Coastal Bulletin

ಮೇಷ ರಾಶಿ :ಈಗ ನಿಮಗೆ ಸೂರ್ಯ ಮೂರನೇ ಮನೆ ಪ್ರವೇಶವಾದಾಗ ಬಹಳ ಶುಭಫಲಗಳು ಇವೆ. ಸಾಹಸದಿಂದ ಯಾವ ಕೆಲಸಕ್ಕೆ ಕೈ ಹಾಕಿದರೂ ಜಯಶೀಲರಾಗುತ್ತೀರಿ. ಈಗ ಶನಿ ಆರನೇ ಮನೆಯಲ್ಲಿ ಇದ್ದು ಧನಲಾಭವನ್ನು ಕೊಡುತ್ತಿದ್ದಾನೆ. ನಾಲ್ಕರಲ್ಕಿ ಶುಕ್ರ ವಾಹದಿಂದ ಲಾಭ, ವಿದ್ಯುತ್‌ಗೆ ಸಂಬಂಧಿಸಿದ ವೃತ್ತಿಗಳಲ್ಲಿ ಇರುವವರಿಗೆ ಲಾಭ.‌

ವೃಷಭ ರಾಶಿ :12ನೇ ಮನೆಯಲ್ಲಿ ಗುರು ರಾಹು ಬುಧ ಇದ್ದು ಖರ್ಚುಗಳು ಆಗುತ್ತಿದ್ದರೂ ಧನಲಾಭವೂ ಇದೆ. ವೃತ್ತಿಯಲ್ಲಿ ಉನ್ನತ ಹುದ್ದೆ ಬಡ್ತಿ, ವೇತನ ಹೆಚ್ಚಳ ಎಲ್ಲವೂ ಇದೆ. ಹತ್ತರಲ್ಲಿ ಶನಿ ವೃತ್ತಿಯಲ್ಲಿ ಸ್ಥಿರತೆ ಕೊಡುತ್ತಾನೆ. ಆರರ ಕೇತು ಧೈರ್ಯ ಸಾಹಸ ಪ್ರವೃತ್ತಿ ಕೊಡುತ್ತಾನೆ. ಮೂರರ ಕುಜ ಧನಲಾಭವನ್ನು, ಶುಕ್ರ ಸೌಖ್ಯಗಳನ್ನೂ ಕೊಡುತ್ತಾರೆ. 

ಮಿಥುನ ರಾಶಿ :ಈಗ ಹನ್ನೆರಡನೇ ಮನೆಯಲ್ಲಿ ಇರುವ ಸೂರ್ಯ ನಿಮ್ಮ ರಾಶಿಗೆ ಬರುತ್ತಾನೆ. ಕೊಂಚ ಒತ್ತಡ ಇರುತ್ತದೆ. ‌ಹನ್ನೊಂದನೇ ಮನೆಯಲ್ಲಿ ರಾಹು ಗುರು ಬುಧ ಧನಲಾಭ ಕೊಡುತ್ತಾರೆ.‌ ಎರಡನೇ ಮನೆಯ ಶುಕ್ರ ಕೂಡ ನಿಮಗೆ ಶುಭಫಲಗಳನ್ನು ಕೊಡುತ್ತಾನೆ.

ಕಟಕ ರಾಶಿ :ಹತ್ತನೇ ಮನೆಯಲ್ಲಿ ಬುಧ ಲಕ್ಷ್ಮೀ ಕಟಾಕ್ಷ ಕೊಡುತ್ತಾನೆ. ಹತ್ತರ ಗುರು ಹಾಗೂ ರಾಹು ವೃತ್ತಿಯಲ್ಲಿ ಒತ್ತಡ ಕೊಡುತ್ತಾರೆ. ಆದರೂ ಯೋಚನೆ ಬೇಡ. ನೀವು ನಿಭಾಯಿಸಬಲ್ಲಿರಿ. ಈಗ ಅಷ್ಟಮ ಶನಿ ಇರುವುದರಿಂದ ಕೆಲಸ ಕಾರ್ಯಗಳು ನಿಧಾನ. ಸ್ವಲ್ಪ ಶ್ರಮ ಬೇಡುತ್ತದೆ.

