Coastal Bulletin

ಮೇಷ ಪಾರಂಪರಿಕವಾಗಿ ನಡೆದು ಬಂದ ವ್ಯವಹಾರಗಳನ್ನು ಬಿಡುವುದು ಬೇಡ. ಸಿನಿಮಾ ರಂಗದವರಿಗೆ ಉತ್ತಮ ಅವಕಾಶಗಳು ದೊರೆತು ಹೆಚ್ಚು ಸಂಪಾದನೆ ಹಾಗೂ ಹೆಸರು ಬರುತ್ತದೆ. ಪಶುಪಕ್ಷಿಗಳಿಗೆ ಆಹಾರ ನೀಡಬೇಕೆಂಬ ಹಂಬಲ ಉಂಟಾಗಿ ಅದನ್ನು ಕಾರ್ಯಗತ ಮಾಡುವಿರಿ.

ವೃಷಭ

ಕುಟುಂಬದ ಸದಸ್ಯರೊಡನೆ ಆರ್ಥಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಯಾವುದೇ ರೀತಿಯ ಮಾತುಕತೆಯಲ್ಲಿ ನಿಧಾನವಾಗಿ ವ್ಯವಹರಿಸಿದಲ್ಲಿ ನಿಮ್ಮ ಕಾರ್ಯಗಳು ಆಗುವವು. 

ಮಿಥುನ

ಕುಟುಂಬದ ಸದಸ್ಯರಿಂದಲೇ ಸಣ್ಣಪುಟ್ಟ ವಿರೋಧಗಳನ್ನು ಕಾಣಬಹುದು. ಎಲ್ಲರೊಂದಿಗೂ ಸೌಹಾರ್ದಯುತವಾಗಿ ಮಾತನಾಡಿದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮೆಲ್ಲಾ ಕೆಲಸಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದು. 

ಕಟಕ

ಬೇರೆಯವರ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಆರ್ಥಿಕ ಸ್ಥಿತಿಯು ಪ್ರಗತಿಯನ್ನು ಕಾಣುತ್ತದೆ. ಹಿತಶತ್ರುಗಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿಮ್ಮ ಉಪಕಾರಿ ಗುಣವನ್ನು ಕೆಲವರು ದುರುಪಯೋಗ ಮಾಡಿಕೊಳ್ಳಬಹುದು. 

ಸಿಂಹ

ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರುತ್ತದೆ. ಉದ್ಯೋಗದಲ್ಲಿ ಮೇಲೇರುವ ಸಾಧ್ಯತೆ ಇದೆ. ಕರಕುಶಲ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಬರುತ್ತದೆ. 

ಕನ್ಯಾ

ವೃತ್ತಿಯಲ್ಲಿ ಅತಿಯಾದ ಒತ್ತಡ ಕಾಣಿಸಿದರೂ ಸ್ನೇಹಿತರ ಸಹಕಾರದಿಂದ ನಿರಾಳವಾಗುತ್ತದೆ. ಚಿಕ್ಕಮಕ್ಕಳ ಯೋಗಕ್ಷೇಮದ ಬಗ್ಗೆ ಹೆಚ್ಚು ಗಮನವಿರಲಿ. ಅನಿವಾರ್ಯ ಬದಲಾವಣೆಗೆ ಒಳಗಾಗಿ ಇದ್ದದ್ದನ್ನು ಕಳೆದುಕೊಳ್ಳುವುದರ ಜೊತೆಗೆ ನಿಮ್ಮತನವನ್ನು ಕಳೆದುಕೊಳ್ಳಬೇಡಿ.

ತುಲಾ

ಯಾವುದೇ ಯೋಜನೆಯನ್ನು ರೂಪಿಸುವ ಮುನ್ನ ಅದರ ಬಗ್ಗೆ ಅವಲೋಕನ ಬಹಳ ಅಗತ್ಯ. ಮಿತ್ರರ ನೇತೃತ್ವದಲ್ಲಿ ವ್ಯವಹಾರ ಸುಗಮವಾಗಿ ನಡೆಯುತ್ತದೆ. ಯಾವುದೋ ಒಂದು ಸ್ಥಾನವನ್ನು

ಪಡೆಯಲು ತಂತ್ರಗಾರಿಕೆ ನಡೆಸಿ ಅದರಲ್ಲಿ ಸಫಲತೆಯನ್ನು ಕಾಣುವಿರಿ.

ವೃಶ್ಚಿಕ

ನೌಕಾಯಾನದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸಮಯ. ಸಮಾಜ ಸೇವಕರು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಕೆಲಸ ಮಾಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಹೆಚ್ಚು ತಗಾದೆ ಉಂಟಾಗಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಧನು

ಆದಾಯದಲ್ಲಿ ಸ್ಥಿರತೆಯನ್ನು ಕಾಣಬಹುದು. ಹೊಸ ಆದಾಯ ತರುವ ಮಾರ್ಗದ ಬಗ್ಗೆ ಆಲೋಚನೆ ಮಾಡುವಿರಿ. ಪರಿಸರವಾದಿಗಳಿಗೆ ಹೆಚ್ಚಿನ ಬೆಲೆ ಮತ್ತು ಗೌರವ ದೊರೆಯುತ್ತದೆ. ಸ್ವಯಂ ಉದ್ಯೋಗ ಮಾಡುವವರು ಉತ್ತಮ ಆದಾಯದ ನಿರೀಕ್ಷೆ ಮಾಡಬಹುದು.

ಮಕರ

ಆದಾಯದ ಹೊಸ ದಾರಿ ಗೋಚರವಾಗುವ ಸಾಧ್ಯತೆ ಇದೆ. ಖರ್ಚನ್ನು ಸಾಕಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಯಂತ್ರಾಗಾರಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿ ಇರುವಿರಿ.

ಕುಂಭ

ಬಂಧುಗಳು ನಿಮಗೆ ಕಿರಿಕಿರಿ ಮಾಡಿದರೂ ದೈವಕೃಪೆಯಿಂದ ನೀವು ಪಾರಾಗುವಿರಿ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಅನುಕೂಲ ದೊರೆಯುತ್ತದೆ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಸಹಾಯ ದೊರೆಯುತ್ತದೆ. 

ಮೀನ

ಬ್ಯಾಂಕಿನಿಂದ ಹಣಕಾಸು ಸಹಾಯದ ನಿರೀಕ್ಷೆಯಲ್ಲಿರುವ ನಿಮಗೆ ಈ ಸಹಾಯ ಒದಗಿಬರುತ್ತದೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಸಂಗಾತಿಯ ಧೋರಣೆ ಕೆಲವೊಮ್ಮೆ ನಿಮಗೆ ಬೇಸರ ತರಿಸಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. 

Leave a Comment