Coastal Bulletin

ಮೇಷ ನಿಮ್ಮ ಸಂಬಂಧಗಳ ಗಟ್ಟಿತನವನ್ನು ಕಾಣಬಹುದು. ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾದ ಸಂದರ್ಭವಿದೆ. ಆರೋಗ್ಯದಲ್ಲಿ ಹೆಚ್ಚು ಚೇತರಿಕೆಯನ್ನು ಕಾಣಬಹುದು.

ವೃಷಭ

ನಿತ್ಯ ವ್ಯವಹಾರಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಬಹಳ ಶ್ರಮವಹಿಸಿ ಮಾಡಿದ್ದ ಕೆಲಸಗಳಿಗೆ ಈಗ ಪ್ರತಿಫಲ ಬರುತ್ತದೆ. ಹಿರಿಯ ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. 

ಮಿಥುನ

ಈ ದಿನದ ಉತ್ತಮವಾಗಿರುತ್ತದೆ. ದೂರ ಪ್ರಯಾಣದ ಸಾಧ್ಯತೆಗಳು ಇರುತ್ತವೆ. ಹಣದ ಹರಿವು ಉತ್ತಮವಾಗಿರುತ್ತವೆ. ಸರ್ಕಾರಿ ಕೆಲಸಕಾರ್ಯಗಳು ಸರಾಗವಾಗಿ ನಡೆಯುತ್ತವೆ. ವಿದ್ಯಾರ್ಥಿಗಳು ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಕೊಂಚ ಅನಾರೋಗ್ಯ ಕಾಡಬಹುದು. ವೃತ್ತಿಯಲ್ಲಿ ಹಿತಶತ್ರುಗಳು ಹೆಚ್ಚಾಗಬಹುದು.

ಕಟಕ

ಕೃಷಿ ಕಾರ್ಯದಲ್ಲಿ ಇರುವವರಿಗೆ ಅತ್ಯಂತ ತುರುಸಿನ ಕಾರ್ಯಗಳು ಎದುರಾಗಬಹುದು. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟ ಮಿತ್ರರ ಆಗಮನದಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರವಾಗುವ ಸಾಧ್ಯತೆಗಳಿವೆ.

ಸಿಂಹ

ಮಹಿಳೆಯರಿಗೆ ಸಂಭ್ರಮಪಡುವ ಅವಕಾಶಗಳು ಹೆಚ್ಚಾಗುತ್ತವೆ. ಒಡಹುಟ್ಟಿದವರೊಂದಿಗೆ ಬೆರೆತು ಸಂತೋಷಪಡುವಿರಿ. ಪ್ರತಿಸ್ಪರ್ಧಿಗಳ ಸವಾಲನ್ನು ನೋಡಿ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಕನ್ಯಾ

ಬ್ಯಾಂಕ್ ನೌಕರರಿಗೆ ಅಭಿವೃದ್ಧಿಯ ಪಥ ಇರುತ್ತದೆ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿರುವವರಿಗೆ ಸಾಮಾನ್ಯ ಮುನ್ನಡೆ ಇರುತ್ತದೆ. ಪತ್ರಿಕಾ ಪ್ರತಿನಿಧಿಗಳಿಗೆ ಉತ್ತಮ ಮಾನ್ಯತೆ ದೊರೆಯುತ್ತದೆ. ಕೃಷಿಕರಿಗೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಆದಾಯವು ಇರುತ್ತದೆ. ಸ್ಥಿರಾಸ್ತಿ ಖರೀದಿ ಬಗ್ಗೆ ಚಿಂತಿಸಿ ಮುನ್ನಡೆಯಬಹುದು. 

ತುಲಾ

ರಾಯಭಾರ ಕಚೇರಿಯಲ್ಲಿ ಇರುವವರೆಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ರತ್ನ ವ್ಯಾಪಾರಿಗಳಿಗೆ ವ್ಯವಹಾರ

ವಿಸ್ತರಣೆಯಾಗುವ ಯೋಗವಿದೆ. ಗುಡಿ ಕೈಗಾರಿಕೆಯವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಭೂ ವ್ಯವಹಾರಗಳಲ್ಲಿ ಸ್ವಲ್ಪ ಲಾಭ ಬರುತ್ತದೆ.

