಾಳತೆಯನ್ನು ಕಾಣಬಹುದು. ಧನಾದಾಯವು ಸಾಮಾನ್ಯವಾಗಿರುತ್ತದೆ. ನಿಮ್ಮ ಒಣ ಪ್ರತಿಷ್ಠೆ ಮತ್ತು ದಡ್ಡತನದ ತೀರ್ಮಾನಗಳಿಂದ ನಷ್ಟ ಅನುಭವಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. 

ವೃಶ್ಚಿಕ : ಭ್ರಾತೃವರ್ಗದವರೂ ನಿಮ್ಮೊಡನೆ ಹೊಂದಾಣಿಕೆಗೆ ಬರುವರು. ಮಕ್ಕಳಿಗೆ ವಿದ್ಯಾಭ್ಯಾಸ ಅಥವಾ ಉದ್ಯೋಗದಲ್ಲಿ ಅನುಕೂಲವಿರಲಿದೆ. ಧನದಾಯವು ಉತ್ತಮವಾಗಿರುತ್ತದೆ. ಹಳೆಯ ಸಾಲ ಈಗ ವಾಪಸ್ ಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಿಮ್ಮ ಪಾಲಿನ ಬಂಡವಾಳವನ್ನು ಸಾಕಷ್ಟು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಬಟ್ಟೆ ನೇಯುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಧನು : ಹೆಚ್ಚು ತಿರುಗಾಟದಿಂದ ಆಯಾಸವಾಗಬಹುದು. ನಿಮ್ಮ ಕೆಲವು ಸಮಸ್ಯೆಗಳು ನಿಧಾನವಾಗಿ ಕರಗುತ್ತವೆ. ಬೇಕರಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ಬಗ್ಗೆ ಮಾತನಾಡುವವರನ್ನು ಉಪೇಕ್ಷಿಸಿ ಮುನ್ನಡೆಯುವುದು ಉತ್ತಮ. ಆಪ್ತರ ಕಷ್ಟಕ್ಕೆ ಸಹಾಯ ಮಾಡುವಿರಿ. 

ಮಕರ : ಸಾಮಾಜಿಕವಾಗಿ ಬದುಕಿನಲ್ಲಿ ಹೊಸ ಉತ್ಸಾಹ, ಹುರುಪು ಮೂಡುತ್ತದೆ. ಕಾನೂನಿನ ಸಮಸ್ಯೆಗಳು ಸರಾಗವಾಗಿ ಬಗೆಹರಿದು ಮನಸ್ಸಿಗೆ ನಿರಾಳವೆನಿಸುತ್ತದೆ. ಗುತ್ತಿಗೆದಾರರು ಕೈಗೆತ್ತಿಕೊಂಡ ಕೆಲಸಗಳನ್ನು ಮಾಡಿ ಮುಗಿಸುವುದರಿಂದ ಹೊಸ ಗುತ್ತಿಗೆಗಳು ದೊರೆಯುವ ಸಾಧ್ಯತೆ ಇದೆ. ಇಂಧನ ಮಾರಾಟಗಾರರಿಗೆ ಸಾಕಷ್ಟು ಲಾಭ ದೊರೆಯುತ್ತದೆ. ಒಡಹುಟ್ಟಿದವರ ಸಹಕಾರ ನಿರೀಕ್ಷಿತ ಸಮಯದಲ್ಲಿ ದೊರೆಯುತ್ತದೆ. 

ಕುಂಭ : ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಅರ್ಧ ಆರ್ಥಿಕ ಸಂಕಷ್ಟ ನೀಗುತ್ತದೆ. ಕುಟುಂಬದವರಲ್ಲಿ ಭಿನ್ನಾಭಿಪ್ರಾಯಗಳಂತಹ ಸನ್ನಿವೇಶ ಕಂಡುಬಂದು ಮನಸ್ಸಿಗೆ ನೋವಾಗುತ್ತದೆ. ಬಹುದಿನಗಳಿಂದ ಮುಂದೂಡಲ್ಪಟ್ಟಿದ್ದ ದೂರ ಪ್ರಯಾಣ ಈಗ ಸಾಕಾರವಾಗುತ್ತದೆ. ಭಾಷೆಗಳನ್ನು ಅಧ್ಯಯನ ಮಾಡುವವರಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತದೆ. 

ಮೀನ : ಪೂರ್ವನಿಯೋಜಿತ ಕೆಲಸಗಳು ಕೆಲವರ ಸಹಕಾರದಿಂದ ಮಂದಗತಿಯಲ್ಲಿ ಆಗುತ್ತದೆ. ನಿಮ್ಮ ನಕಾರಾತ್ಮಕ ನಡವಳಿಕೆಯಿಂದ ಜನರೆದುರು ಮುಜುಗರಕ್ಕೆ ಒಳಗಾಗುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮ್ಮ ಪಾಲು ಕಡಿಮೆಯಾಗಬಹುದು. ಐಶಾರಾಮಿ ಖರ್ಚುಗಳ ಬಗ್ಗೆ ಜಾಗೃತೆ ವಹಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. 

Leave a Comment