ಸಿಂಹ ರಾಶಿ : ಬೇರೆಲ್ಲ ಗ್ರಹಗಳಿಗಿಂತ ಗುರು ಒಂಬತ್ತನೆಯ ಮನೆಯಲ್ಲಿ‌ ಇರುವುದು ಬಹಳ ಶುಭಫಲಗಳನ್ನು ನೀಡುತ್ತದೆ. ಬುಧ ಒಂಬತ್ತನೆಯ ಮನೆಯಲ್ಲಿ ಇರುವುದು ಕೊಂಚ ನಷ್ಟವನ್ನು ತೋರಿಸಿದರೂ ಗುರುಬಲ ಅವೆಲ್ಲವನ್ನೂ ತೊಡೆದು ಹಾಕುತ್ತದೆ. ಈಗ ಹತ್ತನೇ ಮನೆಯಲ್ಲಿ ಇರುವ ಸೂರ್ಯ ಹನ್ನೊಂದನೆಯ ಮನೆಗೆ ಬಂದಾಗ ಇನ್ನಷ್ಟು ಲಾಭ ಇದೆ.

ಕನ್ಯಾ ರಾಶಿ :ಈಗ ಶನಿಬಲ ಚೆನ್ನಾಗಿದೆ. ಶನಿ ನಿಮ್ಮ ಕೆಲಸ ಕಾರ್ಯಗಳನ್ನು ಹಗುರವಾಗಿಸುವುದಲ್ಲದೇ ಧನಲಾಭವನ್ನೂ ಕೊಡುತ್ತಾನೆ. ‌ಆದರೆ ಎಂಟರಲ್ಲಿ ಗುರು ಮತ್ತು ರಾಹು ಇರುವುದು ಸ್ವಲ್ಪ ಆಪತ್ತನ್ನು ತೋರಿಸುತ್ತದೆ. ಆರೋಗ್ಯ ಜೋಪಾನವಾಗಿ ನೋಡಿಕೊಳ್ಳಿ. ಒಂಬತ್ತರಲ್ಲಿ ಸೂರ್ಯ, ಹನ್ನೊಂದನೇ ಮನೆಯಲ್ಲಿ ಕುಜ-ಶುಕ್ರರು ನಿಮಗೆ ಲಾಭದಾಯಕರಾಗಿ ಇದ್ದಾರೆ. ಮಾತಿನಿಂದ ಅಪಾಯ ಇದೆ.

ತುಲಾ ರಾಶಿ : ಗುರುಬಲ ಇದೆ. ಹೆದರಬೇಕಿಲ್ಲ. ಬಿರುಬೇಸಗೆಯಲ್ಲಿ ತಂಗಾಳಿ ಬೀಸಿದ ಹಾಗೆ ಗುರುಬಲ ನಿಮ್ಮ

ಎಷ್ಟೋ‌ ಒತ್ತಡಗಳನ್ನೂ ಹೊರೆಗಳನ್ನೂ ಇಳಿಸುತ್ತದೆ. ಸೂರ್ಯ ಒಂಬತ್ತನೆಯ ಮನೆಗೆ ಬಂದಾಗ ಇನ್ನಷ್ಡು ಶುಭಫಲಗಳು ನಿಮ್ಮದಾಗಲಿದೆ. ಕೆಲಸ ಕಾರ್ಯಗಳು ನಿಧಾನವಾದರೆ ಬೇಸರಿಸಬೇಡಿ. ನಿಧಾನವಾದರೂ ಗಟ್ಟಿಯಾಗಿ ಪೂರ್ಣಗೊಳ್ಳುತ್ತದೆ. 

ವೃಶ್ಚಿಕ ರಾಶಿ :ಈಗ ನಿಮಗೆ ಬದಲಾವಣೆಯ ಕಾಲ.‌ ಜೀವನ ಇನ್ನೊಂದು ದಿಕ್ಕಿಗೆ ಹೊರಳುವ ಸಮಯ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವೃತ್ತಿಯಲ್ಲಿ ಬದಲಾವಣೆ ಇದೆ. ಮನಸ್ಸಿಗೆ ಖುಷಿ ಕೊಡುವ ವಿಚಾರಗಳು ಬಹಳಷ್ಟು ನಡೆಯುತ್ತದೆ. ಭಾಗ್ಯಗಳನ್ನು ಬರಮಾಡಿಕೊಳ್ಳುವ ಸಮಯ. 