ವೃಶ್ಚಿಕ

ಹೊಸ ಹೊಸ ಹೂಡಿಕೆಯಲ್ಲಿ ಹಣ ಹೂಡುವಂತೆ ಪ್ರೇರೆಪಿಸಲು ಜನರು ಬರುತ್ತಾರೆ. ಆದರೆ ಸರಿಯಾಗಿ ವಿಚಾರ ಮಾಡಿ ಹಣ ಹೂಡಿಕೆ ಮಾಡಿರಿ. ಮನೆಯಲ್ಲಿ ರಂಪಾಟಗಳು ಹೆಚ್ಚಾಗುವ ಸಾಧ್ಯತೆ ಇದೆ, ತಾಳ್ಮೆಯಿಂದ ಇದ್ದಲ್ಲಿ ಎಲ್ಲವೂ ಸರಿಯಾಗುತ್ತದೆ. ಚಿಲ್ಲರೆ ತರಕಾರಿಯನ್ನು ಮಾರುವವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

ಧನು

ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ದೂರಾಗುತ್ತವೆ. ಲೇವಾದೇವಿ ವ್ಯವಹಾರಗಳು ಸದ್ಯಕ್ಕೆ ಬೇಡ.ಪಾಲುದಾರಿಕೆ ವ್ಯವಹಾರವನ್ನು ಮುಂದುವರೆಸ ಬಹುದು. ಬಂಧುಗಳು ನಿಮ್ಮನ್ನು ನೋಡಿ ಅಸೂಯೆ ಪಡುವರು.

ಮಕರ

ಹಿರಿಯ ಅಧಿಕಾರಿಗಳ ಭೇಟಿಯಿಂದ ಮುಂದೂಡಲ್ಪಡುತ್ತದೆ ಕೆಲವು ಕೆಲಸಗಳು ಆಗುತ್ತವೆ. ಕುಶಲಕರ್ಮಿಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗುತ್ತದೆ. ನವೀನ ರೀತಿಯ ಗೃಹ ನಿರ್ಮಾಣಕ್ಕೆ ಚಾಲನೆಯನ್ನು ನೀಡುವಿರಿ.ತೆರಿಗೆತಜ್ಞರಿಗೆ ಬೇಡಿಕೆಹೆಚ್ಚಾಗಿಆದಾಯವು ಸಹ ಹೆಚ್ಚುತ್ತದೆ. 

ಕುಂಭ

ಪ್ರೇಮಿಗಳು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ಹಿರಿಯರ ಮಾತನ್ನು ಧಿಕ್ಕರಿಸುವುದರಿಂದ ನಿಮಗೆ ಹಾನಿಯಾಗಬಹುದು. ವಿದ್ಯಾರ್ಥಿಗಳು ಹೆಚ್ಚಿನ ಏಕಾಗ್ರತೆಯನ್ನು ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕು. ಹೋಟೆಲ್ ಉದ್ಯಮಿಗಳಿಗೆ ಸ್ವಲ್ಪಮಟ್ಟಿನ ಆದಾಯ ಏರಿಕೆ ಆಗಲಿದೆ.

ಮೀನ

ಕೆಲವರಿಗೆ ಉದ್ಯೋಗದಲ್ಲಿ ಪದೋನ್ನತಿ ದೊರೆಯುವ ಸಾಧ್ಯತೆ ಇದೆ. ಬಂಗಾರದ ವಸ್ತುಗಳನ್ನು ಕೊಳ್ಳಲು ಉತ್ಸಾಹ ತೋರುವಿರಿ. ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಅಗ್ನಿಅವಘಡಗಳು ಕಾಡುವ ಸಾಧ್ಯತೆಗಳಿವೆ. ನಿಮ್ಮ ಕೆಲವು ಕೆಲಸಗಳಿಗೆ ಅನಿರೀಕ್ಷಿತ ಅಡೆತಡೆ ಆಗಬಹುದು

Leave a Comment