ಕೊಲ್ಲೂರು ಸಹಿತ ವಿವಿಧ ದೇವಸ್ಥಾನದಲ್ಲಿ ಈ ಹಿಂದೆ ಸಲಾಂ ಮಂಗಳಾರತಿ ಎಂಬ ಹೆಸರಿನಲ್ಲಿ ಸೇವೆಗಳು ನಡೆಯುತ್ತಿದ್ದು, ಆದರೆ ಹೆಸರು ಬದಲಾಯಿಸಲು ರಾಜ್ಯ ಧಾರ್ಮಿಕ ಪರಿಷತ್ತು ತೀರ್ಮಾನಿಸಿದೆ ಎಂದು ಅದರ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಹಿಂದೆ ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ತನ್ನ ಆಡಳಿತಕ್ಕೆ ಒಳ್ಳೆಯದಾಗಲೆಂದು ಸಲಾಂ ಮಂಗಳಾರತಿ ಹೆಸರಲ್ಲಿ ಸೇವೆ ಮಾಡಿಸಿಕೊಳ್ಳುತ್ತಿದ್ದ. ಆದರೆ ಆ ಪದ್ಧತಿ ಹಾಗೆಯೇ ಮುಂದುವರಿಯಿತು. ಇದು ಕೇವಲ ರಾಜ್ಯಾಡಳಿತಕ್ಕಷ್ಟೇ ಮಾತ್ರವಲ್ಲದೇ, ಪ್ರಜೆಗಳಿಗೂ ಒಳಿತಾಗಲೆಂದು ಹಾಗೂ ಸಲಾಂ
ಪದದ ಬದಲಾಗಿ ನಮಸ್ಕಾರ ಎಂಬ ಹೆಸರನ್ನು ಇಟ್ಟುಕೊಂಡು ಆ ಸೇವೆ ನಡೆಸಲಾಗುವುದು ಎಂದು ಹೇಳಿದರು.
ಮುಜರಾಯಿ ಎಂಬ ಶಬ್ದ ನಮ್ಮದಲ್ಲ ಎಂದು ಹೇಳಿದ ಭಟ್, ಇನ್ನು ಮುಂದೆ ಧಾರ್ಮಿಕ ಸಂಸ್ಥೆಗಳು ಧರ್ಮದಾಯದತ್ತಿ ಎಂಬ ಹೆಸರಲ್ಲೇ ಇಲಾಖೆಯನ್ನು ಸಂಬೋಧಿಸಬೇಕು ಎಂದು ತೀರ್ಮಾನವನ್ನು ರಾಜ್ಯ ಧಾರ್ಮಿಕ ಪರಿಷತ್ತು ಕೈಗೊಂಡಿದೆ.