ಧನಸ್ಸು ರಾಶಿ : ಧನಸ್ಸುರಾಶಿ ಈಗ ಗುರುಬಲ ಶನಿಬಲ ಎರಡೂ ಇರುವುದರಿಂದ ಎಲ್ಲವೂ ಎಲ್ಲರೂ ನಿಮ್ಮ ಕಡೆಗೆ. ಕಳೆದ ವರ್ಷ ಜಟಿಲವಾಗಿದ್ದ ಕೆಲಸಗಳೆಲ್ಲ ಈಗ ಸುಲಭದಲ್ಲಿ ನೆರವೇರುತ್ತದೆ. ವಾರದ ಮೊದಲಲ್ಲಿ ಧನಲಾಭ ಇದೆ. ಆರರಲ್ಲಿ ಸೂರ್ಯ ಕೂಡ ನಿಮಗೆ ಬಲ ಕೊಡುತ್ತಾನೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಈಗ ಸುಲಭವಾಗಿ ಆಗುತ್ತದೆ. 

ಮಕರ ರಾಶಿ : ಚೂಪಾದ ಆಯುಧದಿಂದ ದೇಹಕ್ಕೆ ಗಾಯವಾಗುವ ಸಾಧ್ಯತೆ ಇದೆ. ಹರಿತವಾದ ವಸ್ತುಗಳಿಂದ ದೂರವಿರಿ. ಹೊಸ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆ ಇದೆ.‌ ನೀವು ದೇವರಿಗೆ ಜಪತಪ ಮಾಡಬೇಕು. ಮನಸ್ಸಿಗೆ ಕಳವಳ ಇರುತ್ತದೆ. ದುರ್ಗೆಯ ಜಪ ಮಾಡಿ. ಸೂರ್ಯ ಆರನೆ ಮನೆಗೆ ಪ್ರವೇಶವಾದಾಗ ನಿಮಗೆ ಶುಭಫಲಗಳು ಸಿಗುತ್ತದೆ.

ಕುಂಭ ರಾಶಿ : ಈಗ ನಿಮಗೆ ಸಂಪೂರ್ಣ ಗುರುಬಲ ಇಲ್ಲದೆ ಇದ್ದರೂ ರಾಹು ಬಲ ಇದೆ. ಇದು ಧೈರ್ಯಸ್ಥೈರ್ಯವನ್ನು ತುಂಬುತ್ತದೆ.‌ ಸಾಡೆಸಾತಿ ಶನಿಯ ಮಧ್ಯಭಾಗದಲ್ಲಿ ಇದ್ದೀರಿ. ಆದ್ದರಿಂದ ಕೊಂಚ ಇರಿಸುಮುರಿಸು ಇರುತ್ತದೆ. ಧೃತಿಗೆಡಬೇಡಿ.‌ ನಿಮ್ಮ ಕೆಲಸ ನೀವುಪ್ರಾಮಾಣಿಕವಾಗಿ ಮಾಡಿಕೊಂಡು‌ಹೋಗಿ.‌ 

ಮೀನ ರಾಶಿ :ಈಗ ನಿಮಗೆ ಗುರುಬಲ ಇದೆ. ಸೂರ್ಯನ ಬಲ ಇದೆ ಶುಕ್ರನ ಬಲ‌ ಇದೆ. ಶನಿ 12ನೇ ಮನೆಯಲ್ಲಿ ಇರುವುದರಿಂದ ಖರ್ಚು ಹೆಚ್ಚಾದರೂ ಈಗ ಕೊಂಚ ತಂಗಾಳಿ ಬೀಸುತ್ತಿರುತ್ತದೆ. ಧೈರ್ಯವಾಗಿ ಮುನ್ನುಗ್ಗಿ ಕೆಲಸ ಸಾಧಿಸುತ್ತೀರಿ. ಪ್ರಿಯ ಮಿತ್ರರನ್ನು ಭೇಟಿ ಮಾಡುತ್ತೀರಿ. ವಿಹಾರ ತಾಣಗಳಿಗೆ ಹೋಗುತ್ತೀರಿ.

Leave a Comment